fbpx
ಭವಿಷ್ಯ

ಪುರಾಣದ ಪ್ರಕಾರ ಆತ್ಮಹತ್ಯೆ ಮಾಡಿಕೊಂಡವರ ಆತ್ಮಗಳು ಏನಾಗುತ್ತವೆ ಗೊತ್ತಾ ?

ಹಿಂದೂ ಪುರಾಣದ ಪ್ರಕಾರ ಆತ್ಮಹತ್ಯೆ ಮಾಡಿಕೊಂಡವರ ಆತ್ಮಗಳು ಎಲ್ಲಿ ಹೋಗುತ್ತವೆ ? ಸ್ವರ್ಗಕ್ಕೂ ? ನರಕಕ್ಕೋ ? ಎಂಬುದನ್ನು ತಿಳಿಯೋಣ

 

ಮನುಷ್ಯರು ಮಾಡಿದ ಪಾಪ ಅಥವಾ ಪುಣ್ಯಗಳನ್ನು ಅನುಸರಿಸಿ ಅವರು ಸತ್ತ ನಂತರ ಅವರ ಆತ್ಮಗಳು ಸ್ವರ್ಗಕ್ಕೋ ಅಥವಾ ನರಕಕ್ಕೋ ಹೋಗುತ್ತದೆಂದು ಎಲ್ಲರೂ ವಿಶ್ವಾಸವನ್ನು ಇಟ್ಟುಕೊಂಡಿರುತ್ತಾರೆ.

ಆದರೆ ಯಾವುದಾದರೂ ಅಪಘಾತದಲ್ಲಿ ಅನಾರೋಗ್ಯದ ಕಾರಣಗಳಿಂದ ಅಥವಾ ಸಹಜವಾಗಿ ಸಾವು ಸಂಭವಿಸಿದರೆ ಅಂತಹವರು ಆತ್ಮಗಳು ಸ್ವರ್ಗಕ್ಕೆ ಅಥವಾ ನರಕಕ್ಕೆ ಹೋಗುವುದು .ಅದೇ ಒಂದು ವೇಳೆ ಆತ್ಮಹತ್ಯೆ ಮಾಡಿಕೊಂಡರೆ ಅಂತಹವರ ಆತ್ಮಗಳು ಮಾತ್ರ ಹಾಗೆ ಹೋಗುವುದಿಲ್ಲವೆಂದು ಹಿಂದೂ ಪುರಾಣಗಳಲ್ಲಿ ತಿಳಿಸಲಾಗಿದೆ.

 

ಹಾಗಾದರೆ ಆತ್ಮಹತ್ಯೆ ಮಾಡಿಕೊಂಡವರ ಆತ್ಮಗಳು ಎಲ್ಲಿಗೆ ಹೋಗುತ್ತವೆ ? ಏನು ಮಾಡುತ್ತವೆ ? ಎಂಬುದನ್ನು ನೋಡೋಣ.

 

ಹಿಂದೂ ಪುರಾಣದ ಪ್ರಕಾರ ಆತ್ಮಹತ್ಯೆ ಮಾಡಿಕೊಳ್ಳುವುದು ಮಹಾ ಪಾಪದ ಕೆಲಸ. ಇತರೆ ಯಾವುದೇ ರೀತಿಯಲ್ಲಿ ಮರಣಿಸಿದರೂ ಅದನ್ನು ಸಹಜವಾದ ಸಾವು ಎಂದು ಪರಿಗಣಿಸಲಾಗುತ್ತದೆ.

ಆದರೆ ಆಯುಷ್ಯ ಮುಗಿಯುವುದಕ್ಕೆ ಮುಂಚೆಯೇ ಬಲವಂತವಾಗಿ ಪ್ರಾಣ ಕಳೆದುಕೊಳ್ಳುವುದು,ಆತ್ಮಹತ್ಯೆ ಮಾಡಿಕೊಳ್ಳುವುದು, ಕ್ಷಮಿಸಲು ಅಸಾಧ್ಯವಿಲ್ಲ ಇದು ಒಂದು  ಅಪರಾಧವಾಗಿದೆ ಎಂದು ಹಿಂದೂ ಪುರಾಣಗಳಲ್ಲಿ ಉಲ್ಲೇಖವಾಗಿದೆ.

ಆಯುಷ್ಯ ಮುಗಿಯದೇ ಆತ್ಮಹತ್ಯೆ ಮಾಡಿಕೊಂಡರೆ. ಮರಣವೆಂಬ ಪ್ರಕ್ರಿಯೆ ಇನ್ನೂ ಪೂರ್ಣವಾಗಿಲ್ಲ. ಆದರೆ ಆತ್ಮಹತ್ಯೆ ಮಾಡಿಕೊಂಡವರ ಆತ್ಮಗಳು ಸ್ವರ್ಗ ಅಥವಾ ನರಕಕ್ಕೆ ಹೋಗದೆ ಕಾಮಲೋಕ ಎಂಬ ಪ್ರತ್ಯೇಕ ಲೋಕದಲ್ಲಿ ಸಿಲುಕಿಕೊಂಡು ತಿರುಗಾಡುತ್ತಿರುತವಂತೆ .

 

 

ಅಂದರೆ ಒಬ್ಬ ವ್ಯಕ್ತಿಯ ಆಯುಷ್ಯ ತೊಂಬತ್ತು ವರ್ಷವಿದ್ದರೆ ಒಂದು ವೇಳೆ ಆ ವ್ಯಕ್ತಿ ಇಪ್ಪತ್ತು ವರ್ಷ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡರೆ ಇನ್ನುಳಿದ ಎಪ್ಪತ್ತು ವರ್ಷಗಳ ಕಾಲ ಕಾಮಲೋಕದಲ್ಲಿ ತಿರುಗುತ್ತಲೇ ಇರುತ್ತಾರಂತೆ.

ಅಲ್ಲಿಯವರೆಗೂ ಮರಣವೆಂಬ ಪ್ರಕ್ರಿಯೆ ಪೂರ್ತಿಯಾಗುವುದಿಲ್ಲವಂತೆ. ಹೀಗೆ ಕಾಮ ಲೋಕದಲ್ಲಿರುವ ಆತ್ಮಗಳು ಭೌತಿಕವಾಗಿ ಪ್ರತಿಯೊಂದು ಆಗು ಹೋಗುಗಳನ್ನು ನೋಡಬಹುದಂತೆ. ದಿನವೂ ಒಂದು ಶಿಕ್ಷೆಯಂತೆ ಕಾಲ ಕಳೆಯುತ್ತಾರಂತೆ .ಶಾಂತಿ ಇರುವುದಿಲ್ಲವಂತೆ. ಆತ್ಮಗಳನ್ನು ನೋಡಬಲ್ಲ ಅವುಗಳನ್ನು ಮಾತನಾಡಿಸಬಲ್ಲವರಿಗೆ ಇಂತಹ ಕಾಮ ಲೋಕದ ಆತ್ಮಗಳು ಹಾನಿಯನ್ನು ಉಂಟು ಮಾಡುತ್ತವ೦ತೆ.

ಕಾಮ ಲೋಕದಲ್ಲಿ ಮರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಆತ್ಮಗಳು ಮರುಜನ್ಮ ಪಡೆಯಲು ಬೇರೊಂದು ದೇಹದಲ್ಲಿ ಸೇರಿಕೊಳ್ಳುತ್ತವೆ. ಆದರೆ ಆ ಜನ್ಮ ಮಾತ್ರ ಅವರಿಗೆ ಬಹಳ ಕಷ್ಟಕರವಾಗಿರುತ್ತದೆ. ಹೀಗೆ ಈ ರೀತಿಯಾಗಿ ಆತ್ಮಹತ್ಯೆ ಮಾಡಿಕೊಂಡರೆ ಸ್ವರ್ಗ ,ನರಕ ಅಥವಾ ಮೋಕ್ಷ ಈ ರೀತಿಯ ಯಾವುದೂ ಸಿಗದೆ ಆತ್ಮಗಳು  ಆಲೆದಾಡುವವು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top