fbpx
ಮನೋರಂಜನೆ

ಚಾಲೆಂಜಿಂಗ್ ಸ್ಟಾರ್ ದರ್ಶನ್’ಗೆ ರಾಣಿಯಾದ ಮೇಘನಾರಾಜ್..!

ಚಾಲೆಂಜಿಂಗ್ ಸ್ಟಾರ್ ದರ್ಶನ್’ಗೆ ರಾಣಿಯಾದ ಮೇಘನಾರಾಜ್..!

 

 

ಕನ್ನಡದ ಬಹುನೀರಿಕ್ಷಿತ ಕುರುಕ್ಷೇತ್ರದ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯದ ಹಂತವನ್ನು ತಲುಪಿದ್ದು ಇದೆ ಡಿಸೆಂಬರ್ 20 ಶಹಾಟಿಂಗ್ ಪೂರ್ಣಗೊಳ್ಳಲಿದೆ. ಇದೆ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಐವತ್ತನೇ ಚಿತ್ರ ಬಹಳ ಅದ್ದೂರಿಯಾಗಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ದರ್ಶನ್ ಗೆ ನಾಯಕಿಯಾಗಿ ಯಾರು ನಟಿಸಲಿದ್ದಾರೆ ಎಂಬ ಗೊಂದಲ ಚಿತ್ರ ತಂಡಕ್ಕೆ ಎದುರಾಗುತ್ತಿತ್ತು. ಮತ್ತು ಇತ್ತೀಚಿನ ಅಪ್ಡೇಟ್ ಎಲ್ಲರಿಗೂ ಆಶ್ಚರ್ಯವನ್ನು ಉಂಟುಮಾಡುತ್ತದೆ.

 

 

ಕುರುಕ್ಷೇತ್ರದಲ್ಲಿ ದರ್ಶನ್’ಗೆ ನಾಯಕಿಯಾಗಿ ಈ ಹಿಂದೆ ವರದಿಯಾದಂತೆ ರೆಜಿನಾ ಕಸ್ಸಂದ್ರ ಅಥವಾ ರಮ್ಯಾ ನಾಂಬೀಸನ್ ಆಗಲಿ ಆಯ್ಕೆಯಾಗಿಲ್ಲ ಚಿತ್ರದಲ್ಲಿ ದುರ್ಯೋಧನನ ರಾಣಿ ಪಾತ್ರವನ್ನು ಕನ್ನಡದ ನಟಿ ಮೇಘನಾರಾಜ್ ನಟಿಸಲಿದ್ದಾರೆ ಎನ್ನುವ ಸುದ್ದಿ ಮೂಲಗಳಿಂದ ತಿಳಿದುಬಂದಿದೆ.

 

 

ದುರ್ಯೋಧನ ಮತ್ತು ಭಾನುಮತಿ ನಡುವಿನ ದೃಶ್ಯಗಳ ಚಿತ್ರೀಕರಣವನ್ನು ಕೊನೆಯಲ್ಲಿ ಮಾಡಲು ಉಳಿಸಿಕೊಂಡಿರುವ ಚಿತ್ರತಂಡ ನಾಯಕಿಯ ಪಾತ್ರಕ್ಕೆ ಕನ್ನಡದ ನಟಿಯನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದೆ. ಮೇಘನಾ ಈ ಹಿಂದೆ ಅಲ್ಲಮ ಪ್ರಭು ಎಂಬ ಚಿತ್ರದಲ್ಲಿ ಪೌರಾಣಿಕ ಪಾತ್ರವನ್ನು ನಿರ್ವಹಿಸಿದ್ದರು. ಮೇಘನಾ ಶೀಘ್ರದಲ್ಲೇ ಕುರುಕ್ಷೇತ್ರ ಚಿತ್ರತಂಡವನ್ನು ಸೇರಲಿದ್ದಾರೆ.

 

 

ಅಂದಹಾಗೆ ಕುರುಕ್ಷೇತ್ರ ಚಿತ್ರವೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50 ನೇ ಚಿತ್ರವಾಗಿದ್ದು ಚಿತ್ರದಲ್ಲಿ ಅರ್ಜುನ್ ಸರ್ಜಾ, ರವಿಚಂದ್ರನ್, ಅಂಬರೀಷ್, ಸೋನು ಸೂದ್, ಡ್ಯಾನಿಶ್ ಅಖ್ತರ್ ಸೈಫಿ, ನಿಖಿಲ್ ಕುಮಾರ್, ರವಿಶಂಕರ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. .ಕುರುಕ್ಕ್ಷೇತ್ರ ಚಿತ್ರಕ್ಕೆ ಭಾರತೀಯ ಮಹಾಕಾವ್ಯ ಮಹಾಭಾರತವನ್ನು ಆಧರಿಸಿ ಜೆ.ಕೆ. ಭಾರವಿಯವರು ಬರೆದಿದ್ದಾರೆ..ಸಿನಿಮಾವನ್ನು ನಾಗಣ್ಣ ನಿರ್ದೇಶಿಸುತ್ತಿದ್ದು, ಮುನಿರತ್ನ ನಿರ್ಮಾಪಕರಾಗಿದ್ದಾರೆ..ವಿ.ಹರಿಕೃಷ್ಣ ಚಿತ್ರಕ್ಕೆ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top