fbpx
ಭವಿಷ್ಯ

ನವೆಂಬರ್ 24 ನೇ  ತಾರೀಖು ಬುಧಗ್ರಹ ವೃಶ್ಚಿಕ ರಾಶಿಯಿಂದ  ಧನಸ್ಸು ರಾಶಿಗೆ ಪ್ರವೇಶ ಮಾಡುತ್ತೆ ಇದರಿಂದ ಈ 5 ರಾಶಿಗಳಿಗೆ ಅದೃಷ್ಟ ಖುಲಾಯಿಸುತ್ತೆ !

ನವೆಂಬರ್ 24 ನೇ  ತಾರೀಖಿನಂದು  ಬುಧಗ್ರಹವು ರಾಶಿ ಪರಿವರ್ತನೆ ಮಾಡಲಿದ್ದು  ಬುಧನು ವೃಶ್ಚಿಕ ರಾಶಿಯಿಂದ  ಧನಸ್ಸು ರಾಶಿಗೆ ಪ್ರವೇಶ ಮಾಡಲಿದ್ದಾನೆ. ಇಲ್ಲಿ ಬುಧನು 2017  ಡಿಸೆಂಬರ್ ಹನ್ನೊಂದನೇ ತಾರೀಖಿನವರೆಗೂ ಸ್ಥಿತನಿರುತ್ತಾನೆ.

 

 

ಜ್ಯೋತಿಷ್ಯಶಾಸ್ತ್ರದಲ್ಲಿ ಬುಧಗ್ರಹವನ್ನು ಬುದ್ಧಿ, ಮಾತು, ವ್ಯವಸಾಯ ಮತ್ತು ದನದ ಕಾರಕನೆ೦ದು ಭಾವಿಸಲಾಗಿದೆ. ಬುಧ ಗ್ರಹದ ಈ ರಾಶಿ ಪರಿವರ್ತನೆಯಿಂದ ನವೆಂಬರ್ 24 ನೆರ ತಾರೀಖಿನ ನಂತರ ಈ ಐದು ರಾಶಿಯವರಿಗೆ ಅದೃಷ್ಟ ಕೂಡಿ ಬರಲಿದೆ. ಈ ಐದು ರಾಶಿಯವರು ಜೀವನದಲ್ಲಿ ಸಂಪೂರ್ಣವಾಗಿ ಪ್ರೀತಿ, ಹಣ ಮತ್ತು ಖುಷಿಯಿಂದ ಬದುಕುವರು.ಇನ್ನುಳಿದ ಏಳು ರಾಶಿಯವರಿಗೆ ಈ ಸಮಯ ಹೆಚ್ಚು ಸಮಾಧಾನದಿಂದ ಇರುವುದು ಒಳ್ಳೆಯದು.

ಬುಧ ಗ್ರಹದ  ಈ ರಾಶಿ  ಪರಿವರ್ತನೆಯಿಂದ ಒಳಿತನ್ನು ಕಾಣುವ ಆ ಐದು ರಾಶಿಗಳೆಂದರೆ  ಮಿಥುನ ರಾಶಿ, ಸಿಂಹ ರಾಶಿ, ಕನ್ಯಾ ರಾಶಿ, ಮಕರ ರಾಶಿ ಮತ್ತು ಮೀನ ರಾಶಿ .

ಮಿಥುನ ರಾಶಿ.

 

 

ಈ ಸಮಯದಲ್ಲಿ ನಿಮಗೆ ನಿಮ್ಮ ಹಣಕಾಸಿನ ಸ್ಥಿತಿ ಹೆಚ್ಚಾಗುವುದು. ನಿಮ್ಮ ಹಣಕಾಸಿನ ಸ್ಥಿತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಅನೇಕ ದಾರಿಗಳು ಕಾಣುವವು.  ಹಣಕಾಸಿನ ಸ್ಥಿತಿಯ ಉತ್ತಮವಾಗುವುದರ  ಜೊತೆಗೆ  ಹಣದ ಉಳಿತಾಯವು ಸಹ ಆಗುವುದು. ಈ ಸಮಯ ನಿಮಗೆ ಹೊಸ ಮನೆ ಮತ್ತು  ಹೊಸ ವಾಹನ ಖರೀದಿಸುವ ಪ್ರಬಲ ಯೋಗವು ಉಂಟಾಗಲಿದ್ದು. ಮನೆಯ ಒಳಗೆ ಸುಖ ,ಶಾಂತಿ ಮತ್ತು ಆನಂದದ ದಿನಗಳು ಇರುತ್ತವೆ. ಪ್ರೇಮ ಸಂಬಂಧದಲ್ಲಿಯೂ ಸಹ ಈ ಸಮಯ ನಿಮಗೆ ಅನುಕೂಲಕರವಾಗಲಿದೆ.

ಸಿಂಹ ರಾಶಿ.

 

ಈ ಸಮಯ ನಿಮಗೆ ಸುಖ, ಶಾಂತಿ ಮತ್ತು ಐಶ್ವರ್ಯವು ಪ್ರಾಪ್ತಿಯಾಗಲಿದೆ. ನಿಮ್ಮ ಗೌರವ ಕೂಡ ಹೆಚ್ಚಾಗುವುದು. ಹೊಸ ವ್ಯಕ್ತಿಗಳ ಜೊತೆಗೆ ನಿಮ್ಮ ಸಂಪರ್ಕ ವೃದ್ಧಿಯಾಗುವುದು. ಅನೇಕ ದಿನಗಳಿಂದ ನಿಂತು ಹೋಗಿದ್ದ ಕೆಲಸ ಈಗ ಪೂರ್ಣವಾಗುವವು. ನಿಮ್ಮ ಆರೋಗ್ಯದ ವಿಷಯದಲ್ಲಿ ನೀವು ಸ್ವಲ್ಪ ಸಮಾಧಾನದಿಂದ ಇದ್ದರೆ ಒಳ್ಳೆಯದು . ಈ ಸಮಯ ನಿಮಗೆ ಹೊಟ್ಟೆಗೆ ಸಂಬಂಧಪಟ್ಟ ಖಾಯಿಲೆಗಳು ಬರುವ ಸಂಭವವಿದೆ.ವಿದ್ಯಾರ್ಥಿಗಳಿಗೆ ಈ ಸಮಯ ಚೆನ್ನಾಗಿದ್ದು ಓದುವುದರಲ್ಲಿ ಮತ್ತು ವೃತ್ತಿಯಲ್ಲಿ ಸಫಲತೆಯನ್ನು ಕಾಣುವಿರಿ.

 ಕನ್ಯಾ ರಾಶಿ.

 

 

ಕೆಲಸ ಮತ್ತು ವ್ಯವಹಾರಗಳಿಗೆ ಇದು ಒಳ್ಳೆಯ ಸಮಯವಾಗಿದೆ. ಈ ಸಮಯದಲ್ಲಿ  ವ್ಯವಹಾರವನ್ನು ಸಹ ವೃದ್ಧಿಸಿಕೊಳ್ಳಬಹುದು ನಿಮಗೆ  ಅದೃಷ್ಟವು ಸಹ  ಸಹಾಯ ಮಾಡುವುದು ಮತ್ತು ನಿಮ್ಮ ಎಲ್ಲಾ ಆಸೆಗಳು ಪೂರ್ತಿಯಾಗುವವು. ನಿಮಗೆ ಬರಬೇಕಾಗಿರುವ ಹಣ ಕೂಡ ತಿರುಗಿ ಬರುವುದು .ಹೊಸ ಆಸ್ತಿ ಮತ್ತು ಜಮೀನು ಖರೀದಿಸುವುದಕ್ಕೂ ಸಹ ಪ್ರಬಲ ಯೋಗವೂ ಈ ಸಮಯದಲ್ಲಿ ಉಂಟಾಗಿದೆ.

 ಮಕರ ರಾಶಿ.

 

ಈ ಸಮಯ ತತಕ್ಷಣವೇ ದೊಡ್ಡದಾಗಿ ಧನಲಾಭವು ಆಗುವುದು. ತುಂಬಾ ದಿನಗಳಿಂದ ಅರ್ಧಕ್ಕೆ ನಿಂತು ಹೋಗಿದ್ದ ಕೆಲಸಗಳು ಈಗ ಪೂರ್ಣವಾಗುತ್ತವೆ. ಹಳೆಯ ಮಿತ್ರರ ಭೇಟಿಯಾಗುವುದರಿಂದ ಅವರಿಂದಲೂ ಕೂಡ ಲಾಭವಿದೆ. ನಿಮ್ಮ ಸಂಪಾದನೆಯ ಜೊತೆಗೆ ಹಣಕಾಸಿನ ಸಂಭಾವನೆ ಹೆಚ್ಚಾಗುವುದು. ವಿದೇಶ ಯಾತ್ರೆಗೆ ಕೂಡ ಪ್ರಬಲ ಯೋಗವಿದೆ. ಪ್ರೀತಿಯ ವಿಷಯದಲ್ಲಿ ಸ್ವಲ್ಪ ಹಿಂದೆ ಮುಂದೆ ಆಗಬಹುದು.

ಮೀನ  ರಾಶಿ .

ಈ ಸಮಯ  ನಿಮ್ಮೊಳಗೆ ಹೊಸ ಹುರುಪು ಮತ್ತು  ಹೊಸ ಧೈರ್ಯ ಮೂಡುವುದು. ಅನೇಕ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಯಾವ ಕೆಲಸ ಬಹುದಿನಗಳಿಂದ ನಿಂತು ಹೋಗಿರುವುದೋ ಅದು ಪೂರ್ಣವಾಗುವುದು. ಸಮಸ್ಯೆಗಳು ದಿನೇ ದಿನೇ ಕ್ರಮೇಣ ಕಡಿಮೆಯಾಗುತ್ತವೆ. ನಿಮಗೆ ಧನಲಾಭವಾಗುವುದು. ವಿದ್ಯಾರ್ಥಿಗಳಿಗೆ ಉನ್ನತಿ ಯಾಗಲಿದೆ.

ಇನ್ನುಳಿದ ಬಾಕಿ ಏಳು ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು  ಆಗುವ ಸಂಭವವಿದೆ ಇದರಿಂದ ಸಮಾಧಾನವಾಗಿರುವುದು ಒಳ್ಳೆಯದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top