fbpx
ಕಿರುತೆರೆ

ಬಿಗ್ ಬಾಸ್ ಯಶಸ್ಸಿನಲ್ಲಿ ಟ್ರೊಲ್ ಪೇಜ್’ಗಳ ಪಾತ್ರವನ್ನು ಶ್ಲಾಘಸಿ ಧನ್ಯವಾದ ಹೇಳಿದ ನಿರಂಜನ್..!

ಬಿಗ್ ಬಾಸ್ ಯಶಸ್ಸಿನಲ್ಲಿ ಟ್ರೊಲ್ ಪೇಜ್’ಗಳ ಪಾತ್ರವನ್ನು ಶ್ಲಾಘಸಿ ಧನ್ಯವಾದ ಹೇಳಿದ ನಿರಂಜನ್..!

 

 

ಬಿಗ್’ಬಾಸ್ ಅಂದರೆ ರಿಯಾಲಿಟಿ ಶೋಗಳ ರಾಜ, ಅದು ಶುರುವಾದರೆ ಸಾಕು ಟ್ರೊಲ್ ಪೇಜ್’ಗಳಿಗೆ ಹಬ್ಬ ಬಿಗ್ ಬಾಸ್ ಮನೆಯಲ್ಲಿ ನಡೆಯುವ ವಿಷಯಗಳ ಮೇಲೆ ತಮ್ಮ ಕ್ರಿಯಾಶೀಲತೆಯ ಮೂಲಕ ಟ್ರೊಲ್ ಮಾಡಿ ಗೇಲಿಮಾಡಿ ಕಾಲೆಳೆಯುವ ಟ್ರೊಲ್ ಪೇಜ್ ಗಳು ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರಚಾರವನ್ನು ನೀಡುತ್ತವೆ. ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಎಂಟ್ರಿಕೊಟ್ಟಿದ್ದ ನಿರಂಜನ್ ಬಿಗ್ ಬಾಸ್ ಕಾರ್ಯಕ್ರಮದ ಗೆಲುವಿನಲ್ಲಿ ಪರೋಕ್ಷವಾಗಿ ಕಾರಣವಾಗಿರುವ ಸೋಷಿಯಲ್ ಮೀಡಿಯಾಗೆ ಕೃತಜ್ಞತೆಯನ್ನು ತಿಳಿಸಿದ್ದಾರೆ.

 

 

ಬಿಗ್ ಬಾಸ್ ಮನೆಗೆ ಬಂದಿದ್ದ ನಿರಂಜನ್ ಕ್ಯಾಮರವೊಂದರ ಮುಂದೆ ಬಂದು ”ಫೇಸ್ಬುಕ್, ಟ್ವಿಟರ್,ಇನ್ಸ್ಟಾಗ್ರಾಮ್, ವಾಟ್ಸಾಪ್ ಗಳಲ್ಲಿ ತುಂಬಾ ತುಂಬಾ ಆಕ್ಟಿವ್ ಆಗಿರುವಂತಹ ಎಲ್ಲಾ ಟ್ರೊಲ್ ಪೇಜ್ ಗಳಿಗೆ ಹ್ಯಾಟ್ಸಾಪ್ ಅಂತ ಹೇಳೋಕೆ ಇಷ್ಟ ಪಡ್ತೀನಿ. ಒಂದು ಶೋವನ್ನ ನೀವೇ ಎತ್ತಿ ಹಿಡಿಯುತ್ತಿದ್ದೀರಾ, ಸಿಕ್ಕಾಪಟ್ಟೆ ಫೇಮಸ್ ಮಾಡ್ತಿದ್ದೀರಾ. ಬಿಗ್ ಬಾಸ್ ಬಗ್ಗೆ ಗೊತ್ತಿಲ್ಲದೇ ಇರೋರು ಕೂಡ ನಿಮ್ಮ ಟ್ರೊಲ್ ಗಳನ್ನ ನೋಡಿ ಬಿಗ್ ಬಾಸ್ ನೋಡುವಂತೆ ಮಾಡುತ್ತಿದ್ದೀರಾ.”

 

 

“ನಿಮ್ಮ ಈ ಅದ್ಬುತ ಕೆಲಸಕ್ಕೆ ನನ್ನ ಕಡೆಯಿಂದ ಎಲ್ಲಾ ಟ್ರೊಲ್ ಪೇಜ್ ಗಳಿಗೆ ತುಂಬಾ ಥ್ಯಾಂಕ್ಸ್..ಇನ್ನು ಜಾಸ್ತಿ ಟ್ರೊಲ್ ಮಾಡಿ ತಮಾಷೆ ಇರಲಿ ಗೇಲಿ ಮಾಡಿ ಆದರೆ ಯಾವುದು ಅತಿರೇಕಕ್ಕೆ ಹೋಗದಿರಲಿ ನಿಮ್ಮ ಟ್ರಾಲ್ ಗಳು ಆರೋಗ್ಯಕರವಾಗಿರಲಿ ತೀರಾ ವಯಕ್ತಿಕವಾಗಿ ಬೇಡ..ಮತ್ತೊಮ್ಮೆ ಎಲ್ಲಾ ಟ್ರೊಲ್ ಪೇಜ್’ಗಳಿಗೂ ತುಂಬಾ ಥ್ಯಾಂಕ್ಸ್” ಎಂದು ನಿರಂಜನ್ ಟ್ರೊಲ್ ಪೇಜ್ ಗಳ ಕೆಲಸವನ್ನು ಮೆಚ್ಚಿಕೊಂಡು ಶ್ಲಾಘಿಸಿದರು.

 

 

ಟ್ರೊಲ್ ಪೇಜ್ ಗಳ ಬಗ್ಗೆ ನಿರಂಜನ್ ಹೇಳಿರುವ ಮಾತುಗಳನ್ನು ಕೇಳಲು ಈ ಲಿಂಕ್ ಕ್ಲಿಕ್ ಮಾಡಿ.

Niranjan’s gratuitous monologue

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top