fbpx
ಕಿರುತೆರೆ

ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್’ಬಾಸ್ ಮನೆಗೆ ಮತ್ತೆ ಬಂದ್ರು ಕೃಷಿ ತಾಪಂಡ..! ಈ ಬಗ್ಗೆ ನಿಮ್ಮ ಅಭಿಪ್ರಾಯವೇನು..?

ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್’ಬಾಸ್ ಮನೆಗೆ ಮತ್ತೆ ಬಂದ್ರು ಕೃಷಿ ತಾಪಂಡ..! ಈ ಬಗ್ಗೆ ನಿಮ್ಮ ಅಭಿಪ್ರಾಯವೇನು..?

 

ಪ್ರತೀ ಸಲವೂ ಚಿತ್ರವಿಚಿತ್ರ ಜನರ ಜೊತೆ ಭಯಂಕರ ವಿಚಿತ್ರ ಎಲಿಮೆಂಟುಗಳನ್ನೂ ಮನೆತುಂಬಿಸಿಕೊಳ್ಳೋದು ಬಿಗ್‌ಬಾಸ್ ಮಹಿಮೆ. ಈ ಬಾರಿ ಮೇಲುನೋಟಕ್ಕೇ ಹುಚ್ಚು ಕೆರಳಿಕೊಂಡಿರುವಂತೆ ಕಾಣಿಸೋ ಆಸಾಮಿಗಳ ಸಂಖ್ಯೆ ಕಡಿಮೆ ಇದ್ದರೂ ‘ವಿಚಿತ್ರಗಳಿಗೇನೂ ಕೊರತೆಯಿಲ್ಲ. ಇನ್ನು ಬಿಗ್ ಬಸ್ ಕಾರ್ಯಕ್ರಮದ ಐದನೇ ಸೀಸನ್ ಯಶಸ್ವಿಯಾಗಿ ಐದುವಾರಗಳನ್ನು ಪೂರೈಸಿದ್ದು ಐದು ಜನ ಎಲಿಮಿನೇಟ್ ಆಗಿದ್ದಾರೆ.

 

 

ಈವಾರ ಎಲಿಮಿನೇಷನ್ ಇರುವುದಿಲ್ಲ ಎಂದು ಹೇಳಿದ್ದ ಬಿಗ್ ಬಾಸ್ ಶನಿವಾರದ ಕಾರ್ಯಕ್ರಮದಲ್ಲಿ ನಾಮಿನೇಟ್ ಆಗಿದ್ದ ಸ್ಪರ್ಧಿಗಳಿಗೆ ಕಾರ್ಯಕ್ರಮದಲ್ಲಿ ನಿರೂಪಕ ಎಲಿಮಿನೇಟ್ ಸುದೀಪ್ ಅನುಪಮಾ ಮತ್ತು ರಿಯಾಜ್ ಇಬ್ಬರನ್ನು ಮಾಡಿದ ಹಾಗೆ ಚಮಕ್ ಕೊಟ್ಟರು. ಎಲಿಮಿನೇಟ್ ಮಾಡಿದ ಹಾಗಿ ಹೇಳಿ ಮೇನ್ ಡೋರ್’ವರೆಗೂ ಕಳಿಸಿ ಮತ್ತೆ ನೀವು ಎಲಿಮಿನೇಟ್ ಆಗಿಲ್ಲ ಎಂದು ತಿಳಿಸಿದರು.

 

 

ಈ ಮದ್ಯ ಮೇನ್ ದೊರೆ ಬಳಿ ಹೋಗಿ ನಿಂತಾಗ ದೊರೆ ಓಪನ್ ಆಗುತ್ತದೆ ಅಲ್ಲಿಂದ ಕಳೆದ ವಾರ ಮನೆಯಿಂದ ಹೊರ ಬಂದಿದ್ದ ಕೃಷಿ ತಾಪಂಡ ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಎಂಟ್ರಿ ಪಡೆದಿರುವ ಕೃಷಿ ಒಂದು ವಾರದಲ್ಲಿ ಹೊರ ಜಗತ್ತಿನ ಜನರ ಪ್ರತಿಕ್ರಿಯೆಯನ್ನು ತಿಳಿದುಕೊಂಡು ಮತ್ತೆ ಮನೆ ಪ್ರವೇಶ ಮಾಡಿರುವುದು ವೀಕ್ಷಕರಿಗೆ ಸಾಮಾನ್ಯವಾಗಿ ಇಷ್ಟವಾಗಿಲ್ಲ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top