fbpx
ಕಿರುತೆರೆ

ಓಟು ಹಾಕಿದ ಜನರ ಬಗ್ಗೆ ತುಚ್ಛವಾಗಿ ನಾಲಿಗೆ ಹರಿದು ಬಿಟ್ಟ ದಿವಾಕರ್: ಮಾತಿನಲ್ಲೇ ಏಟುಕೊಟ್ಟ ಸುದೀಪ್.

ಓಟು ಹಾಕಿದ ಜನರ ಬಗ್ಗೆ ತುಚ್ಛವಾಗಿ ನಾಲಿಗೆ ಹರಿದು ಬಿಟ್ಟ ದಿವಾಕರ್: ಮಾತಿನಲ್ಲೇ ಏಟುಕೊಟ್ಟ ಸುದೀಪ್..!

 

 

ಬಿಗ್ ಬಾಸ್ ನಲ್ಲಿ ನೆನ್ನೆ ನಡೆದ ‘ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಸ್ಪರ್ಧಿ ದಿವಾಕರ್‌ ಅತಿರೇಕದಿಂದ ವರ್ತಿಸಿ ತಮಗೆ ವೋಟ್ ಹಾಕಿದ ಜನರ ಬಗ್ಗೆ ತೀರಾ ಕೆಳಮಟ್ಟದಲ್ಲಿ ಮಾತನಾಡಿದ್ದಾರೆ. ದಿವಾಕರ್ ಅವರ ಮಿತಿ ಮೀರಿದ ವರ್ತನೆ ಹಾಗೂ ಎಲ್ಲೆಯಿಲ್ಲದ ಮಾತುಗಳು ವೀಕ್ಷಕರಲ್ಲಿ ಕೋಪ ತರಿಸಿದೆ.

 

 

ದಿವಾಕರ್ ದಿನದಿಂದ ದಿನಕ್ಕೆ ಬದಲಾಗಿದ್ದಾರೆ ಅನ್ನೋ ವಿಷಯ ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಂದ ಹಿಡಿದು ವೀಕ್ಷಕರಿಗೂ ಅನಿಸುತ್ತಿದೆ. ನೆನ್ನೆ ಕಿಚ್ಚ ಸುದೀಪ್ ಮುಂದೆ ಮಾತನಾಡುವ ವೇಳೆಯಲ್ಲಿ ದಿವಾಕರ್ ತಮ್ಮ ನಾಲಿಗೆಯನ್ನು ಸ್ವಲ್ಪ ಜಾಸ್ತಿಯೇ ಹರಿಬಿಟ್ಟರು. ಶ್ರೀನಿವಾಸ್ ಗುರುಜೀ ದಿವಾಕರ್ ಗೇಮ್ ಪ್ಲಾನ್ ಮಾಡಿಕೊಂಡು ಆಟವಾಡುತ್ತಿದ್ದಾರೆ ಎಂದು ಹೇಳಿದಾಗ ರೊಚ್ಚಿಗೆದ್ದ ದಿವಾಕರ್ ಜಯ ಶ್ರೀನಿವಾಸ್ ರವರ ವೃತ್ತಿಯ ಬಗ್ಗೆ ಅತಿ ತುಚ್ಛವಾಗಿ 420,ಮೋಸಗಾರ ಎಂದೆಲ್ಲಾ ಬೈದು ಕೊನೆಗೊ ತಮಗೆ ಇಷ್ಟು ದಿನ ವೋಟ್ ಮಾಡಿದವರ ಬಗ್ಗೆಯೂ ಕೇವಲವಾಗಿ ಮಾತನಾಡಿದರು.

 

 

“ಜನ ನನಗೆ ಹಾಕುದ್ರೂ ನಂಗೇನೂ ಆಗಲ್ಲ ಹಾಕಲಿಲ್ಲದಿದ್ದರೂ ಏನೂ ಆಗಲ್ಲ, ಅದಕ್ಕೆಲ್ಲಾ ನಾನು ತಲೆಕೆಡಿಸಿಕೊಳ್ಳಲ್ಲ ಜನ ನಂಗೆ ವೋಟ್‌ ಹಾಕದಿದ್ರೂ ಚಿಂತೆಯಿಲ್ಲ ಇವತ್ತೇ ಬೇಕಾದ್ರೆ ಹೊರಗೆ ಹೋಗುತ್ತೇನೆ” ಎಂದು ದಿವಾಕರ್ ತಮ್ಮ ನಾಲಿಗೆಯನ್ನು ಹರಿದು ಬಿಟ್ಟರು.

 

 

ಇದನ್ನು ಆಕ್ಷೇಪಿಸಿದ ಸುದೀಪ್ “ಎಲ್ಲರೂ ಅವರವರ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಕೊಂಡು ಬಂದವರೇ. ಯಾರ ವೃತ್ತಿಯ ಬಗ್ಗೆಯೂ ಹಗುರವಾಗಿ ಅವಮಾನಮಾಡಿ ಮಾತನಾಡಬಾರದು, ನಿಮಗೆ ವೋಟ್ ಹಾಕುವ ಜನಗಳ ಬಗ್ಗೆ ಕೇವಲವಾಗಿ ಮಾತನಾಡಬೇಡಿ, ನಿಮಗೆ ಮನೆಯಲ್ಲಿ ಯಾರೂ ಅವಮಾನ ಮಾಡಿಲ್ಲ ನಿಮ್ಮ ವೃತ್ತಿಯ ಬಗ್ಗೆ ಯಾರೂ ಮಾತನಾಡಿಲ್ಲ ಹಾಗೆಯೇ ನೀವೂ ಕೂಡ ಯಾರ ವೃತ್ತಿಯ ಬಗ್ಗೆಯೂ ಮಾತನಾಡುವಂತಿಲ್ಲ” ಎಂದು ಸುದೀಪ್ ಮಾತಿನಲ್ಲೇ ಏಟು ಕೊಟ್ಟರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top