fbpx
ಮನೋರಂಜನೆ

ನಟಿ ಸಂಯುಕ್ತ ವಿರುದ್ಧ ಕೆಂಡಾಮಂಡಲವಾದ ಕಾಲೇಜ್ ಕುಮಾರ ನಿರ್ಮಾಪಕ ಪದ್ಮನಾಭ್: ಸಂಯುಕ್ತ ವಿರುದ್ಧ ದೂರು ದಾಖಲು.

ನಟಿ ಸಂಯುಕ್ತ ವಿರುದ್ಧ ಕೆಂಡಾಮಂಡಲವಾದ ಕಾಲೇಜ್ ಕುಮಾರ ನಿರ್ಮಾಪಕ ಪದ್ಮನಾಭ್: ಸಂಯುಕ್ತ ವಿರುದ್ಧ ದೂರು ದಾಖಲು.

 

 

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ್ದ ಸಂಯುಕ್ತಾ ಹೆಗಡೆ ಮತ್ತೊಂದು ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಈ ಹಿಂದೆ ”ಚಿತ್ರದ ಚಿತ್ರೀಕರಣಕ್ಕೆ ಭಾಗಿಯಾಗುತ್ತಿಲ್ಲ” ಎನ್ನುವ ಕಾರಣಕ್ಕೆ ವಿವಾದ ಮಾಡಿಕೊಂಡಿದ್ದ ಸಂಯುಕ್ತಾ ವಿರುದ್ಧ ಈಗ ಕಾಲೇಜ್ ಕುಮಾರ್ ಚಿತ್ರದ ನಿರ್ಮಾಪಕ ಪದ್ಮನಾಭ್ ಫಿಲ್ಮ್ ಚೇಂಬರ್ ನಲ್ಲಿ ದೂರು ದಾಖಲಿಸಿದ್ದಾರೆ.

 

 

“ನಮ್ಮ ಚಿತ್ರಕ್ಕೆ ಸಂಯುಕ್ತ ಹಣ ಪಡೆದಿದ್ದಾರೆ..ಹಣ ಪಡೆದ ಮೇಲೆ ಹಣಕ್ಕೆ ತಕ್ಕಂತೆ ಶೂಟಿಂಗ್ ನಲ್ಲಿ ಪಾಲ್ಗೊಳ್ಳಬೇಕು, ಚಿತ್ರದ ಪ್ರಮೋಷನ್ ಗೆ ಕೂಡ ಬರಬೇಕು. ಆದರೆ ಚಿತ್ರ ಆರಂಭದ ದಿನದಿಂದಲೂ ಸಂಯುಕ್ತಾ ಸಪೋರ್ಟ್ ಮಾಡಿಯೇ ಇಲ್ಲ. ಈಗ ಅವರು ಚಿತ್ರದ ಪ್ರಚಾರಕ್ಕೆ ಬರುತ್ತಿಲ್ಲ.” ಎಂದು ಆರೋಪಿಸಿದ್ದಾರೆ.

 

 

ಕಲೆಗೆ ಗೌರವ ಕೊಡಬೇಕು ಒಂದು ಚಿತ್ರ ಕೇವಲ ಒಬ್ಬರಿಂದಲೇ ಸಂಪೂರ್ಣವಾಗೋದಿಲ್ಲ. ಅದಕ್ಕೆ ಎಲ್ಲರ ಬಂಬಲಬೇಕು. ಸಂಯುಕ್ತಾ ಅದನ್ನ ಮಾಡಿಯೇ ಇಲ್ಲ. . ಅವರಿಗೆ ಸಿನಿಮಾ ಮತ್ತು ನಿರ್ಮಾಪಕರ ಮೇಲೆ ಸ್ವಲ್ಪವೂ ಕಾಳಜಿ ಇಲ್ಲ. ಅವರು ಕೇಳಿದ್ದನ್ನೆಲ್ಲಾ ಕೊಟ್ಟಿದ್ದೇವೆ. ಕಾಲ್‌ಶೀಟ್‌ನಲ್ಲೂ ಕೂಡ ಪ್ರಚಾರಕ್ಕೂ ಬರಬೇಕು ಎಂದೂ ಅಗ್ರಿಮೆಂಟ್‌ ಮಾಡಿಸಿಕೊಳ್ಳಲಾಗಿದೆ. ಆದರೆ ಸಂಯುಕ್ತ ಈಗ ಕೈ ಎತ್ತಿದಾರೆ. ಹೀಗೆ ಮಾಡಿದರೆ ಸಿನಿಮಾವನ್ನು ನಂಬಿ ಬಂಡವಾಳ ಹೂಡಿದವರ ಗತಿ ಏನು. ಇಂತಹ ಕಲಾವಿದರಿಗೆ ಮಾಧ್ಯಮದವರು, ವಾಣಿಜ್ಯ ಮಂಡಳಿ,ನಿರ್ಮಾಪಕ ಸಂಘ ಬೆಂಬಲ ನೀಡಬಾರದು. ಎಂದು ಪದ್ಮನಾಭ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

 

ಕು ಎಂಬುದು ಗೊತ್ತಿಲ್ಲ. ಮುಂದೆ ಯಾರಾದರೂ ಇವರನ್ನ ಹಾಕಿಕೊಂಡು ಸಿನಿಮಾ ಮಾಡಿದರೆ ಅವರಿಗೆ ತೊಂದರೆಯಾಗುವುದು ಖಚಿತ. ಸಂಯುಕ್ತಾರನ್ನ ಹಾಕಿಕೊಂಡು ಸಿನಿಮಾ ಮಾಡೋರಿಗೆ ತೊಂದರೆ ಆಗಬಾರದು ಅನ್ನೋ ಕಾರಣಕ್ಕೇ ಈಗ ಫಿಲಂ ಚೆಮ್ಬ್ಯಾರ್ ಗೆ ದೂರು ನೀಡುತ್ತಿದ್ದೇನೆ ಎಂದು ಪದ್ಮನಾಭ್ ತಿಳಿಸಿದ್ದಾರೆ.

 

 

 

ಇನ್ನು ಈ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಯುಕ್ತ ” ಚಿತ್ರ ಬಿಡುಗಡೆಯಾಗುವುದಕ್ಕೂ ಮುಂಚೆ ನಾನು ಪ್ರಮೋಷನ್ ಗೆ ಹೋಗಿದ್ದೇನೆ, ಚಿತ್ರ ರೆಲೀಸ್ ಆದ ನಂತರ ನನಗೆ ಆರೋಗ್ಯ ಸರಿ ಇಲ್ಲದ ಕಾರಣ ಪ್ರಚಾರಕ್ಕೆ ಹೋಗಲು ಸಾಧ್ಯವಾಗಲಿಲ್ಲ” ಎಂದು ಹೇಳಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top