fbpx
ಮನೋರಂಜನೆ

ಅಂಬಿ ನಿಂಗೆ ವಯಸ್ಸಾಯ್ತೋ ಅನ್ನಲು ಕಾರಣ ರಜನಿಕಾಂತ್!

ಅಂಬಿ ನಿಂಗೆ ವಯಸ್ಸಾಯ್ತೋ ಅನ್ನಲು ಕಾರಣ ರಜನಿಕಾಂತ್!

 

 

ಅಂಬರೀಶ್ ಮುಖ್ಯಭೂಮಿಕೆಯಲ್ಲಿರೋ ಅಂಬಿ ನಿಂಗೆ ವಯಸಾಯ್ತೋ ಚಿತ್ರ ಟೈಟಲ್ ಕಾರಣದಿಂದಲೇ ಭಲೇ ಪ್ರಸಿದ್ಧಿ ಪಡೆದಿದೆ. ಚಿತ್ರೀಕರಣಕ್ಕೂ ಮುಂಚೆಯೇ ಇಂಥಾದ್ದೊಂದು ಕ್ರೇಜ್ ಹುಟ್ಟಿಕೊಂಡಿರೋದು ನಿಜಕ್ಕೂ ಸಕಾರಾತ್ಮಕ ಬೆಳವಣಿಗೆ.

 

 

ಈ ಚಿತ್ರವನ್ನು ಕಿಚ್ಚ ಸುದೀಪ್ ಅವರೇ ನಿರ್ಮಿಸಿ, ತಾವೇ ಸ್ವತಃ ಒಂದು ಪಾತ್ರವನ್ನೂ ನಿರ್ವಹಿಸೋ ವಿಚಾರ ಈಗಾಗಲೇ ಜಾಹೀರಾಗಿದೆ. ಆದರೆ ಈ ಚಿತ್ರದ ಹುಟ್ಟಿನ ಹಿಂದೆ ಸೂಪರ್ ಸ್ಟಾರ್ ರಜನೀಕಾಂತ್ ಇದ್ದಾರೆಂಬ ಕುತೂಹಲಕಾರಿ ಅಂಶವನ್ನು ಸ್ವತಃ ಅಂಬರೀಶ್ ಅವರೇ ಹೇಳಿಕೊಂಡಿದ್ದಾರೆ!

 

 

ಅದೊಂದು ದಿನ ಇದ್ದಕ್ಕಿದ್ದಂತೆ ಅಂಬರೀಶ್ ಅವರಿಗೆ ಕರೆ ಮಾಡಿದ ರಜನೀಕಾಂತ್ ಉಬಯಕುಶಲೋಪರಿಯ ನಂತರ ‘ಪವರ್ ಪಾಂಡಿ ಚಿತ್ರ ತಂಬಾ ಚೆನ್ನಾಗಿದೆ. ನಿಮಗೆ ಅದರ ಕಥೆ ಹೇಳಿ ಮಾಡಿಸಿದಂತಿದೆ. ಒಂದು ಸಲ ನೋಡಿ ಅಂತ ಸಲಹೆ ನೀಡಿದ್ದರಂತೆ. ಅದರಂತೆ ಈ ಚಿತ್ರ ವೀಕ್ಷಿಸಿದ ಅಂಬಿ ಫುಲ್ ಖುಷ್ ಆಗಿದ್ದರಂತೆ. ಅದುವೇ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ಹುಟ್ಟಿಗೂ ಕಾರಣವಾಗಿದ್ದು ವಿಶೇಷ!

 

 

ಅಂಬರೀಶ್ ಪ್ರಕಾರ ಈ ಚಿತ್ರದ ಕಥೆ ಪ್ರಸ್ತುತ ಸನ್ನಿವೇಶಗಳಿಗೆ ತಕ್ಕುದಾಗಿದೆ. ಪ್ರತೀ ತಂದೆ ತಾಯಿಯೂ ತಮ್ಮ ಮಕ್ಕಳನ್ನು ನೆಲೆ ಕಾಣಿಸಲು ಜೀವನವನ್ನೇ ಮುಡಿಪಾಗಿಡುತ್ತಾರೆ. ಅದರ ದೆಸೆಯಿಂದಲೇ ದಡ ಸೇರೋ ಮಕ್ಕಳು ಅವರಿಗೆ ವಯಸಾದ ನಂತರ ಮೂಲೆಗುಂಪು ಮಾಡುತ್ತಾರೆ. ಇಂಥಾ ವಿಷಾದನೀಯ ಕಥಾ ಎಳೆಯ ಸುತ್ತ ಸುತ್ತೋ ಈ ಚಿತ್ರ ಕನ್ನಡಿಗರಿಗೆಲ್ಲ ಇಷ್ಟವಾಗುತ್ತದೆ ಎಂಬ ನಂಬಿಕೆ ಅಂಬರೀಶ್ ಅವರದ್ದು!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top