fbpx
ಸಮಾಚಾರ

ಬೆಳಗಾವಿ ಮಹಾರಾಷ್ಟ್ರದ ಅವಿಭಾಜ್ಯ ಅಂಗ ಆದರೆ ಕರ್ನಾಟಕದ ಆಕ್ರಮಿತ ಪ್ರದೇಶ ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟ ಉದ್ಧವ್ ಠಾಕ್ರೆ.

ಬೆಳಗಾವಿ ಮಹಾರಾಷ್ಟ್ರದ ಅವಿಭಾಜ್ಯ ಅಂಗ ಆದರೆ ಕರ್ನಾಟಕದ ಆಕ್ರಮಿತ ಪ್ರದೇಶ ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟ ಉದ್ಧವ್ ಠಾಕ್ರೆ.

 

 

ಕ್ಲರ್ನಾಟಕ ಮತ್ತು ಮಹಾರಾಷ್ಟ್ರದ ನಡುವೆ ಬೆಳಗಾವಿಯ ಬಗ್ಗೆ ಗಡಿ ವಿವಾದ ಇರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಈ ವಿವಾದ ಬೂದಿ ಮುಚ್ಚಿರುವ ಕೆಂಡದ ಹಾಗೆ ಆಗಾಗ್ಗೆ ಬಿಸಿಗೊಳ್ಳುತ್ತಿರುತ್ತದೆ. ಈ ಮಧ್ಯ ಶಿವಸೇನಾ ಮುಖ್ಯಸ್ಥ ಉದ್ಧವ್​ ಠಾಕ್ರೆ ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದಾರೆ.

 

 

ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದು ಅದು ಮಹಾರಾಷ್ಟ್ರದ ಅವಿಭಾಜ್ಯ ಅಂಗ ಆದರೆ ಬೆಳಗಾವಿ ಕರ್ನಾಟಕದ ಆಕ್ರಮಿತ ಪ್ರದೇಶವಾಗಿದೆ ಎಂದು ವಿವಾದ್ತಮಕ ಹೇಳಿಕೆಯನ್ನು ನೀಡುವ ಮೂಲಕ ಶಿವಸೇನಾ ಮುಖ್ಯಸ್ಥ ಉದ್ಧವ್​ ಠಾಕ್ರೆ ಈ ಗಡಿ ಸಮಸ್ಯೆಯನ್ನು ಮತ್ತೆ ಕೆದಕಿದ್ದಾರೆ.

 

 

ಬೆಳಗಾವಿ ಗಡಿಯ ಶಿನ್ನೋಳಿ ಗ್ರಾಮದಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ “ಇದು ಮರಾಠಿಯ ಭೂಭಾಗ. ಇದನ್ನು ಮಹಾರಾಷ್ಟ್ರಕ್ಕೆ ಸೇರಿಸುತ್ತೇನೆ..ಬೆಳಗಾವಿಯನ್ನು ಮರಳಿ ಮಹಾರಾಷ್ಟ್ರಕ್ಕೆ ಸೇರಿಸಲು ಹೋರಾಟ ನಡೆಯುತ್ತಿದೆ. ಮಹಾರಾಷ್ಟ್ರ ಶಾಸಕರು, ಸಂಸದರಿಗೆ ಈ ಜವಾಬ್ದಾರಿ ಇದೆ” ಎಂದು ವಿವಾದಾತ್ಮಕವಾಗಿ ಹೇಳಿದ್ದಾರೆ. ಉದ್ಧವ್ ಠಾಕ್ರೆಯ ಈ ಹೇಳಿಕೆಗೆ ಕನ್ನಡಿಗರು ತೀವ್ರ ಖಂಡನೆಯನ್ನು ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top