fbpx
ಆರೋಗ್ಯ

ಹೀಟ್ ಜಾಸ್ತಿ ಆದ್ರೆ ಹೆಚ್ಚಾಗಿ ಕಾಣಿಸ್ಕೊಳ್ಳೋ ಮೂಗಿನಿಂದ ರಕ್ತ ಸೋರುವ ಸಮಸ್ಯೆ ಇರೋರು ಹೆಚ್ಚು ದುಡ್ಡು ಖರ್ಚು ಮಾಡ್ದೆ ಬರಿ ಗರಿಕೆ ಹುಲ್ಲು ಬಳಸಿಕೊಂಡು ಸರಿ ಮಾಡಿಕೊಳ್ಳಬಹುದು..

ಮೂಗಿನಲ್ಲಿ ರಕ್ತಸ್ರಾವ ತಡೆಯಲು ಗರಿಕೆ ಹುಲ್ಲನು ಬಳಸಿ ಮನೆಮದ್ದು ಮಾಡಿಕೊಳ್ಳಿ:

ಮೂಗಿನಲ್ಲಿ ಆಗುವ ರಕ್ತಸ್ರಾವಕ್ಕೆ ಮುಖ್ಯ ಕಾರಣಗಳು:

೧.ಧೂಮಪಾನ
೨.ಅತಿಯಾದ ರಕ್ತದೊತ್ತಡ
೩.ಮೂಗಿನ ಒಳಭಾಗದಲ್ಲಿನ ಸಮಸ್ಯೆ

ಮೂಗಿನಿಂದ ರಕ್ತ ಸೋರುವ ಸಮಸ್ಯೆ ಸಾಮಾನ್ಯವಾಗಿ ದೇಹದಲ್ಲಿ ಉಷ್ಣ ಹೆಚ್ಚಾದಾಗ ಅಥವಾ ಹೆಚ್ಚಿನ ಬಿಸಿಲಿನ ತಾಪಕ್ಕೆ ಉಂಟಾಗುತ್ತದೆ , ಮೂಗಿನ ಒಳ ಭಾಗಗಳು ಒಣಗುವುದೇ ಇದಕ್ಕೆ ಮುಖ್ಯ ಕಾರಣ .

 

ಗರಿಕೆ ಹುಲ್ಲಿನ ಮನೆಮದ್ದು :

 

 

ಗರಿಕೆ ಹುಲ್ಲು ಎಲ್ಲ ಕಡೆ ಚೆನ್ನಾಗಿ ಬೆಳೆಯುತ್ತದೆ,ಸ್ವಲ್ಪ ಗರಿಕೆ ಹುಲ್ಲನು ತೆಗೆದುಕೊಂಡು ಬಂದು ಅದನ್ನು ಚೆನ್ನಾಗಿ ತೊಳೆದುಕೊಂಡು ಚಿಕ್ಕದಾಗಿ ಕತ್ತರಿಸಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಬೇಕು .ರುಬ್ಬಿಕೊಂಡ ನಂತರ ಅದನ್ನು ಸೋಸಿಕೊಂಡು ಅದರ ನೀರನ್ನು ಸ್ವಲ್ಪ ನಿಮ್ಮ ಎರಡು ಮೂಗಿನ ನಾಳಗಳಲ್ಲಿ ಹಾಕಿ ಕೊಳ್ಳಬೇಕು ಹೀಗೆ ಮಾಡುವುದರಿಂದ ಗರಿಕೆ ಹುಲ್ಲಿನಲ್ಲಿರುವ ರೋಗನಿರೋಧಕ ಗುಣ ಕ್ಯಾನ್ಸರ್ ,ಮಧುಮೇಹ ಸಮಸ್ಯೆಯನ್ನು ಕಡಿಮೆ ಮಾಡುವುದರ ಜೊತೆ ನಿಮ್ಮ ಮೂಗಿನಲ್ಲಿ ರಕ್ತಸ್ರಾವ ಆಗುವ ಸಮಸ್ಯೆಯಿಂದ ಬೇಗ ಹೊರಬರಲು ಸಹಾಯ ಮಾಡುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top