fbpx
ಬಿಗ್ ಬಾಸ್

ಕಿಚ್ಚನ ಎದುರೇ ಕೀರ್ತಿ ವಿರುದ್ಧ ರೊಚ್ಚಿಗೆದ್ದ ಅನುಪಮ ತಾಯಿ.

ರೊಚ್ಚಿಗೆದ್ದ ಅನುಪಮ ತಾಯಿ.

 

ನಿಮಗೆಲ್ಲರಿಗೂ ಗೊತ್ತಿರುವಂತೆ ಈ ವಾರ ಬಿಗ್ ಬಾಸ್ ನಲ್ಲಿ ಬೋರ್ಡಿಂಗ್ ಸ್ಕೂಲ್ ಲಕ್ಷುರಿ ಬಜೆಟ್ ಟಾಸ್ಕ್ ಜಾರಿಯಲ್ಲಿತ್ತು. ಈ ಸ್ಕೂಲ್ ಗೆ ಪ್ರತಿದಿನದ ಶಿಕ್ಷಕರ ವೇಷತೊಟ್ಟು ಅತಿಥಿಗಳಾಗಿ ಹೋಗಿದ್ದರು. ಕಳೆದ ಸೀಸನ್ ನಲ್ಲಿ ಸ್ಪರ್ಧಿಗಳಾಗಿದ್ದ ಕೀರ್ತಿ,ಶೀತಲ್,ಶಾಲಿನಿ ಮತ್ತು ನಿರಂಜನ್ ಶಿಕ್ಷಕರಾಗಿ ದೊಡ್ಮನೆಗೆ ಕಾಲಿಟ್ಟಿದ್ದರು.

ಈ ವಾರ ಎಲಿಮಿನೇಷನ್ ಇಲ್ಲದ ಕಾರಣ ಭಾನುವಾರದ ಸಂಚಿಕೆಯಲ್ಲಿ ಶಿಕ್ಷಕರಾಗಿ ಹೋಗಿದ್ದವರನ್ನು ಮತ್ತು ಬಿಗ್ ಬಾಸ್ ಸ್ಪರ್ಧಿಗಳ ಕುಟುಂಬದಿಂದ ಒಬ್ಬೊಬ್ಬರನ್ನು ಕರೆಸಿ ಪೋಷಕರ ಸಭೆ ನಡೆಸಿವಂತೆ ಬಿಗ್ ಬಾಸ್ ವೇದಿಕೆಯ ಮೇಲೆ ವ್ಯವಸ್ಥೆ ಮಾಡಿ ಕೂರಿಸಿದ್ದರು. ಶಿಕ್ಷಕರಾಗಿ ಹೋಗಿದ್ದವರು ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಯಾವ ರೀತಿ ಇದ್ದಾರೆ ಮತ್ತು ಅವರು ಹೇಗೆ ಇರಬೇಕು ಎಂದು ಅವರಿಗೆ ಹೇಳಿದರು.

ಇದೇ ವೇಳೆ ಬಿಗ್ ಬಾಸ್ ಸದಸ್ಯರ ಮೇಲೆ ಸೋಶಿಯಲ್ ಮೀಡಿಯಗಳಲ್ಲಿ ನಡೆಯುತ್ತಿರುವ ಟ್ರೋಲ್ ಗಳ ಬಗ್ಗೆ ಯಾರೂ ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ ದಿನದ 24 ಗಂಟೆಯ ವಿಡಿಯೋದಲ್ಲಿ ಕೇವಲ ಒಂದೂವರೆ ಗಂಟೆಯ ಎಪಿಸೋಡ್ ಮಾತ್ರ ನೀವೆಲ್ಲಾ ನೋಡೋದು ಅದರಿಂದ ವ್ಯಕ್ತಿತ್ವಗಳನ್ನ ನಿರ್ಧರಿಸೋಕೆ ಆಗಲ್ಲ ಎಂದು ಕೀರ್ತಿ ಹೇಳಿದರು. ನಂತರ ಎಲ್ಲಾ ಸದಸ್ಯರ ಬಗ್ಗೆ ಅವರವರ ಕುಟುಂಬದವರ ಜೊತೆ ಮಾತನಾಡಿದ ಕೀರ್ತಿಯನ್ನು ಅನುಪಮಾ ತಾಯಿಯ ಜೊತೆಯಲ್ಲೂ “ನಿಮ್ಮ ಮಗಳೂ ಇತಿಹಾಸವನ್ನು ಕೆದುಕಬಾರದು ” ಎಂದು ಹೇಳಿದರು.

 

 

ಈ ಮದ್ಯೆ ಬಿಗ್ ಬಾಸ್ ನಿಂದ ವಾಪಸ್ಸು ಬಂದಾಗ ಕೀರ್ತಿ ತಮ್ಮ ಫೇಸ್ಬುಕ್ ಪೋಸ್ಟ್ ನಲ್ಲಿ ಈಗಿನ ಕೆಲ ಬಿಗ್ ಬಾಸ್ ಸ್ಪರ್ಧಿಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಅದರಲ್ಲಿ ಅನುಪಮಾ ಅವರ ಬಗ್ಗೆ ಏನೂ ಹೇಳಿರಲಿಲ್ಲ ಇದನ್ನು ತಲೆಯಲ್ಲಿ ಇಟ್ಟುಕೊಂಡಿದ್ದ ಅನುಪಮ ತಾಯಿ ಕೀರ್ತಿ ತಮ್ಮೊಡನೆ ಮಾತನಾಡಲು ಬರುತ್ತಿದ್ದಂತೆ ಎಲ್ಲರ ಎದುರೇ ಕೀರ್ತಿ ವಿರುದ್ಧ ಗರಂ ಆದರು.

 

 

“ಅನುಪಮ ಹಿಸ್ಟ್ರಿ ಕೆದಕುತ್ತಿದ್ದಾಳೆ ಅಂತ ಹೇಳ್ತೀರಲ್ಲ, ನೀವು ಬಿಗ್ ಬಾಸ್ ಮನೆಗೆ ಹೋದಾಗ ಅಲ್ಲಿ ಅವಳಿಗೆ ಬುದ್ದಿ ಹೇಳಿ ಬರಬಹುದಿತ್ತು. ಆದರೆ ನೀವು ಹಾಗೆ ಮಾಡಲಿಲ್ಲ. ಅಲ್ಲಿಂದ ಬಂದ ಮೇಲೆ ಫೇಸ್ಬುಕ್ ವಿಡಿಯೋ ಮಾಡಿದ್ರಿ ಅಲ್ಲಿ ಕೂಡ ನಾಲ್ಕು ಸ್ಪರ್ಧಿ ಗಳ ಬಗ್ಗೆ ಮಾತಾಡಲಿಲ್ಲ , ನನ್ನ ಮಗಳನ್ನು ಹೋಗಳಲಿಲ್ಲವಲ್ಲ ಯಾಕೆ.” ಎಂದು ಕೀರ್ತಿಯನ್ನು ಅನುಪಮ ತಾಯಿ ಏರುಧ್ವನಿಯಲ್ಲಿ ಕೇಳಿದರು.

 

 

ಅದಕ್ಕೆ ಕೀರ್ತಿ “ಫೇಸ್ಬುಕ್ನಲ್ಲಿ ಹೇಳಿದ್ದು ನನ್ನ ಅಭಿಪ್ರಾಯ ನನಗೆ ಇಷ್ಟ ಆದವರ ಬಗ್ಗೆ ನಾನು ಹೇಳಿದೆ” ಎಂದರು. ನಂತರ ಅನುಪಮ ತಾಯಿ ವಾದಿಸಲು ಮುಂದಾದಾಗ ಇವರ ಮಾತಿನ ಚಕಮಕಿ ಅತಿರೇಕಕ್ಕೆ ಹೋಗುತ್ತಿರುವುದನ್ನು ಕಂಡು ಮಧ್ಯ ಪ್ರವೇಶಿಸಿದ ಕಿಚ್ಚ “ನಮ್ಮ ವೇದಿಕೆಯಲ್ಲಿ ಯಾರು ಜಗಳ ಮಾಡುವಂತಿಲ್ಲ, ನಾವು ಯಾರನ್ನೂ ಜಗಳ ಮಾಡಿಸೋಕೆ ಇಲ್ಲಿ ಕರೆಸಿಲ್ಲ, ಆರಾಮಾಗಿ ಮಾತುಕತೆ ಮಾಡೋಣ” ಎಂದು ಹೇಳು ಅನುಪಮ ತಾಯಿಯನ್ನು ಸಮಾಧಾನ ಪಡಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top