fbpx
ಕಿರುತೆರೆ

ಬಿಗ್’ಬಾಸ್ ನಲ್ಲಿ ಇವತ್ತು ಎಲಿಮಿನೇಷನ್ ಇಲ್ಲದಿರುವುದರ ಹಿಂದಿರುವ ಅಸಲಿ ಕಾರಣ ಏನು ಗೊತ್ತಾ..?

ಬಿಗ್’ಬಾಸ್ ನಲ್ಲಿ ಇವತ್ತು ಎಲಿಮಿನೇಷನ್ ಇಲ್ಲದಿರುವುದರ ಹಿಂದಿರುವ ಅಸಲಿ ಕಾರಣ ಏನು ಗೊತ್ತಾ..?

 

 

ಬಿಗ್’ಬಾಸ್ ಅಂದರೆ ರಿಯಾಲಿಟಿ ಶೋಗಳ ರಾಜ, ಬಿಗ್ ಬಾಸ್ ಶುರುವಾದರೆ ಸಾಕು ಕಿರುತೆರೆ ಮತ್ತು ಸೋಷಿಯಲ್ಯ ಮೀಡಿಯಾಗಳಲ್ಲಿ ಅದರದ್ದೇ ಹವಾ. ಹಾಗೆಯೇ ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮ ಕೂಡ ಇದಕ್ಕೆ ಹೊರತಾಗಿಲ್ಲ. ಪ್ರಾರಂಭವಾಗಿ ಆರು ವಾರಗಳು ಕಳೆದಿದ್ದು ಐದು ಜನ ಸ್ಪರ್ಧಿಗಳು ಸ್ಪರ್ಧೆಯಿಂದ ಎಲಿಮಿನೇಟ್ ಆಗಿದ್ದರೆ. ಆದರೆ ಎಲ್ಲರಿಗೂ ತಿಳಿದಿರುವಂತೆ ಆರನೇವಾರ ಬಿಗ್ ಬಾಸ್ ಮನೆಯಿಂದ ಯಾರೂ ಕೂಡ ಎಲಿಮಿನೇಟ್ ಆಗುವುದಿಲ್ಲ.

 

 

ಈ ವಾರ ಎಲಿಮಿನೇಷನ್ ಇಲ್ಲದಿರುವುದಿಲ್ಲ ಎಂದು ಈಗಾಗಲೇ ಕಾರ್ಯಕ್ರಮದ ಸಂಚಿಕೆಗಳಲ್ಲೇ ತಿಳಿಸಿದ್ದು ಯಾವುದೇ ವೋಟಿಂಗ್ ಲೈನ್ ಗಳು ತೆರೆದಿರುವುದಿಲ್ಲ ಎಂದು ಒಂದು ವಾರದಿಂದ ಸಂಚಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಈಗ ಏಕೆ ಈ ವಾರವೇ ನಾಮಿನೇಷನ್ ಇಲ್ಲ ಇದರ ಹಿಂದಿರುವ ಕಾರಣವೇನು ಎಂದೆಲ್ಲ ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ.

 

 

ಇಂದಿನಿಂದ ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಫ್ಯಾಮಿಲಿ ಪವರ್ ಎಂಬ ಹೊಸ ರಿಯಾಲಿಟಿ ಷೋ ಪ್ರಾರಂಭವಾಗುತ್ತಿದ್ದು ರಾತ್ರಿ 9 ಗಂಟೆಯಿಂದ ಪ್ರಸಾರವಾಗಲಿದೆ. ಮೊದಲ ಎಪಿಸೋಡ್ ನೋಡಿದರೆ ಅದರ ಕಾನ್ಸೆಪ್ಟ್ ಪೂರ್ತಿಯಾಗಿ ಅರ್ಥವಾಗುತ್ತದೆ ಹಾಗಾಗಿ ಈ ಕಾರ್ಯಕ್ರಮದ ಮೊದಲ ಎಪಿಸೋಡ್ ನೋಡಲು ವೀಕ್ಷಕರಿಗೆ ಯಾವುದೇ ಅಡೆತಡೆಗಳು ಎದುರಾಗಬಾರದೆಂಬ, ಕಾರಣಕ್ಕೆ ಬಿಗ್ ಬಾಸ್ ನಲ್ಲಿ ಈವಾರ ಎಲಿಮಿನೇಷನ್ ಪ್ರಕ್ರಿಯೆಯನ್ನ ಕ್ಯಾನ್ಸಲ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ..ಬಿಗ್ ಬಾಸ್ 8 ಗಂಟೆಯಿಂದ ಬರುತ್ತದೆ ಫ್ಯಾಮಿಲಿ ಪವಾರ್ 9 ಗಂಟೆಯಿಂದ ಬರುತ್ತದೆ ಅದಕ್ಕೂ ಇದಕ್ಕೂ ಏನ್ ಸಂಭಂದ ಅಂತೀರಾ.? ಬಿಗ್ ಬಾಸ್ 8 ಗಂಟೆಯಿಂದ ಸ್ಟಾರ್ಟ್ ಆದರೂ ಮುಗಿಯುವುದು 9.30ಕ್ಕೆ ಕೊನೆಯ ಅರ್ಧಗಂಟೆಯ ಬಿಗ್ ಬಾಸ್ ಕಾರ್ಯಕ್ರಮದ ಕೇಂದ್ರ ಬಿಂದು. ಮುಂದೆ ಓದಿ

 

 

ಒಂದು ವೇಳೆ ಬಿಗ್ ಬಾಸ್’ನಲ್ಲಿ ಎಲಿಮಿನೇಷನ್ ಇದ್ದರೆ ಕೊನೆಯ ಅರ್ಧಗಂಟೆಯಲ್ಲಿ ಎಲಿಮಿನೇಷನ್ ನಡೆಯುವುದರಿಂದ ಕಾರ್ಯಕ್ರಕ್ರಮದ ಕೊನೆಯ ಅರ್ಧಗಂಟೆಯನ್ನ ಕುತೂಹಲದಿಂದ ಬಹುತೇಕ ಮಂದಿ ನೋಡುತ್ತಾರೆ ಆಗ ಚಾನೆಲ್ ಚೇಂಜ್ ಮಾಡುವ ಗೋಜಿಗೆ ಹೋಗುವುದಿಲ್ಲ ಹಾಗೆಯೇ ಎಲಿಮಿನೇಷನ್ ಇಲ್ಲದೆ ಹೋದಲ್ಲಿ ಕಾರ್ಯಕ್ರಮದ ಇಂದಿನ ಎಪಿಸೋಡ್ ಮೇಲೆ ವೀಕ್ಷಕರಿಗೆ ಆಸಕ್ತಿ ಕಡಿಮೆಯಾಗಿ ‘ಫ್ಯಾಮಿಲಿ ಪವರ್’ ಕಾರ್ಯಕ್ರಮ ನೋಡುವ ಮನಸ್ಸು ಮಾಡುತ್ತಾರೆ ಹಾಗಾಗಿ ಎರಡು ಚಾನೆಲ್ ಗಳ ಮುಖ್ಯಸ್ಥರು ಒಬ್ಬರೇ ಆಗಿರುವುದರಿಂದ ಇದೆ ಲೆಕ್ಕಾಚಾರದ ಆಧಾರದ ಮೇಲೆ ಈ ವಾರ ಬಿಗ್ ಬಾಸ್ ನಲ್ಲಿ ಎಲಿಮಿನೇಷನ್ ಕ್ಯಾನ್ಸಲ್ ಮಾಡಿಸಲಾಗಿದೆ ಎಂದು ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top