fbpx
ಕಿರುತೆರೆ

ಅನಾರೋಗ್ಯದ ಗೂಡಾಯ್ತು ಬಿಗ್’ಬಾಸ್ ಮನೆ: ಅನುಪಮಾ, ಆಚಾರ್ಯ, ಆಶಿತಾಗೆ ಬಂತು ಕಾಯಿಲೆ.

ಅನಾರೋಗ್ಯದ ಗೂಡಾಯ್ತು ಬಿಗ್’ಬಾಸ್ ಮನೆ: ಅನುಪಮಾ, ಆಚಾರ್ಯ, ಆಶಿತಾಗೆ ಬಂತು ಕಾಯಿಲೆ.

 

 

ದಿನೇ ದಿನೇ ಬಿಗ್ ಬಾಸ್ ಮನೆ ಅನಾರೋಗ್ಯದ ಗೂಡಾಗುತ್ತಿದೆ.. ಕೆಲವು ದಿನಗಳ ಹಿಂದ ಜಯ ಶ್ರೀನಿವಾಸನ್ ಮತ್ತು ಕೃಷಿಯವರಿಗೆ ಟಾಸ್ಕ್ ವೇಳೆ ಆರೋಗ್ಯ ಹದಗೆಟ್ಟಿತು. ನೆನ್ನೆಯೂ ಕೂಡ ಟಾಸ್ಕ್ ಮಾಡುವಾಗ ಮೂರು ಜನ ಸ್ಪರ್ಧಿಗಳಿಗೆ ಅರೋಗ್ಯ ಕೈಕೊಟ್ಟಿದೆ. ಕಳೆದ ಎಲ್ಲಾ ಸೀಸನ್ ಗಳಿಗೆ ಹೋಲಿಸಿದರೆ ಈ ಭಾರಿಯ ಬಿಗ್ ಬಾಸ್ ನಲ್ಲಿ ಹೆಚ್ಚು ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.

 

 

ಈ ವಾರ ‘ಬಿಗ್ ಬಾಸ್ ಬೋರ್ಡಿಂಗ್ ಸ್ಕೂಲ್’ ಲಕ್ಷುರಿ ಬಜೆಟ್ ಟಾಸ್ಕ್ ಚಾಲ್ತಿಯಲ್ಲಿದ್ದು, ಇದರಂತೆ ಮನೆಯ ಸದಸ್ಯರೆಲ್ಲಾ ಶಾಲಾ ಮಕ್ಕಳಂತೆ ವೇಷತೊಟ್ಟು ಮಕ್ಕಳಂತೆ ವರ್ತಿಸಬೇಕು.. ಈ ಟಾಸ್ಕ್‌ ಅನ್ವಯ ಮನೆಯ ಎಲ್ಲ ಸದಸ್ಯರು ಶಾಲಾ ಸಮವಸ್ತ್ರಗಳನ್ನು ಧರಿಸಿ, ಶಾಲಾ ಮಕ್ಕಳಂತೆಯೇ ವರ್ತಿಸಬೇಕು. ಶೀತಲ್ ಶೆಟ್ಟಿ ದೈಹಿಕ ಶಿಕ್ಷಕಿಯಾಗಿ ಮನೆಗೆ ಬಂದಿದ್ದರು.

 

 

ಟಾಸ್ಕ್ ನಲ್ಲಿ ವ್ಯಾಯಾಮ ಮಾಡಿಸುತ್ತಿರುವಾಗ ಅನುಪಮಾ ಗೆ ಉಸಿರಾಟದ ತೊಂದರೆಯಾಗಿ ನರಳಾಡಿದರು. ಅವರನ್ನು ಕನ್ಫೆಷನ್ ರೂಮ್ ನಲ್ಲಿ ಡಾಕ್ಟರ್ ಚಿಕಿತ್ಸೆ ಮಾಡಿದರು. ನಂತರ ಸಮೀರ್ ಆಚಾರ್ಯ ಲೋ ಬಿಪಿ ಯಿಂದ ತಲೆತಿರುಗಿ ಬಿದ್ದರು.ಅವರಿಗೆ ಮನೆಮಂದಿಯಲ್ಲಾ ಉಪಚರಿಸಿದರು. ಬೆಳಿಗ್ಗೆ ಏನು ತಿನ್ನದೇ ಇದ್ದಿದ್ದ ಕಾರಣ ತಲೆ ಸುತ್ತಿ ಸಮೀರ್ ಬಿದ್ದಿದ್ದರು. ಈ ಮದ್ಯ ಆಶಿತಾಗೆ ಮೈಗ್ರೇನ್ ಹೆಚ್ಚಾಗಿ ವಾಂತಿ ಮಾಡಿಕೊಂಡು ಅಸ್ವಸ್ಥರಾದರು.

 

 

ಹೀಗೆ ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳು ಒಬ್ಬರಾದ ಮೇಲೆ ಒಬ್ಬರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಮುಂದೆ ಯಾರ್ಯಾರಿಗೆ ಯಾವ ಯಾವ ರೀತಿಯ ಸಮಸ್ಯೆಗಳು ಎದುರಾಗಲಿದೆಯೋ ನೋಡಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top