fbpx
ಕಿರುತೆರೆ

ಜಯಶ್ರೀನಿವಾಸನ್’ರನ್ನು 420 ಎಂದು ಕರೆದು ಅವರ ವೃತ್ತಿಯ ಬಗ್ಗೆ ತುಚ್ಛವಾಗಿ ಮಾತನಾಡಿದ ದಿವಾಕರ್: ಮಾತಿನಲ್ಲೇ ಬುದ್ದಿ ಕಲಿಸಿದ ಕಿಚ್ಚ.

ಜಯಶ್ರೀನಿವಾಸನ್’ರನ್ನು 420 ಎಂದು ಕರೆದು ಅವರ ವೃತ್ತಿಯ ಬಗ್ಗೆ ತುಚ್ಛವಾಗಿ ಮಾತನಾಡಿದ ದಿವಾಕರ್: ಮಾತಿನಲ್ಲೇ ಬುದ್ದಿ ಕಲಿಸಿದ ಕಿಚ್ಚ.

 

 

ಬಿಗ್ ಬಾಸ್ ಸ್ಟಾರ್ಟ್ ಆದಗಿನಿಂದಲೂ ಕಾಮನ್ ಮ್ಯಾನ್ ಎಂದು ದಿವಾಕರ್ ಗೆ ಬೆಂಬಲ ವ್ಯಕ್ತಪಡಿಸುತ್ತಿದ್ದ ವೀಕ್ಷಕರು ಈಗ ದಿಢೀರನೆ ದಿವಾಕರ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದಕ್ಕೆ ಕಾರಣ ಈ ವರದ ಅವರ ವರ್ತನೆ. ಇಲ್ಲ ಸಲ್ಲದ ಕಾರಣಕ್ಕೆ ನಿವೇದಿತಾ, ರಿಯಾಜ, ಜಗನ್ ರೊಂದೊಂದಿಗೆ ಜಗಳ ಮಾಡಿಕೊಂಡಿದ್ದ ದಿವಾಕರ್ ನೆನ್ನೆಯ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಅತಿರೇಕದಿಂದ ವರ್ತಿಸಿ ಮತ್ತೊಬ್ಬ ಸ್ಪರ್ಧಿ ಜಯಶ್ರೀನಿವಾಸನ್ ಅವರ ವೃತ್ತಿಯನ್ನು ಅವಮಾನಿಸಿ ಮಾತನಾಡಿದ್ದಾರೆ.

 

 

ಜಯಶ್ರೀನಿವಾಸ್ ಗುರುಜೀ ದಿವಾಕರ್ ಗೇಮ್ ಪ್ಲಾನ್ ಮಾಡಿಕೊಂಡು ಆಟವಾಡುತ್ತಿದ್ದಾರೆ ಅವರಿಗೆ ಎಲ್ಲಾ ಗೊತ್ತು ಎಂದು ಹೇಳಿದಾಗ ರೊಚ್ಚಿಗೆದ್ದ ದಿವಾಕರ್ ” ನಂಬರ್ ಹೇಳ್ತಿನಿ, ಭವಿಷ್ಯ ಹೇಳ್ತಿನಿ ಅಂತ ಎಲ್ಲಾರಿಗೂ ಮೋಸ ಮಾಡಿ ದುಡ್ಡು ಕಿತ್ತಿಕೊಳ್ಳುತ್ತಿಲ್ಲ. ನಾನು ನಿನ್ನ ರೀತಿ 420 ಕೆಲಸ ಮಾಡಲ್ಲ. ನನ್ನ ಲೈಫಲ್ಲಿ ನಿನ್ನಂತ ಮೋಸ ಮಾಡೋರನ್ನ ಬೇಜಾನ್ ಜನರನ್ನ ನೋಡಿದ್ದೀನಿ. ನಿನ್ನ ರೀತಿ ಜನಕ್ಕೆ ಮೋಸ ಮಾಡಿಕೊಂಡು ಲಕ್ಷ ಲಕ್ಷ ಕಿತ್ಕೊಳಲ್ಲ ನಾನು” ಎಂದು ಬಾಯಿಗೆ ಬಂದ‌ ಹಾಗೆ ಅನವಶ್ಯಕವಾಗಿ ಮಾತಾನಾಡಿದ ದಿವಾಕರ್ ತನಗೆ ವೋಟ್ ಹಾಕಿದ ಜನರ ಬಗ್ಗೆಯೂ ಕೇವಲವಾಗಿ ಮಾತನಾಡಿದರು.

 

 

“ನಾನು ಯಾರಿಗೂ ವೋಟ್ ಹಾಕಿ ಅಂತ ಕೇಳಿಕೊಳ್ಳುತ್ತಿಲ್ಲ, ಜನ ನನಗೆ ಹಾಕುದ್ರೂ ನಂಗೇನೂ ಆಗಲ್ಲ ಹಾಕಲಿಲ್ಲದಿದ್ದರೂ ಏನೂ ಆಗಲ್ಲ, ಅದಕ್ಕೆಲ್ಲಾ ನಾನು ತಲೆಕೆಡಿಸಿಕೊಳ್ಳಲ್ಲ ಜನ ನಂಗೆ ವೋಟ್‌ ಹಾಕದಿದ್ರೂ ಚಿಂತೆಯಿಲ್ಲ ಇವತ್ತೇ ಬೇಕಾದ್ರೆ ಹೊರಗೆ ಹೋಗುತ್ತೇನೆ” ಎಂದು ದಿವಾಕರ್ ತಮ್ಮ ನಾಲಿಗೆಯನ್ನು ಹರಿದು ಬಿಟ್ಟರು.

 

 

ಇದನ್ನು ಆಕ್ಷೇಪಿಸಿದ ಸುದೀಪ್ “ಎಲ್ಲರೂ ಅವರವರ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಕೊಂಡು ಬಂದವರೇ. ಯಾರ ವೃತ್ತಿಯ ಬಗ್ಗೆಯೂ ಹಗುರವಾಗಿ ಅವಮಾನಮಾಡಿ ಮಾತನಾಡಬಾರದು, ನಿಮಗೆ ವೋಟ್ ಹಾಕುವ ಜನಗಳ ಬಗ್ಗೆ ಕೇವಲವಾಗಿ ಮಾತನಾಡಬೇಡಿ, ನಿಮಗೆ ಮನೆಯಲ್ಲಿ ಯಾರೂ ಅವಮಾನ ಮಾಡಿಲ್ಲ’ನಿಮ್ಮ ವೃತ್ತಿಯ ಬಗ್ಗೆ ಯಾರೂ ಕೆಟ್ಟದಾಗಿ ಮಾತನಾಡಿಲ್ಲ ಹಾಗೆಯೇ ನೀವೂ ಕೂಡ ಯಾರ ವೃತ್ತಿಯ ಬಗ್ಗೆಯೂ ಮಾತನಾಡುವ ಅಧಿಕಾರವಿಲ್ಲ. ನಿಮಗೆ ನಿಮ್ಮ ತೈಲನೇ ಮೋಸ ಅಂದ್ರೆ ಹೇಗಾಗುತ್ತೆ ವೃತ್ತಿಯನ್ನು ಅವಮಾನ ಮಾಡಬೇಡಿ ” ಎಂದು ಸುದೀಪ್ ಮಾತಿನಲ್ಲೇ ಏಟು ಕೊಟ್ಟರು.

 

 

ಜಯ ಶ್ರೀನಿವಾಸನ್ ರವರ ವೃತ್ತಿ ಮೋಸ ಅಂದಿದ್ದು ತಪ್ಪು ಅವರನ್ನು 420 ಅಂದಿದ್ದು ತುಂಬಾ ತಪ್ಪು. ಜನರನ್ನ ಯಾಮಾರಿಸಿ ಹಣ ವಸೂಲಿ ಮಾಡ್ತಾರೆ ಅಂದಿದ್ದು ಇನ್ನೊಂದು ತಪ್ಪು. ಯಾವುದೇ ವೃತ್ತಿಯಾಗಲೇ ಪ್ರತಿಯೊಂದಕ್ಕೂ ಅದರದ್ದೇ ಆದ ಗೌರವ ಇರುತ್ತದೆ. ಯಾವ ವೃತ್ತಿಯನ್ನು ಅವಮಾನ ಮಾಡಬಾರದು.ಜನ ನಿಮ್ಮ ಮೇಲೆ ನಂಬಿಕೆ ಇಟ್ಟಿದ್ರು. ಅದರೆ ಜನರಿಗೆ ಹೀಗೆ ಮಾತನಾಡ್ತಿದ್ದೀರಲ್ಲ. ಇದನ್ನೆ ಉಪ್ಪು ತಿಂದ ಮನೆಗೆ ದ್ರೋಹ ಬಗೆಯೋದು ಅನ್ನೋದು ವೀಕ್ಷಕರ ಮಾತು.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top