fbpx
ಆರೋಗ್ಯ

ಹೆಣ್ಮಕ್ಕಳು ಮುಟ್ಟಿನ ಟೈಮ್ ನಲ್ಲಿ ತುಂಬಾ ಹೊಟ್ಟೆ ನೋವು ಬಂದ್ರೆ ಮಾತ್ರೆ ತಗೋಳೋ ಬದ್ಲು ಹೀಗೆ ಮಾಡಿ ನೋವು ಮಾಯವಾಗುತ್ತೆ !

ಹೆಣ್ಣು ಮಕ್ಕಳು ಅವರ ಮುಟ್ಟಿನ ಸಂದರ್ಭದಲ್ಲಿ ತುಂಬಾ ಹೊಟ್ಟೆ ನೋವಿನ ಸಮಸ್ಯೆನ ಎದುರಿಸುತ್ತಿರುತ್ತಾರೆ.

ಮುಟ್ಟಿನ ಸಂದರ್ಭದಲ್ಲಿ ಹೊಟ್ಟೆ ನೋವಿಗೆ ಮುಖ್ಯ ಕಾರಣ :

 

ಇದಕ್ಕೆ ಮುಖ್ಯ ಕಾರಣ ಆಮ್ಲಜನಕದ ಸಮಸ್ಯೆ,ಮಹಿಳೆಯರ ಜನನಾಂಗದ ಸಮೀಪದಲ್ಲಿರುವ ರಕ್ತನಾಳಗಳಿಗೆ ಆಮ್ಲಜನಕ ಸರಿಯಾಗಿ ಪೂರೈಕೆ ಆಗದ ಕಾರಣ ಈ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ.

 

ಈ ಹೊಟ್ಟೆನೋವನ್ನು ತಡೆಯುವುದಕ್ಕೆ ಆಗದೆ ಎಷ್ಟೋ ಹೆಣ್ಣು ಮಕ್ಕಳು ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ ,ಈ ಮಾತ್ರೆಗಳ ಸೇವನೆ ಅನೇಕ ಆರೋಗ್ಯ ಸಂಭಂದಿ ಕಾಯಿಲೆಗಳಿಗೆ ಕಾರಣವಾಗುತ್ತದೆ.

ಈ ಮಾತ್ರೆಗಳ ಸೇವನೆ ಮಾಡುವ ಬದಲು ನಾವು ಹೇಳುವಂತ ಮನೆಮದ್ದನ್ನು ಉಪಯೋಗಿಸಿ ನಿಮ್ಮ ಸಮಸ್ಯೆ ಯಿಂದ ಹೊರ ಬನ್ನಿ:

ಮನೆಮದ್ದು:

೧.ಕುಂಬಳ ಕಾಯಿ ಬೀಜ:

 

ಕುಂಬಳ ಕಾಯಿ ಬೀಜ 1 ಚಮಚ ,ಬಾಳೆಹಣ್ಣು ಅರ್ಧ ಮತ್ತು ಒಂದು ಲೋಟ ಹಾಲು ಈ ಮೂರನ್ನು ಚೆನ್ನಾಗಿ ರುಬ್ಬಿಕೊಂಡು ನೀವು ಮುಟ್ಟದ ದಿನ ಬೆಳ್ಳಗಿನ ಆಹಾರ ವಾದ ಮೇಲೆ ಸೇವಿಸಬೇಕು, ಕುಂಬಳ ಕಾಯಿಯಲ್ಲಿರುವ ಪೋಸ್ಟಿರಾಸ್ ಸತು ಜನನಾಂಗದಲ್ಲಿ ಆಗುವ ಉರಿಯೂತವನ್ನು ಕಡಿಮೆ ಮಾಡುತ್ತದೆ .

೨.ಕ್ಯಾರಟ್ :

ಕ್ಯಾರಟ್ ಮತ್ತು ಹಾಲನ್ನು ಚೆನ್ನಾಗಿ ರುಬ್ಬಿಕೊಂಡು ಕುಡಿಯುವುದರಿಂದ ನಿಮ್ಮ ಮುಟ್ಟಿನಲ್ಲಿ ಬರುವಂತ ಹೊಟ್ಟೆ ನೋವು ಮಾಯವಾಗುವುದರ ಜೊತೆ ರಕ್ತ ಸಂಚಾರ ಸುಲಭವಾಗಿ ಆಗುತ್ತದೆ.

೩.ಅರಿಶಿನ:

 

ಒಂದು ಲೋಟ ಬಿಸಿ ಹಾಲಿಗೆ 1 /4 ಚಮಚ ಅರಿಶಿನ ಹಾಕಿಕೊಂಡು ಕುಡಿಯುವುದರಿಂದ ನಿಮ್ಮ ಮುಟ್ಟಿನಲ್ಲಿ ಬರುವಂತ ಹೊಟ್ಟೆ ನೋವು ಹೋಗುವ ಜೊತೆ ನಿಮ್ಮ ಹೊಟ್ಟೆ ಶುಚಿಯಾಗಿ ,ನೀವು ಆರಾಮವಾಗಿ ಇರುವುದಕ್ಕೆ ಸಹಾಯ ಮಾಡುತ್ತದೆ.

೪.ಶುಂಠಿ:

 

ಸ್ವಲ್ಪ ನೀರಿಗೆ ಸ್ವಲ್ಪ ಶುಂಠಿ ಹಾಕಿ ಚೆನ್ನಾಗಿ ಕುದಿಸಿ ಅದು ತಣ್ಣಗಾದ ಮೇಲೆ ಅದಕ್ಕೆ ಸ್ವಲ್ಪ ಜೇನು ತುಪ್ಪ ಹಾಕಿಕೊಂಡು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು .

೫.ಲೋಳೆ ರಸ :

 

ಖಾಲಿ ಹೊಟ್ಟೆಯಲ್ಲಿ ಲೋಳೆ ರಸ ಹಾಗೆ ತಿನ್ನ ಬೇಕು ಇದರಿಂದ ನಿಮ್ಮ ಹೊಟ್ಟೆ ನೋವು ಮಾಯವಾಗುತ್ತದೆ.

೬.ಜೀರಿಗೆ:

 

2 ಚಮಚ ಜೀರಿಗೆಯನ್ನು ನೀರಿನಲ್ಲಿ ರಾತ್ರಿ ನೆನೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು ಇದರಿಂದ ನಿಮ್ಮ ಮುಟ್ಟಿನ ಯಾವುದೇ ಸಮಸ್ಯೆ ತುಂಬಾ ಬೇಗ ಮಾಯವಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top