fbpx
ಆರೋಗ್ಯ

ಬಣ್ಣ ಬಣ್ಣದ ಚಪ್ಪಲಿ, ಶೂಗಳು ತಗೊಂಡು ಚೆನ್ನಾಗಿ ಕಾಲು ಕಚ್ಚಿಸಿಕೊಂಡ ಮೇಲೆ ಸಮಸ್ಯೆಯಿಂದ ಹೊರಬರಲು ಹೀಗೆ ಮಾಡಿ !

ಎಲ್ಲರಿಗೂ ಅವರ ಬಟ್ಟೆಗೆ ತಕ್ಕ ಬಣ್ಣ ಬಣ್ಣದ ಚಪ್ಪಲಿ ,ಶೂ ಗಳನ್ನು ಹಾಕಿಕೊಳ್ಳಬೇಕು ಅಂತ ಆಸೆ ಇರುತ್ತದೆ,ಆದರೆ ತುಂಬಾ ಜನರಿಗೆ ಹೊಸ ಚಪ್ಪಲಿ ,ಶೂಗಳು ಕಚ್ಚುತ್ತದೆ ಇದರಿಂದ ಗಾಯವಾಗಿ ಬಹಳ ನೋವು ಉಂಟಾಗಿ ನಡೆಯಲು ಕೂಡ ಕಷ್ಟವಾಗುತ್ತದೆ .

 

 

ಈ ಚಪ್ಪಲಿ ,ಶೂಗಳು ಕಚ್ಚುವ ಸಮಸ್ಯೆಯಿಂದ ಹೊರಬರಲು ನಾವು ಹೇಳುವ ಮನೆಮದ್ದನ್ನು ಉಪಯೋಗಿಸಿ ಅದರ ಉಪಯೋಗ ಪಡೆದುಕೊಳ್ಳಿ:

 

೧.ಬೇವಿನ ಸೊಪ್ಪು ,ಅರಿಶಿನ ಮತ್ತು ನೀರು:

 

 

ಸ್ವಲ್ಪ ಬೇವಿನ ಸೊಪ್ಪುನ್ನು ತೊಳೆದುಕೊಂಡು ಅದನ್ನು ಚೆನ್ನಾಗಿ ರುಬ್ಬಿಕೊಳ್ಳಿ ಅದಕ್ಕೆ ಸ್ವಲ್ಪ ಅರಿಶಿನ ಮತ್ತು ನೀರು ಹಾಕಿ ಮಿಶ್ರಣ ಮಾಡಿಕೊಳ್ಳಿ ಆ ಮಿಶ್ರಣವನ್ನು ಚಪ್ಪಲಿ ಅಥವಾ ಶೂ ಕಚ್ಚಿದ ಜಾಗದಲ್ಲಿ ಹಾಕಿ ಸ್ವಲ್ಪ ಹೊತ್ತು ಬಿಟ್ಟು ನಂತರ ಬೆಚ್ಚಗಿನ ನೀರಿನಲ್ಲಿ ಶುಚಿಗೊಳ್ಳಿಸಿಕೊಳ್ಳಬೇಕು.

 

೨.ಆಲೂಗಡ್ಡೆ :

ಆಲೂಗಡ್ಡೆ ಯನ್ನು ಚೆನ್ನಾಗಿ ರುಬ್ಬಿಕೊಂಡು ಅದರ ರಸವನ್ನು ಒಂದು ಹತ್ತಿಯ ಸಹಾಯ ದಿಂದ ಚಪ್ಪಲಿ ಅಥವಾ ಶೂ ಕಚ್ಚಿದ ಜಾಗದಲ್ಲಿ ಹಾಕಿ ರಾತ್ರಿ ಹಾಕಿಕೊಂಡು ಬೆಳ್ಳಗೆ ತೊಳೆದುಕೊಳ್ಳಬೇಕು.

 

೩.ಟೂತ್ ಪೇಸ್ಟ್:

 

 

ಚಪ್ಪಲಿ ಅಥವಾ ಶೂ ಕಚ್ಚಿದ ಜಾಗದಲ್ಲಿ ಟೂತ್ ಪೇಸ್ಟ್ ಹಚ್ಚಿ 30 ನಿಮಿಷ ಬಿಟ್ಟು ನಂತರ ಶುಚಿಗೊಳ್ಳಿಸಿಕೊಳ್ಳಬೇಕು.,ಹೀಗೆ ದಿನಕ್ಕೆ 2 ರಿಂದ 3 ಸಲ ಮಾಡಬೇಕು.

 

೪.ಜೇನು ತುಪ್ಪ ಮತ್ತು ಸಾಸಿವೆ ಎಣ್ಣೆ:

ಜೇನು ತುಪ್ಪ ಮತ್ತು ಸಾಸಿವೆ ಎಣ್ಣೆಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಅದರ ಮಿಶ್ರಣವನ್ನು ಚಪ್ಪಲಿ ಅಥವಾ ಶೂ ಕಚ್ಚಿದ ಜಾಗದಲ್ಲಿ ಹಾಕಿ ಸ್ವಲ್ಪ ಹೊತ್ತು ಬಿಟ್ಟು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಬೇಕು.

 

೫.ಆಲಿವ್ ಎಣ್ಣೆ ಮತ್ತು ಬಾದಾಮಿ ಎಣ್ಣೆ:

 

 

ಆಲಿವ್ ಎಣ್ಣೆ ಮತ್ತು ಬಾದಾಮಿ ಎಣ್ಣೆ ಎಲ್ಲ ತರಹದ ನೋವನ್ನು ಗುಣಪಡಿಸುವ ಸತ್ವವನ್ನು ಹೊಂದಿದೆ.ಆಲಿವ್ ಎಣ್ಣೆ ಮತ್ತು ಬಾದಾಮಿ ಎಣ್ಣೆಯನ್ನು ಮಿಶ್ರಣ ಮಾಡಿಕೊಂಡು ರಾತ್ರಿ ಮಲಗುವ ಸಮಯದಲ್ಲಿ ಚಪ್ಪಲಿ ಅಥವಾ ಶೂ ಕಚ್ಚಿದ ಜಾಗದಲ್ಲಿ ಹಾಕಿ ಬೆಳಗ್ಗೆ ಒಂದು ಹತ್ತಿಯ ಸಹಾಯದಿಂದ ಒರೆಸಿಕೊಳ್ಳಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top