fbpx
ದೇವರು

ವಾಸ್ತು ಶಾಸ್ತ್ರದ ಪ್ರಕಾರ ಮಣ್ಣಿನಿಂದ ಮಾಡಿದ ಈ ವಸ್ತುಗಳನ್ನು ಮನೆಯ ಈ ಜಾಗಗಳಲ್ಲಿ ಇಟ್ಟರೆ ಸುಖ ಸಮೃದ್ಧಿ ಹೆಚ್ಚಿ ಆರ್ಥಿಕ ಸಮಸ್ಯೆ ಕಡಿಮೆಯಾಗುತ್ತದೆ

ಶಾಸ್ತ್ರದ ಪ್ರಕಾರ ಮಣ್ಣಿನಿಂದ ಮಾಡಿದ  ವಸ್ತುಗಳನ್ನು ಮನೆಯಲ್ಲಿಟ್ಟರೆ ಸುಖ ಸಮೃದ್ಧಿ ಹೆಚ್ಚುತ್ತದೆ.

 

ಪ್ರಕೃತಿಯ  ಅಮೂಲ್ಯ ಕೊಡುಗೆ ಮಣ್ಣು.ಇ೦ತಹ ಮಣ್ಣು ಮಾನವನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ಮಣ್ಣಿನಲ್ಲಿ ಅನೇಕ ಔಷಧೀಯ ಗುಣಗಳು ಸಹ ಅಡಗಿವೆ. ವಾಸ್ತು ಶಾಸ್ತ್ರದ ಪ್ರಕಾರ ಇದರ ಉಪಯೋಗದಿಂದ ಸುಖ, ಸಂತೋಷ ಸೌಭಾಗ್ಯವೂ ಪ್ರಾಪ್ತಿಯಾಗುತ್ತದೆ .

ಮಣ್ಣಿನ ಪಾತ್ರೆ ಮನೆಯಲ್ಲಿ  ಇದ್ದರೆ ಬುಧ ಹಾಗು ಚಂದ್ರನ ಆಶೀರ್ವಾದ ಸದಾ ಇರುತ್ತದೆ.  ಮನೆಯಲ್ಲಿರುವ ಕೆಲವೊಂದು ಮಣ್ಣಿನ ವಸ್ತುಗಳು ಕುಟುಂಬದಲ್ಲಿ ಶಾಂತಿ ಸಮೃದ್ಧಿ ನೆಲೆಸುವಂತೆ ಮಾಡಲು ಸಹಕಾರಿಯಾಗಿದೆ .

 

 

ಮಣ್ಣಿನ   ಮಡಿಕೆಯಲ್ಲಿ ನೀರನ್ನು ಇಟ್ಟು ಕುಡಿಯುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಮನೆಯಲ್ಲಿ ಸಕಾರಾತ್ಮಕ ಅಂಶ ನೆಲೆಸುತ್ತದೆ.

 

 

ದೇವರ ಮನೆಯಲ್ಲಿ ಮಣ್ಣಿನಿಂದ ಮಾಡಿದ ಮೂರ್ತಿಯನ್ನಿಟ್ಟು ಪೂಜೆ ಮಾಡುವುದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆ ಎಂದಿಗೂ ಕಾಡುವುದಿಲ್ಲ.

 

 

ಮನೆಯ ವಾತಾವರಣವನ್ನು ಸಕಾರಾತ್ಮಕ ಗೊಳಿಸಲು ಮಣ್ಣಿನಿಂದ ಮಾಡಿದ ಪಕ್ಷಿಯ ಮೂರ್ತಿಯನ್ನು ಈಶಾನ್ಯ ದಿಕ್ಕಿನಲ್ಲಿ ಇಡಬೇಕು.

 

 

ಪ್ರತಿದಿನ ಶುದ್ಧ ಹಸುವಿನ ತಾಜಾ ತುಪ್ಪವನ್ನು ಹಾಕಿ ಮಣ್ಣಿನಿಂದ ಮಾಡಿದ ಹಣತೆಯಲ್ಲಿ ದೀಪ ಹಚ್ಚಿ.ಹೀಗೆ ಮಾಡುವುದರಿಂದ  ದೇವತೆಗಳ ಕೃಪೆ ಸದಾ ನಿಮ್ಮ  ಕುಟುಂಬದವರ ಮೇಲೆ ನೆಲೆಸಿರುತ್ತದೆ.

ಸಂಸಾರದಲ್ಲಿ ಸಮಸ್ಯೆ ಶುರುವಾಗಿದ್ದರೆ ತುಳಸಿ ಮುಂದೆ ಮಣ್ಣಿನ ಹಣತೆಯಲ್ಲಿ ದೀಪ ಹಚ್ಚಬೇಕು  .

ಹಿಂದೂ ಧರ್ಮದ ಹಬ್ಬ ಹರಿದಿನಗಳಲ್ಲಿ ಮನೆಯಲ್ಲಿ ಮಣ್ಣಿನ ಹಣತೆಯಲ್ಲಿ ದೀಪ ಹಚ್ಚುವುದು ಶ್ರೇಷ್ಠ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

 

 

ಮಣ್ಣಿನಿಂದ ಮಾಡಿದ ಲೋಟದಲ್ಲಿ ಟೀ, ಕಾಫಿ, ಮಜ್ಜಿಗೆ ಏನೇ ಪಾನೀಯಗಳನ್ನು ಕುಡಿಯುವುದು  ಒಳ್ಳೆಯದು . ಹೀಗೆ ಮಣ್ಣಿನ ವಸ್ತುಗಳನ್ನು ಮನೆಯಲ್ಲಿ ಇಟ್ಟರೆ ಸುಖ ಸಮೃದ್ಧಿ ಹೆಚ್ಚಾಗುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top