fbpx
ದೇವರು

 ನವೆಂಬರ್ 24 ನೇ ತಾರೀಖಿನಂದು ಮಾರ್ಗಶಿರ ಮಾಸದ ಸುಬ್ರಹ್ಮಣ್ಯ ಷಷ್ಠಿಯ ದಿನ ಈ ದಿನ ಈ ಕೆಲಸಗಳನ್ನು ತಪ್ಪದೆ ಮಾಡಿ ನೀವು ಅಂದುಕೊಂಡಿರೋ ಕೆಲಸಗಳು ತಪ್ಪದೆ ನಡೆಯುತ್ತೆ

 ನವೆಂಬರ್ 24 ನೇ ತಾರೀಖಿನಂದು  ಮಾರ್ಗಶಿರ ಮಾಸದ ಸುಬ್ರಹ್ಮಣ್ಯ ಷಷ್ಠಿಯ ದಿನ.

 

ಸುಬ್ರಮಣ್ಯ ಷಷ್ಠಿ ಅಥವಾ ಸುಬ್ರಹ್ಮಣ್ಯನ ಜನ್ಮ ದಿನ ಎಂದು ಈ ದಿನವನ್ನು ಕರೆಯಲಾಗುತ್ತದೆ. ಸುಬ್ರಮಣ್ಯ ಷಷ್ಠಿ ಅಥವಾ ಸ್ಕಂದ ಸುಬ್ರಹ್ಮಣ್ಯ ಷಷ್ಠಿ ಎಂದು ಸಹ ಹೇಳುವ ಮಾರ್ಗಶಿರ  ಮಾಸದ ಈ ಒಂದು ದಿನ ಹಿಂದೂಗಳಿಗೆ ತುಂಬಾ ಪವಿತ್ರವಾದ ದಿನವಾಗಿದೆ. ಸುಬ್ರಮಣ್ಯನ ಅನುಗ್ರಹ ಮತ್ತು ಆಶೀರ್ವಾದ ಪಡೆಯಲು ನಿಮ್ಮೆಲ್ಲಾ ಕಷ್ಟಗಳಿಗೆ ಮುಕ್ತಿಯನ್ನು ಪಡೆಯಲು ಇದು ಹೆಚ್ಚು  ಪ್ರಾಮುಖ್ಯತೆಯನ್ನು ಹೊಂದಿರುವ ದಿನವಾಗಿದೆ.

 

 

ಹಿಂದೂ ಕ್ಯಾಲೆಂಡರ್ ಪ್ರಕಾರ ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಸಮಯದಲ್ಲಿ ಚಂದ್ರನು ಸ್ಥಿತ ನಿರುವ ಈ  ಆರನೇ ದಿನ ಈ ತಿಥಿಯನ್ನು ಆಚರಿಸಲಾಗುತ್ತದೆ. ಭಗವಂತನಾದ ಸುಬ್ರಹ್ಮಣ್ಯ ಶಿವ ಮತ್ತು ಪಾರ್ವತಿ ದೇವಿಯ ಎರಡನೇ ಪುತ್ರನಾಗಿದ್ದು, ಈ ದೇವರನ್ನು ಕಾರ್ತಿಕೇಯ, ಸುಬ್ರಮಣ್ಯ ಹೀಗೆ ಹಲವು ಹೆಸರುಗಳಿಂದ ಪೂಜಿಸಲಾಗುತ್ತದೆ.

ಈ ದಿನದಂದು ರಾಕ್ಷಸನಾದ ತಾರಕಾಸುರನನ್ನು ಸುಬ್ರಹ್ಮಣ್ಯ ಸ್ವಾಮಿಯು ಸಂಹರಿಸುತ್ತಾನೆ. ಹಾಗಾಗಿ ಈ ದಿನ ತುಂಬಾ ವಿಶೇಷವಾದ ಶಕ್ತಿಯನ್ನು ಪಡೆದಿರುವ ದಿನವಾಗಿದೆ.

 

ಸುಬ್ರಹ್ಮಣ್ಯ ಷಷ್ಟಿ ಪೂಜೆಯನ್ನು ಮನೆಯಲ್ಲಿ ಮಾಡುವ ವಿಧಾನ

 

ಸುಬ್ರಹ್ಮಣ್ಯ ಷಷ್ಠಿಯ ದಿನ ಸೂರ್ಯೋದಯಕ್ಕೂ ಮುನ್ನ ಎದ್ದು ತಲೆಸ್ನಾನ ಮಾಡಿ ಶುಚಿರ್ಭೂತರಾಗಿ, ನಿತ್ಯಕರ್ಮಗಳನ್ನು ಮುಗಿಸಿಕೊಂಡು ನಂತರ ಮುಂದಿನ ಕೆಲಸಗಳನ್ನು ಪ್ರಾರಂಭಿಸಬೇಕು.

 

 

ಸುಬ್ರಹ್ಮಣ್ಯ ಷಷ್ಠಿಯ ದಿನ ಉಪವಾಸ ವ್ರತವನ್ನು ಮಾಡುವವರು ಉಪವಾಸ ವ್ರತವನ್ನು ಕೈಗೊಂಡು ದಿನದ ಯಾವುದಾದರೂ ಒಂದು ಬಾರಿ ಮಾತ್ರ ಊಟವನ್ನು ಸೇವಿಸಬೇಕು.

ಸ್ನಾನದ ನಂತರ ಭಕ್ತಿಯಿಂದ ಪೂಜೆಯನ್ನು ಪ್ರಾರಂಭಿಸಬೇಕು. ಸುಬ್ರಹ್ಮಣ್ಯನ ಫೋಟೋ ಅಥವಾ ಮೂರ್ತಿಗೆ  ಹೂವು, ಗಂಧ, ಅರಿಶಿನ, ಕುಂಕುಮ, ಹಣ್ಣುಗಳು, ಧೂಪ, ದೀಪ, ನೈವೇದ್ಯ ಮತ್ತು  ಆರತಿಯನ್ನು ಸಮರ್ಪಿಸಬೇಕು. ಎಳ್ಳಿನ ಎಣ್ಣೆಯ ದೀಪವನ್ನು ಹಚ್ಚಬೇಕು.

ನೈವೇದ್ಯವಾಗಿ ತೊಗರಿ ಬೇಳೆಯ ಪ್ರಸಾದ. ತಂಬಿಟ್ಟು ಪಾನಕ, ಕೋಸಂಬರಿ ಒಂದು ಲೋಟ ಹಾಲನ್ನು ಪೂಜೆಗೆ ತೆಗೆದುಕೊಳ್ಳಬೇಕು.

ಈ ದಿನ ಸಂಜೆ ಸುಬ್ರಮಣ್ಯನ ಆರಾಧನೆ ಮಾಡಿ ಮುತ್ತೈದೆಯರಿಗೆ ಅರಿಶಿನ ಕುಂಕುಮ ಕೊಡಿ , ಅಷ್ಟೇ ಅಲ್ಲದೆ ಅರ್ಧ ಹಿಡಿ ಬಿಳಿ ಸಾಸಿವೆಯನ್ನು ಎಕ್ಕದ ಗಿಡದ ಮೇಲೆ ಹಾಕಿ ಬನ್ನಿ ಇಷ್ಟಾರ್ಥಗಳು ನೆರವೇರುತ್ತದೆ

ಪೂಜೆ ಮಾಡುವಾಗ

 

“ ಓಂ ಶರವಣಭವಾಯ ನಮಃ”

 

 

 

ಎಂಬ ಈ ಮಂತ್ರವನ್ನು ಹೇಳುತ್ತಾ ಸುಬ್ರಹ್ಮಣ್ಯ ದೇವರಿಗೆ ಕೆಂಪು ಹೂವುಗಳನ್ನು ಅರ್ಪಿಸಬೇಕು. ಪೂಜೆಯ ನಂತರ ಪ್ರಸಾದವನ್ನು ಮನೆಯವರೆಲ್ಲಾ ಸೇವಿಸಬೇಕು.

ಈ ಸುಬ್ರಹ್ಮಣ್ಯ ಷಷ್ಠಿಯ ದಿನದಂದು ದೇವಸ್ಥಾನಕ್ಕೆ ಹೋಗಿ. ಜೋಡಿ ನಾಗದೇವತೆಗಳು ಇರುವ ದೇವಸ್ಥಾನಕ್ಕೆ ಹೋಗಿ  ಮೊದಲು ನೀರಿನಿಂದ ಅಭಿಷೇಕ ಮಾಡಿ ನಂತರ ಸಾಧ್ಯವಾದರೆ ಹಾಲಿನ ಅಭಿಷೇಕ ಮಾಡಬೇಕು.

ನಂತರ ಅರಿಶಿನ, ಕುಂಕುಮ ,ಹೂಗಳು ಮತ್ತು  ಗಂಧವನ್ನು ಅರ್ಪಿಸಿ ಪೂಜಿಸಿದರೆ ವಂಶ ಪರಂಪರೆಯಾಗಿ ಹಾಗೂ ಜಾತಕದಲ್ಲಿ ಬರುವ ಸರ್ಪದೋಷ, ಕಾಳ ಸರ್ಪದೋಷಗಳನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಿಕೊಳ್ಳಬಹುದು. ಇದರಿಂದ ನಾಗದೇವತೆಗಳು ಕೂಡಾ ಸಂತುಷ್ಟ ರಾಗುತ್ತಾರೆ.

 

ಇದು ಅತ್ಯಂತ ಶುಭ ಸಮಯವಾಗಿದೆ. ಈ ದಿನ ಪೂಜೆ ಮಾಡಿದರೆ ಯಾವುದೇ ರೀತಿಯ ಸರ್ಪದೋಷಗಳು, ಕಷ್ಟಗಳು ಮತ್ತು ಎಲ್ಲ ರೀತಿಯ ಗ್ರಹ ದೋಷಗಳು, ಪರಿಣಾಮಗಳು ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗುತ್ತವೆ.

ಆದ್ದರಿಂದ ಸುಬ್ರಹ್ಮಣ್ಯ ಷಷ್ಠಿಯನ್ನು ಆಚರಿಸಿ ಭಕ್ತಿ ಶ್ರದ್ಧೆಯಿಂದ ಸುಬ್ರಹ್ಮಣ್ಯ ದೇವರಿಗೆ ಪೂಜೆ ಮಾಡಿ ಅವನ ಆಶೀರ್ವಾದ ಮತ್ತು ಕೃಪಾಕಟಾಕ್ಷವನ್ನು ನೀವೆಲ್ಲರೂ ಪಾತ್ರರಾಗಿ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top