fbpx
ಮನೋರಂಜನೆ

ನಟಿ ರಾಕುಲ್ ಪ್ರೀತ್ ಮೇಲೆ ನಿರ್ದೇಶಕನ ಕಿರುಕುಳ.

ನಟಿ ರಾಕುಲ್ ಪ್ರೀತ್ ಮೇಲೆ ನಿರ್ದೇಶಕನ ಕಿರುಕುಳ.

 

 

ಚಿತ್ರರಂಗದಲ್ಲಿ ನಟಿಯರ ಮೇಲಿನ ಕಿರುಕುಳ ದೌರ್ಜನ್ಯ ಆಗಾಗ ಕೇಳಿಬರುತ್ತಿರುತ್ತವೆ. ಈಗ ಅಂತದ್ದೇ ಪ್ರಕರಣ ಬೆಳಕಿಗೆ ಬಂದಿದ್ದು ಸೌತ್ ಸಿನಿ ದುನಿಯಾದ ಟಾಪ್ ನಟಿಯರಲ್ಲಿ ಒಬ್ಬರಾದ ಸುಂದರ ಹುಡುಗಿ ‘ರಕುಲ್ ಪ್ರೀತ್ ಸಿಂಗ್’ ಮೇಲೆ ನಿರ್ದೇಶಕನೊಬ್ಬನು ದೌರ್ಜನ್ಯವೆಸಗಿದ್ದಾನೆ ಎಂಬ ಸುದ್ದಿ ಸಿನಿ ದುನಿಯಾದಲ್ಲಿ ದಟ್ಟವಾಗಿ ಹರಡಿಕೊಂಡಿದೆ.

 

 

ರಾಕುಲ್ ನಟಿಸಿದ್ದ ಚಿತ್ರವೊಂದರ ನಿರ್ದೇಶಕ ಆಕೆಗೆ ಕಿರುಕುಳ ಕೊಟ್ಟಿದ್ದು ಅವನಿಗೆ ತನ್ನ ತಂಟೆಗೆ ಬರದಂತೆ ರಾಕುಲ್ ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.. “ನನ್ನಿಂದ ನಿನಗೆ ಸ್ಟಾರ್ ಡಮ್ ಹೆಚ್ಚಾಯಿತು” ಎಂದು ಕ್ಯಾತೆ ತೆಗೆದಿರುವ ನಿರ್ದೇಶಕ ತಾನು ಒಂದು ನಾಯಕಿ ಪ್ರಧಾನ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು ಆ ಚಿತ್ರದ ನಾಯಕಿ ಪಾತ್ರದಲ್ಲಿ ನಟಿಸುವಂತೆ ರಾಕುಲ್ ಪ್ರೀತ್ ಮುಂದೆ ನಿರ್ದೇಶಕ ಎಂದು ಪಟ್ಟು ಹಿಡಿದ್ದಾನೆ.

 

 

ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳ ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತಿರುವ ರಾಕುಲ್ ಪ್ರೀತ್ ಸದ್ಯಕ್ಕೆ ಡೇಟ್ಸ್ ಲಭ್ಯವಿಲ್ಲದ ಕಾರಣಕ್ಕೆ ಯಾರಿಗೂ ಹೊಸ ಡೇಟ್ಸ್ ಗಳನ್ನೂ ಕೊಡಲು ಮುಂದಾಗುತ್ತಿಲ್ಲ. ಆದರೆ ಆ ನಿರ್ದೇಶಕ ತನ್ನ ಚಿತ್ರದಲ್ಲಿ ನಟನೆ ಮಾಡಲೇಬೇಕು ಎಂದು ಪೀಡಿಸುತ್ತಿದ್ದಾನಂತೆ. ಆದರೆ, ಈ ಚಿತ್ರದಲ್ಲಿ ನಟಿಸಲು ರಾಕುಲ್‌ ಒಪ್ಪುತ್ತಾರೆಯೇ ಎಂಬ ಪ್ರಶ್ನೆ ಮೂಡಿದೆ. ಆತ ರಾಕುಲ್’ಗೆ ಹೀಗೆ ಪೀಡಿಸುತ್ತಿದ್ದರೆ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ರಾಕುಲ್ ಆಪ್ತರು ತಿಳಿಸಿದ್ದಾರೆ.

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top