fbpx
ಭವಿಷ್ಯ

ಈ ರಾಶಿಯವರು ಕೋಪ ಬಂದರೆ ಅಥವಾ ತೊಂದರೆ ಕೊಟ್ಟರೆ ಅವರನ್ನು ಅವಮಾನಿಸಲು ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತಾರೆ.

ಮನುಷ್ಯನಾಗಲಿ, ಪ್ರಾಣಿಗಳಾಗಲಿ ಈ ಭೂಮಿಯ ಮೇಲೆ ಜನಿಸಿದವರಿಗೆ ಕೋಪ ಇದ್ದೇ ಇರುತ್ತದೆ. ಅದು ಎಲ್ಲ ವರ್ಗಗಳಲ್ಲೂ ಇರುವುದು ಸರ್ವೇ ಸಾಮಾನ್ಯವಾಗಿದೆ. ಆದರೆ ಕೆಲವರಿಗೆ ಕೋಪ ತುಂಬಾ ಬೇಗನೆ ಮತ್ತು ಹೆಚ್ಚಾಗಿ ಬರುವುದು ಹಾಗೂ ಚಿಕ್ಕ ಚಿಕ್ಕ ವಿಷಯಗಳಿಗೂ ಕೂಡ ಕೋಪ ಮಾಡಿಕೊಳ್ಳುತ್ತಾರೆ. ಇವರ ಕೋಪ ಅತಿಯಾದಾಗ ಅವರ ಹತ್ತಿರ  ಕೂಡ ಸುಳಿಯಲು ಆಗುವುದಿಲ್ಲ.

 

ನೀವು ಕೂಡ ಅಂತಹವರನ್ನು ನೋಡಿರಬಹುದು ಅಥವಾ ನೀವೇ ಆ ರೀತಿ ಇರಬಹುದು. ಇದಕ್ಕೆ ಕಾರಣ ಅವರ ಜನ್ಮರಾಶಿ ಮತ್ತು ನಕ್ಷತ್ರ ಎಂದು ಸಹ ಹೇಳುತ್ತಾರೆ. ಜ್ಯೋತಿಷ್ಯ ಶಾಸ್ತ್ರ ತಜ್ಞರು ಇದಕ್ಕೆ ಹೇಗೆ ಅವರ  ನಕ್ಷತ್ರ ಮತ್ತು ರಾಶಿ ಕಾರಣವಾಗುತ್ತದೆ ? ಹಾಗೆ ಯಾವ ಯಾವ ರಾಶಿಯವರಿಗೆ ಕೋಪ ಹೆಚ್ಚು ಬರುವುದು ಎಂದು ತಿಳಿಸಿದ್ದಾರೆ … ಬನ್ನಿ ತಿಳಿದುಕೊಳ್ಳೋಣ

 

ವೃಷಭ ರಾಶಿ.

ವೃಷಭ ರಾಶಿಯ ಸೂರ್ಯ ಚಿಹ್ನೆಯಾಗಿದೆ.ಇದು ಗೂಳಿಯನ್ನು ಪ್ರತಿನಿಧಿಸುತ್ತದೆ. ಹಾಗಾಗಿ ಈ ರಾಶಿಯವರು ಬೇಗನೆ ಕೋಪಗೊಳ್ಳುತ್ತಾರೆ ಮತ್ತು ಅವರ ಕೋಪವನ್ನು ಊಹಿಸಲು ಸಹ ಆಗುವುದಿಲ್ಲ. ಅಷ್ಟು ಹೆಚ್ಚಾಗಿ ಕೋಪಗೊಳ್ಳುತ್ತಾರೆ. ಇವರು ಕೋಪಗೊಂಡಾಗ ಬೇರೆಯವರನ್ನು ಹಿಂಸಿಸಬಹುದು.

ಹೆಚ್ಚಿನ ಸಮಯ ಇವರು ಕೋಪಗೊಂಡರೆ ಇವರನ್ನು ಇವರೇ ಹಿಂಸಿಸಿಕೊಳ್ಳುತ್ತಾರೆ. ಇವರ ಕೋಪಗೊಳ್ಳುವುದು ಸೂಕ್ತ ವಿಷಯಗಳ ಮೇಲೆ ಇವರು ತಪ್ಪನ್ನು ಸಹಿಸುವುದಿಲ್ಲ. ಇವರು ಕೋಪಗೊಂಡಾಗ ಸಮಾಧಾನ ಮಾಡುವುದು ಅಷ್ಟು ಸುಲಭದ ಮಾತಲ್ಲ. ಇವರು ಮೊಂಡುತನವನ್ನು ತೋರಿಸುತ್ತಾರೆ. ಇವರು ಕೋಪಗೊಂಡಾಗ ಸಮಾಧಾನ ಮಾಡುವುದಕ್ಕಿಂತ ಅವರಿಂದ ಸ್ವಲ್ಪ ಸಮಯ ದೂರ ಇರುವುದೇ ಒಳ್ಳೆಯದು.

 

ಸಿಂಹ ರಾಶಿ.

ಈ ಸಿಂಹ ರಾಶಿಯವರು ಹೆಚ್ಚಾಗಿ ಅಧಿಕಾರವನ್ನು ಸ್ಥಾಪಿಸಲು ಕೋಪವನ್ನು ಪ್ರದರ್ಶಿಸುತ್ತಾರೆ .ಈ ರಾಶಿಯವರು ಇವರಿಗಿಂತ ಕಡಿಮೆ ಕೆಳವರ್ಗದವರ ಅಥವಾ ಕಿರಿಯರ ಮೇಲೆ ಕೋಪಗೊಳ್ಳುತ್ತಾರೆ. ಅವರ ಮೇಲೆ ತಮ್ಮ ಅಧಿಕಾರವನ್ನು ಪ್ರದರ್ಶಿಸುತ್ತಾರೆ. ಇವರು ಒಬ್ಬರನ್ನು ಅವಮಾನಿಸಲು ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತಾರೆ. ಇವರು ಅಧಿಕಾರವನ್ನು ಪ್ರದರ್ಶಿಸುವಾಗ ನೀವು ನಿಮ್ಮ ಅನಿಸಿಕೆ ಮತ್ತು ನಿರ್ಧಾರಗಳನ್ನು ಅವರಿಗೆ ತಿಳಿಸಬೇಕು. ನ್ಯಾಯವಾದ ರೀತಿಯಲ್ಲಿ ಇದ್ದಾಗ ಭಯಪಡುವ ಅಗತ್ಯವಿಲ್ಲ.

ವೃಶ್ಚಿಕ ರಾಶಿ.

ಇವರ ರಾಶಿಯ ಚಿಹ್ನೆ ಚೇಳು ಆಗಿರುವುದು. ಚೇಳು ಯಾವಾಗಲೂ ಶೀತ ಅಥವಾ ತಣ್ಣನೆಯ ಪ್ರದೇಶದಲ್ಲಿ ಹೆಚ್ಚು ಇರುತ್ತದೆ. ಇವುಗಳಿಗೆ ಕೋಪ ಬಂದಾಗ ಅಥವಾ ಭಯವಾದಾಗ ಇವು ಹೇಗೆ ವರ್ತಿಸುತ್ತವೆ ಹಾಗೆ ಈ ರಾಶಿಯ ಜನರು ಕೂಡ ಇವರ ಮನಸ್ಸಿನಲ್ಲಿ ಇರುವುದನ್ನು ಯಾರೂ ತಿಳಿದುಕೊಳ್ಳಲು ಆಗುವುದಿಲ್ಲ. ಇವರ ಕೆಟ್ಟ ನಡವಳಿಕೆ ಏನೆಂದರೆ ಇವರನ್ನು ಇಷ್ಟಪಡುವ ಜನರನ್ನು ತುಂಬಾ ಅವಮಾನಿಸುತ್ತಾರೆ. ಇವರನ್ನು ಮನವೊಲಿಸಲು ಬೆಣ್ಣೆ ಹಚ್ಚುವ ಕೆಲಸ ಮಾಡಬೇಕಾಗುತ್ತದೆ.

 

ಧನಸ್ಸು ರಾಶಿ.

ಈ ರಾಶಿಯವರು ಬೆಂಕಿಯ ಹಾಗೆ. ಇವರು ಹೆಚ್ಚಾಗಿ ಸೌಮ್ಯವಾಗಿ ಇರುತ್ತಾರೆ. ಕೋಪಗೊಂಡಾಗ ಜ್ವಾಲಾಮುಖಿಯಾಗಿ ಬದಲಾಗುತ್ತಾರೆ. ಇವರ ಮನಸ್ಸಿಗೆ ನೋವಾಗುವ ಹಾಗೆ ನಡೆದುಕೊಳ್ಳಬೇಡಿ. ಇವರು ಕೋಪಗೊಂಡಾಗ ಬೇಗನೆ ಸಮಾಧಾನವಾಗುತ್ತಾರೆ.ಹಾಗೆ  ತಮ್ಮ ತಪ್ಪಿಗೆ ಬೇಗನೆ ಕ್ಷಮೆಯಾಚಿಸುತ್ತಾರೆ.

 

ಮಕರ ರಾಶಿ.

ಮಕರ ರಾಶಿಯವರು ಕೋಪಗೊಂಡಾಗ ಅದನ್ನು ಅತ್ಯಂತ ಕೆಟ್ಟ ಸಮಯ ಎಂದು ಭಾವಿಸಬಹುದು. ಯಾರ ಮೇಲೆ ಕೋಪ ಮಾಡಿಕೊಂಡಿರುತ್ತಾರೆ ಅವರನ್ನು ಮಾತನಾಡಿಸುವುದಿಲ್ಲ  ಎಲ್ಲವನ್ನೂ ಅವಮಾನಿಸಿದಂತೆ ಹೇಳುತ್ತಾರೆ. ಇವರನ್ನು ಕ್ರಿಯಾತ್ಮಕವಾಗಿ ಮಾತನಾಡಿಸಲು ಪ್ರಯತ್ನಿಸಬೇಕು. ಇವರ ಮನಸ್ಸನ್ನು ಬೇರೆ ಕಡೆಗೆ ವರ್ಗಾಯಿಸಬೇಕು ಅಥವಾ ಬದಲಾಯಿಸಬೇಕು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top