fbpx
ಕಿರುತೆರೆ

ಕೀರ್ತಿ,ಶಾಲಿನಿ,ನಿರಂಜನ್,ಶೀತಲ್ ಪ್ರಕಾರ ಈ 5 ಜನ ಬಿಗ್’ಬಾಸ್ ಫೈನಾಲೆಗೆ ಬರ್ತಾರಂತೆ, ಅವರಲ್ಲಿ ಈ ಸ್ಪರ್ಧಿ ಬಿಗ್ ಬಾಸ್ ವಿನ್ನರ್ ಆಗ್ತಾರೆ.

ಕೀರ್ತಿ,ಶಾಲಿನಿ,ನಿರಂಜನ್,ಶೀತಲ್ ಪ್ರಕಾರ ಈ 5 ಜನ ಬಿಗ್’ಬಾಸ್ ಫೈನಾಲೆಗೆ ಬರ್ತಾರಂತೆ, ಅವರಲ್ಲಿ ಈ ಸ್ಪರ್ಧಿ ಬಿಗ್ ಬಾಸ್ ವಿನ್ನರ್ ಆಗ್ತಾರೆ.

 

 

ನಿಮಗೆಲ್ಲರಿಗೂ ಗೊತ್ತಿರುವಂತೆ ಕಳೆದವಾರ ಬಿಗ್ ಬಾಸ್ ನಲ್ಲಿ ಬೋರ್ಡಿಂಗ್ ಸ್ಕೂಲ್ ಲಕ್ಷುರಿ ಬಜೆಟ್ ಟಾಸ್ಕ್ ಜಾರಿಯಲ್ಲಿತ್ತು. ಈ ಸ್ಕೂಲ್ ಗೆ ಪ್ರತಿದಿನದ ಶಿಕ್ಷಕರ ವೇಷತೊಟ್ಟು ಅತಿಥಿಗಳಾಗಿ ಹೋಗಿದ್ದರು. ಕಳೆದ ಸೀಸನ್ ನಲ್ಲಿ ಸ್ಪರ್ಧಿಗಳಾಗಿದ್ದ ಕೀರ್ತಿ,ಶೀತಲ್,ಶಾಲಿನಿ ಮತ್ತು ನಿರಂಜನ್ ಶಿಕ್ಷಕರಾಗಿ ದೊಡ್ಮನೆಗೆ ಕಾಲಿಟ್ಟಿದ್ದರು. ಎಲಿಮಿನೇಷನ್ ಇಲ್ಲದ ಕಾರಣ ಭಾನುವಾರದ ಸಂಚಿಕೆಯಲ್ಲಿ ಶಿಕ್ಷಕರಾಗಿ ಹೋಗಿದ್ದವರನ್ನು ಮತ್ತು ಬಿಗ್ ಬಾಸ್ ಸ್ಪರ್ಧಿಗಳ ಕುಟುಂಬದಿಂದ ಒಬ್ಬೊಬ್ಬರನ್ನು ಕರೆಸಿ ಪೋಷಕರ ಸಭೆ ನಡೆಸಿವಂತೆ ಬಿಗ್ ಬಾಸ್ ವೇದಿಕೆಯ ಮೇಲೆ ವ್ಯವಸ್ಥೆ ಮಾಡಿ ಕೂರಿಸಿದ್ದರು.

 

 

ವೇದಿಕೆಯಲ್ಲಿ ಕುಳಿತಿದ್ದ ಶಾಲಿನಿ,ಶೀತಲ್,ಕೀರ್ತಿ,ನಿರಂಜನ ಅವರಿಗೆ ನಿರೂಪಕ ಸುದೀಪ್ ಈ ನಿಮ್ಮ ಪ್ರಕಾರ ಯಾವ ಐದು ಜನ ಫೈನಾಲೆಗೆ ಬರ್ತಾರೆ ಎಂದು ಕೇಳಿದರು.. ಆಗ ಮೊದಲಿಗೆ ಶಾಲಿನಿ ನಿವೇದಿತಾ ಗೌಡ, ಜೆಕೆ,ಚಂದನ್, ರಿಯಾಜ್ ಮತ್ತು ಸಮೀರ್ ಆಚಾರ್ಯ ಫೈನಲ್ ಹೋಗಬಹುದು ಎಂದರು.

 

 

ನಂತರ ನಿರಂಜನ್ ಅವರು “ನಿವೇದಿತಾ,ರಿಯಾಜ್,ಚಂದನ್,ಜಯಶ್ರೀನಿವಾಸ್, ಮತ್ತು ಸಮೀರ್ ಆಚಾರ್ಯ ಹೋಗ್ತಾರೆ” ಎಂದರು. ಶೀತಲ್ ಶೆಟ್ಟಿಯವರು “ನಿವೇದಿತಾ, ಚಂದನ್,ಸಮೀರ್,ಜೆಕೆ,ಜಯಶ್ರೀನಿವಾಸನ್ ಫೈನಾಲೆಗೆ ಹೋಗ್ತಾರೆ” ಅಂದ್ರು. ಕೊನೆಯದಾಗಿ ಕೀರ್ತಿ “ಚಂದನ್,ನಿವೇದಿತಾ,ಸಮೀರ್,ಜೆಕೆ,ಜಯಶ್ರೀನಿವಾಸ್”ಫೈನಾಲೆಗೆ ಬರುತ್ತಾರೆ ಎಂದರು.

 

 

ನಂತರ ಸುದೀಪ್ ಈ ನಿಮ್ಮ ಪ್ರಕಾರ ಈ ಭಾರಿಯ ಬಿಗ್ ಬಾಸ್ ಅನ್ನು ಯಾರು ಗೆಲ್ಲಬಹುದು ಎಂದು ಕೇಳಿದರು. ಆಗ ಮೊದಲಿಗೆ ಶಾಲಿನಿ ನಿವೇದಿತಾ ಗೌಡ ಗೇಲ್ತಾಳೆ ಎಂದರು ನಂತರ ನಿರಂಜನ್, ಶಾಲಿನಿ,ಕೀರ್ತಿ ಚಂದನ್ ಶೆಟ್ಟಿಯವರು ಗೆಲ್ಲುತ್ತಾರೆ ಎಂದರು. ನಾಲ್ಕು ಜನರಲ್ಲಿ ಮೂವರು ಚಂದನ್ ಹೆಸರನ್ನು ಹೇಳಿದ್ದನ್ನು ನೋಡಿದರೆ ಈ ಭಾರಿ ಚಂದನ್ ಅವರೇ ಎಲ್ಲಾರಿಗೂ ಫೇವರಿಟ್ ಎಂದು ತಿಳಿಯುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top