fbpx
ಮನೋರಂಜನೆ

ಬಾಲ್ಯದ ಭಾವಚಿತ್ರದ ಮೂಲಕ ರಿಫ್ರೆಶ್ ಆದ ದೀಪಿಕಾ!

ಬಾಲ್ಯದ ಭಾವಚಿತ್ರದ ಮೂಲಕ ರಿಫ್ರೆಶ್ ಆದ ದೀಪಿಕಾ!ಬಣ್ಣದ ಲೋಕದಲ್ಲಿ ಸಂಬಂಧಗಳ ವ್ಯಾಲಿಡಿಟಿ ಕಡಿಮೆ. ಆದರೆ ಆ ಜಗತ್ತಿನಲ್ಲಿಯೂ ಬಂಧಗಳನ್ನು ಬಹು ಕಾಲದಿಂದ ಜತನದಿಂದ ಕಾಪಾಡಿಕೊಂಡು ಬರೋ ಸೆನ್ಸಿಟಿವ್ ಮನಸುಗಳೂ ಇದ್ದಾವೆಂಬುದು ಆಶಾದಾಯಕ ವಿಚಾರ. ಅಂಥಾದ್ದೊಂದು ಅಪರೂಪದ ಮನಸ್ಥಿತಿಯ ಮೂಲಕ ದೀಪಿಕಾ ಪಡುಕೋಣೆ ತಮ್ಮ ಯುವ ಅಭಿಮಾನಿಗಳಿಗೆ ಮುದ ನೀಡಿದ್ದಾರೆ!

ಪದ್ಮಾವತಿ ಚಿತ್ರದ ವಿವಾದ, ಅದರಿಂದ ಎದುರಾದ ಕ್ರೌರ್ಯಪೂರಿತ ಪ್ರಹಾರಗಳಿಂದ ದೀಪಿಕಾ ತಬ್ಬಿಬ್ಬುಗೊಂಡಂತಿದ್ದರು. ಆಕೆಯ ಅಭಿಮಾನಿಗಳೂ ಕೂಡಾ ದುರಾದೃಷ್ಟಕರವಾದ ಈ ವಿದ್ಯಮಾನದಿಂದ ಕಸಿವಿಸಿಗೊಂಡಿದ್ದರು. ಆದರೆ ದೀಪಿಕಾ ಇನ್ಸ್ಟಾಗ್ರಾಮ್‌ನಲ್ಲಿ ತನ್ನ ಬಾಲ್ಯದ ಗೆಳೆಯನ ಜೊತೆಗಿನ ಮುದ್ದಾದ ಫೋಟೋ ಹಾಕಿಕೊಳ್ಳೋ ಮೂಲಕ ರಿಫ್ರೆಶ್ ಆಗಿದ್ದಾರೆ. ಜೊತೆಗೆ ಅಭಿಮಾನಿಗಳೂ ನಿರಾಳವಾಗುವಂತೆ ಮಾಡಿದ್ದಾರೆ.

ದೀಪಿಕಾ ತಮ್ಮ ಬಾಲ್ಯ ಸ್ನೇಹಿತ ಆದಿತ್ಯ ನಾರಾಯಣ್ ಜೊತೆಗಿನ ಬಾಲ್ಯದ ಫೋಟೋ ಮತ್ತು ಇತ್ತೀಚಿನ ಫೋಟೋ ಹಾಕಿಕೊಳ್ಳೋ ಮೂಲಕ ಸ್ನೇಹದ ಗಟ್ಟಿತನ ಸಾರಿದ್ದಾರೆ. ಈ ಮೂಲಕ ಅವರ ಯುವ ಅಭಿಮಾನಿಗಳಿಗೂ ಮುದ ನೀಡಿದ್ದಾರೆ. ದೀಪಿಕಾರ ಎಳೇ ವಯಸ್ಸಿನ ಫೋಟೋಗಳು ಅಭಿಮಾನಿಗಳನ್ನು ಹುಚ್ಚೆಬ್ಬಿಸೋ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top