fbpx
ಮನೋರಂಜನೆ

ಕನ್ನಡಕ್ಕೆ ಬರ್ತಾಳಾ ಸಾಯಿಪಲ್ಲವಿ?

ಪ್ರೇಮಂ ಚಿತ್ರದ ಮೂಲಕ ಏಕಾಏಕಿ ಸ್ಟಾರ್ ನಟಿಯಾಗಿ ಹೊರ ಹೊಮ್ಮುತ್ತಲೇ ಯುವ ಸಮೂಹದ ಹಾಟ್ ಫೇವರಿಟ್ ಹೀರೋಯಿನ್ ಆದಾಕೆ ಸಾಯಿಪಲ್ಲವಿ. ಕನ್ನಡದಲ್ಲೂ ಆಕೆಯ ಅಭಿಮಾನಿ ಬಳಗಕ್ಕೇನೂ ಕೊರತೆ ಇಲ್ಲ. ಇಂಥವರು ಆಕೆಯನ್ನು ಕನ್ನಡ ಚಿತ್ರದಲ್ಲಿ ನೋಡಲು ಹಾತೊರೆಯುತ್ತಿರೋದೂ ಸುಳ್ಳಲ್ಲ. ಅದಕ್ಕೀಗ ಸರಿಯಾದ ಕಾಲ ಕೂಡಿ ಬಂದಿದೆ!

 

ಎಲ್ಲವೂ ಅಂದುಕೊಂಡಂತೆ ಆದರೆ ಸಾಯಿಪಲ್ಲವಿ ಪ್ರಜ್ವಲ್ ದೆವರಾಜ್‌ಗೆ ನಾಯಕಿಯಗಿ ಕಾಣಿಸಿಕೊಳ್ಳಲಿದ್ದಾರೆ. ಪುಷ್ಪಕ ವಿಮಾನ ಚಿತ್ರವನ್ನು ನಿರ್ಮಾಣ ಮಾಡಿದ್ದ ವಿಖ್ಯಾತ್ ಇದೀಗ ಪ್ರಜ್ವಲ್ ದೆವರಾಜ್ ಅಭಿನಯದ ಚಿತ್ರವೊಂದನ್ನು ನಿರ್ಮಾಣ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ ಇನ್ನಷ್ಟೇ ಹೆಸರಿಡಬೇಕಿದೆಯಾದರೂ ತಯಾರಿ ಮಾತ್ರ ಜೋರಾಗಿಯೇ ನಡೆಯುತ್ತಿದೆ.

 

ಆದರೆ ಚಿತ್ರತಂಡ ಸಾಯಿಪಲ್ಲವಿಯನ್ನೇ ನಾಯಕಿಯಾಗಿ ಕರೆತರಬೇಕೆಂಬ ಪಣ ತೊಟ್ಟು ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆಯಂತೆ. ಈಗಿರೋ ವಾತಾವರಣ ಗಮನಿಸಿದರೆ ಸಾಯಿ ಪಲ್ಲವಿ ಈ ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡೋ ಎಲ್ಲ ಸೂಚನೆಗಳೂ ಇವೆ.

ಅಂದಹಾಗೆ ಈ ಹಿಂದೆ ಪವನ್ ಒಡೆಯರ್ ಗರಡಿಯಲ್ಲಿದ್ದ ಶ್ರೀ ನರಸಿಂಹ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಪ್ರಜ್ವಲ್ ಒಂದು ಡಿಫರೆಂಟಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಥೆಗೆ ಸಾಯಿಪಲ್ಲವಿ ಸೂಟ್ ಆಗೋದರಿಂದ ಆಕೆಯನ್ನೇ ಕರೆತರೋ ಪ್ರಯತ್ನ ಜಾರಿಯಲ್ಲಿದೆಯಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top