fbpx
ದೇವರು

ಇಂದು 23 ನೇ ತಾರೀಖು ಸೀತಾ ಪಂಚಮಿ ಮದುವೆಗೆ ಸರಿಯಾದ ವಧು /ವರ ಸಿಗುತ್ತಿಲ್ಲ ಅನ್ನುವವರು ಈ ಸುಲಭವಾದ ಉಪಾಯಗಳನ್ನು ಮಾಡಿ ಕಂಕಣ ಭಾಗ್ಯ ಪಡ್ಕೊಳ್ಳಿ

23 ನೇ ತಾರೀಖು ಗುರುವಾರ ಸೀತಾ ಪಂಚಮಿಯ ದಿನ ಈ  ಮಹಾ ಸಂಯೋಗ ಮತ್ತೆ ಬರುವುದಿಲ್ಲ. ಈ ಕೆಲವು ಉಪಾಯಗಳನ್ನು ಇ೦ದಿನ ದಿನವೇ ಅವಶ್ಯವಾಗಿ ಪ್ರಾರಂಭಿಸಿ ಮಾಡಿರಿ

ನಾಳೆ ಗುರುವಾರ ಮತ್ತು ವಿವಾಹ ಪಂಚಮಿ. ಇದನ್ನು ಸೀತಾ ಪಂಚಮಿ ಎಂದು ಸಹ ಕರೆಯಲಾಗುತ್ತದೆ .ಈ ಮಹಾ ಸಂಯೋಗದ ದಿನ ದೀಪದಲ್ಲಿ ಈ ವಸ್ತುವನ್ನು ಹಾಕಿ ಬೆಳಗಿಸಿದರೆ ನಿಮಗೂ ಕೂಡ ನಿಮ್ಮ ಬಾಳ ಸಂಗಾತಿಯೂ ಜೋಡಿಯಾಗುವರು.

ನಿಮಗೆ ನಿಮ್ಮ ಮದುವೆ ತಡವಾಗುತ್ತಿದ್ದರೆ.. ಮದುವೆಗೆ ಅನೇಕ ಅಡಚಣೆಗಳು ಬರುತ್ತಿದ್ದರೆ. ಅಂತಹವರು ಈ ಒಂದು ಉಪಾಯವನ್ನು ನವಂಬರ್ 23ನೇ ತಾರೀಖಿನಂದು ಗುರುವಾರದ ದಿನ ಮಾಡಿರಿ. ಈ ದಿನವನ್ನು ವಿವಾಹ ಪಂಚಮಿ ಎಂದು ಕರೆಯಲಾಗುತ್ತದೆ. ಹಾಗೆ ಈ ದಿನವನ್ನು ಸೀತಾ ಪಂಚಮಿ ಎಂದು ಕೂಡ ಕರೆಯಲಾಗುತ್ತದೆ.
 

ಸೀತಾ ಪಂಚಮಿ ಎಂದು ಏಕೆ ಕರೆಯುತ್ತಾರೆ ?

 

ಶ್ರೀರಾಮ ಮತ್ತು ಸೀತಾ ದೇವಿಯು ವಿವಾಹವು ಸಹ ಇದೇ ದಿನ ನೆರವೇರುವುದರಿಂದ ಈ ದಿನವನ್ನು ಸೀತಾ ಪಂಚಮಿ ಎಂದು ಸಹ ಕರೆಯಲಾಗುತ್ತದೆ. ಆದರೆ ಈ ದಿನ ಯಾರೂ ಸಹ ವಿವಾಹವಾಗಬಾರದು.ಯಾಕೆಂದರೆ ಸೀತಾ ದೇವಿ  ಮತ್ತು ಶ್ರೀರಾಮನು ವಿವಾಹವಾಗಿರುವ ಈ ದಿನ  ಅವರ ಸಾಂಸಾರಿಕ ಜೀವನದಲ್ಲಿ ಅವರು ಅನೇಕ ತೊಂದರೆಗಳನ್ನು ಎದುರಿಸಿದರು. ಆದ್ದರಿಂದ ಈ ದಿನ ವಿವಾಹವಾಗುವುದು ಅಷ್ಟು ಶ್ರೇಯಸ್ಕರವಲ್ಲ. ಈ ಶ್ರೀರಾಮ ಸೀತೆಯ ವಿವಾಹವಾಗುವ ಸಮಯದಲ್ಲಿ ಆಕಾಶದಿಂದ ದೇವಾನು ದೇವತೆಗಳು ಸಹ ಅವರಿಗೆ ಪುಷ್ಪವನ್ನು ಅರ್ಪಿಸಿದರು.

ನಿಮ್ಮ ವಯಸ್ಸು ಜಾಸ್ತಿಯಾಗಿದ್ದರೆ, ಅನೇಕ ಸಮಸ್ಯೆಗಳು ವಿವಾಹಕ್ಕೆ ಎದುರಾಗುತ್ತಿದ್ದರೆ, ಈ ದಿನ ಇದೊಂದು ಉಪಾಯವನ್ನು ಮಾಡಿ ನೋಡಿ ಅವಿವಾಹಿತರಿಗೆ ವಿವಾಹದ ಯೋಗ ಕೂಡಿ ಒದಗಿ ಬರುವುದು ಅಥವಾ ವಿವಾಹವಾಗಿರುವವರಿಗೆ ತಮ್ಮ ಜೀವನದಲ್ಲಿ ಅನೇಕ ಅಡಚಣೆಗಳನ್ನು ಎದುರಿಸುತ್ತಿದ್ದರೆ.. ಮತ್ತು ತೊಂದರೆಗಳನ್ನು ಎದುರಿಸುತ್ತಿದ್ದರೆ.. ಅಂತಹವರು ಈ ಉಪಾಯವನ್ನು ಪಾಲಿಸಬೇಕು.

 

 

ಎಲ್ಲಕ್ಕಿಂತ ಮೊದಲು ನಿಮ್ಮ ಮನೆಯಲ್ಲಿ ಶ್ರೀರಾಮ ಮತ್ತು ಸೀತಾ ದೇವಿಯ ಫೋಟೋ ಇದ್ದರೆ ಅಥವಾ ಮೂರ್ತಿ ಇದ್ದರೆ ಅದಕ್ಕೆ ನಾಳೆ ಗುರುವಾರದ ದಿನ ಪೂಜೆ ಮಾಡಬೇಕು. ಮೊದಲು ಪಂಚೋಪಚಾರದ ಪೂಜೆಯನ್ನು ಮಾಡಬೇಕು. ಅಂದರೆ ಧೂಪ, ದೀಪ, ನೈವೇದ್ಯ, ಆರತಿ ,ಪುಷ್ಪ, ಹಣ್ಣುಗಳನ್ನು ಸಮರ್ಪಿಸಬೇಕು. ನಂತರ ಷೋಡಶೋಪಚಾರ ಪೂಜೆಯನ್ನು ಸಹ ಮಾಡಬೇಕು.

ತಾಜಾ ಹಸುವಿನ ಶುದ್ಧ ತುಪ್ಪದಲ್ಲಿ ಸ್ವಲ್ಪ ಹರಿಶಿಣವನ್ನು ಮಿಶ್ರಣ ಮಾಡಿ ಇದರಿಂದ ದೀಪವನ್ನು ಪ್ರಜ್ವಲವಾಗಿ ಬೆಳಗಿಸಬೇಕು. ಶ್ರೀರಾಮ ಮತ್ತು ಸೀತಾ ದೇವಿಯ ಫೋಟೋದ ಮುಂದೆ ಬೆಳಗಿಸಬೇಕು. ನಂತರ ಚಂದನದ ಧೂಪವನ್ನು ಹಚ್ಚಿಡಬೇಕು.

 

 

ಏಳು ಹರಿಶಿನದ ಬೋಟುಗಳನ್ನು ಮತ್ತು ಸ್ವಲ್ಪ ಸಿಂಧೂರವನ್ನು ಮಿಶ್ರಣ ಮಾಡಿ ಶ್ರೀರಾಮ ದೇವರಿಗೆ ಮತ್ತು ಸೀತಾ ದೇವಿಗೆ ಅರ್ಪಿಸಬೇಕು. ಹರಿಶಿನದ  ಬಣ್ಣದ ಮತ್ತು ಕೆಂಪು ಬಣ್ಣದ ಹೂವುಗಳನ್ನು ಅರ್ಪಿಸಿ, ಬೆಲ್ಲ ಮತ್ತು ಬೇಳೆಯಿಂದ ಮಾಡಿದ ಸಿಹಿ ತಿಂಡಿಯನ್ನು ನೈವೇದ್ಯವಾಗಿ ಅರ್ಪಿಸಬೇಕು.

ಹಳದಿ ಚಂದನದ ಮಾಲೆಯನ್ನು ಹಿಡಿದು ಕೈಯಲ್ಲಿ ನೀವು ಈ ಮಂತ್ರವನ್ನು ಜಪಿಸಬೇಕು. ಆ ಮಂತ್ರ ಹೀಗಿದೆ “ ಓಂ ಜಾನಕೀ ವಲ್ಲಭಾಯ ನಮಃ” .

ಪೂಜೆ ಎಲ್ಲವೂ ಮುಗಿದ ನಂತರ ಆರತಿ ಮಾಡಿ ನೈವೇದ್ಯವಾಗಿ ಅರ್ಪಿಸಿದ  ಪ್ರಸಾದವನ್ನು ಪ್ರಸಾದದ ರೂಪದಲ್ಲಿ ಎಲ್ಲರಿಗೂ ವಿತರಿಸಿ ನೀವು ಸಹ ಸೇವಿಸಬೇಕು.

ಈ ಪೂಜೆಯನ್ನು ಮಾಡಲು ಶುಭ ಸಮಯ ಬೆಳ್ಳಗೆ 11.42  ನಿಮಿಷಗಳಿಂದ  12.42 ನಿಮಿಷಗಳವರೆಗೆ ಇದೆ, ಸಂಜೆ 6 ರಿಂದ 6 .45 ಕ್ಕೆ ಇದೆ .

 

 

ನಂತರ ಆರತಿ ಮಾಡಿ ಹರಿಶಿಣದ ಬೋಟು ಮತ್ತು ಸಿಂಧೂರವನ್ನು ಶ್ರೀರಾಮ ಸೀತಾ ದೇವಿಯ ಮುಂದೆ ಅರ್ಪಿಸಿದ ಹರಿಶಿಣದ ಬೋಟು ಮತ್ತು ಸಿಂಧೂರವನ್ನು ಒಂದು ಹಳದಿ ಬಣ್ಣದ ಬಟ್ಟೆಯಲ್ಲಿ ಕಟ್ಟಿ ನೀವು ಮಲಗುವ ಸ್ಥಳ ಅಥವಾ ಕೋಣೆಯಲ್ಲಿ ಅಥವಾ ಹಾಸಿಗೆಯ ಕೆಳಗೆ ಅಥವಾ ತಲೆದಿಂಬಿನ ಕೆಳಗೆ ಇಟ್ಟುಕೊಳ್ಳಬೇಕು. ಇಲ್ಲವೆಂದರೆ ಒಂದು ಮೇಜಿನ ಮೇಲೆ ಸುರಕ್ಷಿತವಾಗಿ ಇಡಬೇಕು.

ನಿಮ್ಮ ಮದುವೆ ಆಗುತ್ತಿಲ್ಲವೆಂದರೆ ನೀವು ಸತತವಾಗಿ ಪ್ರಯತ್ನಿಸುತ್ತಿದ್ದರೂ ಸಹ ಯಾವುದೇ ಒಳ್ಳೆಯ ಶುಭ ಸಮಾಚಾರ ಸಿಗುತ್ತಿಲ್ಲವೆಂದರೆ. ನಾಳೆ  ವಿವಾಹ ಪ೦ಚಮಿಯ ಗುರುವಾರದ ದಿನದಿಂದ ಪ್ರಾರಂಭಿಸಿ ಸತತವಾಗಿ 43  ಗುರುವಾರದ ದಿನಗಳು ಕೇಸರಿಯ ಒಂದು ಅಥವಾ ಎರಡು ಪತ್ರೆಯನ್ನು ಅರ್ಪಿಸಬೇಕು. ಶ್ರೀರಾಮ ಮತ್ತು ಸೀತಾ ದೇವಿಗೆ ಪ್ರತಿದಿನ ಬೆಳಗ್ಗೆ ಅರ್ಪಿಸಬೇಕು .ನಂತರ ಅದನ್ನು ಮಾರನೇ ದಿನ ತೆಗೆದುಕೊಂಡು ನಿಮ್ಮ ಹಣೆಯಲ್ಲಿರುವ ಆಜ್ಞಾ ಚಕ್ರದ ಮೇಲೆ ಕೇಸರಿಯನ್ನು ಹಚ್ಚಿಕೊಳ್ಳಬೇಕು. ಗಮನದಲ್ಲಿಟ್ಟುಕೊಳ್ಳಿ ನೀವು ಹುಡುಗಿ ಅಥವಾ ಹುಡುಗನನ್ನು ನೋಡಲು ಹೋಗುತ್ತಿದ್ದರೆ ಅವಶ್ಯವಾಗಿ ಈ ಕೇಸರಿಯನ್ನು ಹಣೆಗೆ ಹಚ್ಚಿಕೊಂಡು ಹೋಗಿ.

 

 

ಕಾಲಿನ ಪಾದಗಳಿಗೆ ಹಚ್ಚಿಕೊಳ್ಳುವ  ಕೆಂಪು ಬಣ್ಣ ಬರುತ್ತದೆ. ಅದು ನಿಮಗೆ ದೊಡ್ಡ ಬಾಟಲಿಯಲ್ಲಿ ಅಂಗಡಿಗಳಲ್ಲಿ ಸಿಗುತ್ತದೆ. ಅದನ್ನು ತೆಗೆದುಕೊಂಡು ಅರ್ಪಿಸಿದರೂ ಸಹ ಇದೇ ರೀತಿ 43  ಗುರುವಾರದ ದಿನಗಳು ಮಾಡಿದರೆ ಫಲ ಸಿಗುವುದು.

ಇನ್ನೊಂದು ಪರಿಹಾರವಿದೆ  ನೀವೇ ತಾಜಾ ವೀಳ್ಯದೆಲೆಯನ್ನು ತೆಗೆದುಕೊಂಡು. ಅವು ಹಸಿರು ಬಣ್ಣದಲ್ಲಿ ಇರಬೇಕು, ಎಲ್ಲಿಯೂ ಹರಿದು ಅಥವಾ ಮುರಿದು ಅಥವಾ ಒಣಗಿ ಹೋಗಿರಬಾರದು. ಮೊದಲು ನೀರಿನಲ್ಲಿ ಚೆನ್ನಾಗಿ ಶುಭ್ರಗೊಳಿಸಿಕೊಳ್ಳಬೇಕು. ನಂತರ ಒಂದು ಅಡಕೆಯ  ಉ೦ಡೆಯನ್ನು ಇಟ್ಟು ಒಂದು ಹರಿಶಿನದ ಬೋಟನ್ನು ತೆಗೆದುಕೊಂಡು ಶಿವನ ದೇವಸ್ಥಾನಕ್ಕೆ ಹೋಗಿ.

ಅಲ್ಲಿ ಗೌರಿ ಮಾತೆಯ ಮುಂದೆ ಅರ್ಪಿಸಬೇಕು. ಶಿವ ಮತ್ತು ಗೌರಿಗೆ ಮದುವೆ ಮಾಡಿಸಬೇಕು ಅಂದರೆ ನಾಲ್ಕು ಬಾರಿ ಪ್ರದಕ್ಷಿಣೆ ಹಾಕಿ ನಂತರ ತಾಳಿಯ ರೀತಿಯಲ್ಲಿ ಅರಿಶಿಣದ ಬೋಟಿನ ಮತ್ತು ದಾರವನ್ನು ಕಟ್ಟಬೇಕು. ಹಿಂದೆ ತಿರುಗಿ ನೋಡದೆ ಮನೆಗೆ ಸೀದಾ  ಮರಳಿ  ಬರಬೇಕು ಹೀಗೆ ಸತತವಾಗಿ ವಿವಾಹ ಪ೦ಚಮಿಯ ದಿನ ನಾಳೆಯಿಂದ 43 ಗುರುವಾರದ ದಿನಗಳು ಮಾಡಿದರೆ ನಿಮ್ಮ ವಿವಾಹವಾಗುವುದು.

ಈ ಕೆಲವು ಉಪಾಯಗಳನ್ನು ಪಾಲಿಸಿ ನೋಡಿ ನಿಮ್ಮ ವಿವಾಹದ ತೊಂದರೆಗಳು ಕಡಿಮೆಯಾಗಿ ವಿವಾಹವೂ ನೆರವೇರಲು ಸಹಾಯವಾಗಬಹುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top