fbpx
ದೇವರು

ಮನೆಯಲ್ಲಿ  24 ಗಂಟೆ ನಿತ್ಯ ದೀಪ ಬೆಳಗಿಸಿದರೆ ಆಗುವ ಪರಿಣಾಮ ಏನು ? ದೀಪ ರಾತ್ರಿ ಮಲಗುವಾಗ ಆರಿಸಿಲ್ಲ ಅಂದರೆ ಏನಾಗತ್ತೆ ಗೊತ್ತಾ ?

ಮನೆಯಲ್ಲಿ  24 ಗಂಟೆ ನಿತ್ಯ ದೀಪ ಬೆಳಗಿಸಿದರೆ ಆಗುವ ಪರಿಣಾಮ ಏನು ?

 

ಮನೆಯಲ್ಲಿ  ದಿನದ 24 ಗಂಟೆಯೂ ಸಹ ದೀಪವನ್ನು ಉರಿಸಬಾರದು.ಯಾಕೆ ಅಂತ ಯಾರಿಗೂ ಗೊತ್ತಿಲ್ಲ ?ನಾವೆಲ್ಲರೂ ಮನೆಯಲ್ಲಿ ದೀಪ ಸದಾ ಕಾಲ ಉರಿಯುತ್ತಾ ಇದ್ದರೆ ಒಳ್ಳೆಯದು ಅಂದುಕೊಂಡು ಉರಿಸುತ್ತೇವೆ.ಆದರೆ ಅದು ತಪ್ಪು.ಉರಿಸಬಾರದು ಯಾಕೆ ಅಂತ ತಿಳಿದುಕೊಳ್ಳೋಣ.

 

 

ದಿನದ 24 ಗಂಟೆಯೂ ಸಹ ದೀಪ ಎಲ್ಲಿ ಉರಿಯಬೇಕು ಅಂದರೆ ದೇವಾಲಯಗಳಲ್ಲಿ.ಶತ ಶತ ಮಾನಗಳಿಂದಲೂ ಆರಿ ಹೋಗದ ದೀಪಗಳಿದ್ದಾವೆ,ಉರಿಯುತ್ತಾ ಇದ್ದಾವೆ ಅಂದರೆ ಅವು ಎಲ್ಲಿ ಗೊತ್ತಾ ?  ದೇವಾಲಯಗಳಲ್ಲಿ ಮಾತ್ರ.

ಮನೆಯಲ್ಲಿ ಅಡುಗೆ ಮನೆಯಲ್ಲಿ ಬೆಂಕಿ ಯಾವಾಗ್ಲೂ ಉರಿತಾನೆ ಇದ್ದರೆ ಅದು ಅನ್ನ ಪೂರ್ಣೇಶ್ವರಿಯ ಸ್ಥಾನ ಅದರ ಸಂಕೇತ.ಮನೆಗೆ ಯಾರು ಬಂದರೂ ಊಟ ಇಲ್ಲ ಅಂತ ಹೇಳಲ್ಲ ಆ ಮನೆಯಲ್ಲಿ.

ಆದರೆ ಮನೆಯಲ್ಲಿ ಹಚ್ಚಿದ ದೀಪ 24 ಗಂಟೆಯೂ ಉರಿಯುತ್ತಿರಬಾರದು .ಬೆಳಗ್ಗೆ ಹಚ್ಚಿದ ದೀಪ  ಅಕಸ್ಮಾತ್ತಾಗಿ  ಆರಿ ಹೋಗಿಲ್ಲ ಅಂದರೆ ಇನ್ನೂ ಸ್ವಲ್ಪ ಎಣ್ಣೆ ಇದೆ ಅಂದರೆ ನೀವೇ ರಾತ್ರಿ ಮಲಗುವಾಗ ಆರಿಸಬೇಕು.

 

ದೀಪ ರಾತ್ರಿ  ಮಲಗುವಾಗ ಆರಿಸಿಲ್ಲ ಅಂದರೆ ಏನಾಗತ್ತೆ ಗೊತ್ತಾ ?

 

ಮನೆಯಲ್ಲಿರುವ  ಹಿರಿಯರು ನರಳುತ್ತಾರೆ. ತಂದೆ, ತಾಯಿಗಳು, ಒದ್ದಾಡುತ್ತಾರೆ .ನಾನಾ ರೀತಿಯ ವ್ಯಾಧಿಗಳು,ನೋವು,ಖಾಯಿಲೆಗಳುಅವರನ್ನು  ಕಾಡುತ್ತವೆ.

ಅತಿ ಮುಖ್ಯವಾಗಿ ಮನೆಯಲ್ಲಿ ಇರುವ ಗೃಹಿಣಿಯರು ಸುಸ್ತಾಗಿ ಬಿಡುತ್ತಾರೆ. ದಣಿದು ಹೋಗುತ್ತಾರೆ.ಯಾಕೆಂದರೆ ಮನೆಯಲ್ಲಿ ಉರಿಯುತ್ತಿರುವ ಒಂದು ದೀಪ ಆ ಮನೆಯ ಮುಖ್ಯ ಗೃಹಿಣಿಯ ಸಂಕೇತ.

 

 

ನಾವು ಬೆಳ್ಳಗ್ಗೆಯಿಂದ ರಾತ್ರಿಯಾಗುವ ತನಕ ಹೇಗೆ ದುಡಿದು ,ಕೆಲಸ ಮಾಡಿ, ಸುಸ್ತಾಗಿ, ಸಾಕಾಗಿ  ರಾತ್ರಿ ಮಲಾಗುತ್ತೇವೋ,ವಿಶ್ರಾಂತಿ ತೆಗೆದುಕೊಳ್ಳುತ್ತೇವೋ ಹಾಗೆ ದೀಪಕ್ಕೂ ರಾತ್ರಿಯ ಸಮಯದಲ್ಲಿ ವಿಶ್ರಾಂತಿ  ಬೇಕು.

ಅದು ನಮ್ಮ ತಾಯಿ ಇರಬಹುದು,ಧರ್ಮ ಪತ್ನಿ ಇರಬಹುದು ಅಥವಾ ಸಹೋದರಿ ಇರಬಹುದು ಅವರ ಪೂರ್ಣತ್ವದ ಸಂಕೇತ ಈ ದೀಪ.

ಆದ್ದರಿಂದ ಮನೆಯಲ್ಲಿ ದೊಡ್ಡವರು ರಾತ್ರಿ ಮಲಗುವಾಗ ದೀಪ ಆರಿಸಿ ಮಲಗಿ ಅಂತ ಹೇಳ್ತಾರೆ ಅಂದರೆ ನೆಮ್ಮದಿಯಿಂದ ಮಲಗಿ ಅನ್ನುವುದರ ಸಂಕೇತ.ಇನ್ನೂ ಮುಂದೆ ಆದರೂ ಮಲಗುವಾಗ ಎಲ್ಲರೂ ದೇವರ ಮನೆಯಲ್ಲಿ ಹಚ್ಚಿರುವ ದೀಪವನ್ನು ಆರಿಸಿ ಮಲಗಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top