fbpx
ಆರೋಗ್ಯ

ನಿಮ್ಮ ಮೂತ್ರ ಪಿಂಡ ಹೆಚ್ಚು ಖರ್ಚಾಗದೆ ಶುದ್ದಿಯಾಗೋಕೆ ಕೊತ್ತಂಬರಿ ಒಂದಿದ್ರೆ ಸಾಕು ಹೇಗೆ ಅಂತೀರಾ ಮುಂದೆ ಓದಿ

ಬೇರೆ ರೋಗಗಳಂತೆ ಕಿಡ್ನಿ ಸಮಸ್ಯೆ ಇದ್ದರೆ ಯಾವುದೇ ವಿಶೇಷ ಲಕ್ಷಣಗಳು ಕಾಣಿಸುವುದಿಲ್ಲ. ಕೊನೆಯ ಹಂತ ತಲುಪಿದಾಗ ಮಾತ್ರ ನಿಮಗೆ ಕಿಡ್ನಿ ಸಮಸ್ಯೆ ಇದೆ ಎಂಬುದು ತಿಳಿದು ಬರುತ್ತದೆ… ಪ್ರಪಂಚದ ಹೆಚ್ಚಿನ ಜನರು ಈ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ತಮ್ಮ ಕಿಡ್ನಿ ಸಮಸ್ಯೆ ಇದೆ ಎಂಬುದು ಮಾತ್ರ ಅವರಿಗೆ ತಿಳಿದೇ ಇರುವುದಿಲ್ಲ.

 

ಹಾಗಾದ್ರೆ ಕಿಡ್ನಿ ಸಮಸ್ಯೆ ಇದೆ ಎಂಬುದನ್ನು ತಿಳಿದುಕೊಳ್ಳಲು ಈ 12 ವಿಚಾರಗಳ ಬಗ್ಗೆ ಗಮನ ಹರಿಸಿ, ಇದರಿಂದಾಗಿ ಕಿಡ್ನಿ ಸಮಸ್ಯೆ ತಪ್ಪಿಸಬಹುದು

 

 • ಕಣ್ಣಿನ ಸುತ್ತಲು ಉಬ್ಬಿಕೊಳ್ಳುತ್ತದೆ. ಹೌದು ಈ ಸಮಸ್ಯೆ ಕಂಡು ಬಂದರೂ ಸಹ ನೀವು ತುಂಬಾನೆ ಜಾಗರೂಕರಾಗಿರಬೇಕು.
 • ಸ್ಕಿನ್‌ ತುಂಬಾನೆ dry ಆಗುವುದು ಹಾಗೂ ತುರಿಕೆ ಆಗುತ್ತದೆ.
 • ಕೆಲಸ ಮಾಡುವಾಗ ಆಯಾಸ ಉಂಟಾಗುತ್ತದೆ
 • ತುಂಬಾ ಹೊತ್ತು ನಿದ್ರೆ ಬರುವುದಿಲ್ಲ, ನಿದ್ರೆಗೆ ಸಂಬಂಧಿಸಿದಂತೆ ನೀವು ತುಂಬಾನೆ ಸಮಸ್ಯೆಗಳನ್ನು ಅನುಭವಿಸುತ್ತಿರುವುದು.
 • ಮೂತ್ರ ವಿಸರ್ಜನೆ ಮಾಡುವ ಸಂದರ್ಭದಲ್ಲಿ ರಕ್ತದ ಬಿಂದು ಕಾಣಿಸಿಕೊಳ್ಳುವುದು.
 • ಮೂತ್ರ ಮಾಡಿ ಬಂದ ಕೂಡಲೆ ಮತ್ತೆ ಜೋರಾಗಿ ಮೂತ್ರ ಬಂದಂತೆ ಫೀಲ್‌ ಆಗುವುದು ಹಾಗು ಪದೇ ಪದೆ ಮೂತ್ರ ವಿಸರ್ಜನೆ ಉಂಟಾಗುವುದು.
 • ರಕ್ತದಲ್ಲಿ ಹಿಮೋಗ್ಲೋಬಿನ್‌ ಪ್ರಮಾಣ ಕಡಿಮೆಯಾಗುತ್ತದೆ, ಜೊತೆಗೆ ಅನಿಮಿಯಾ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
 • ನಿಮ್ಮ ಕಾಲು, ಕೈಗಳ ಗಂಟುಗಳಲ್ಲಿ ಊತ ಕಾಣಿಸಿಕೊಂಡಿದ್ದು, ವಿಪರೀತ ನೋವು ಉಂಟಾದರೆ ಆ ಸಮಯದಲ್ಲೂ ಎಚ್ಚರ ವಹಿಸಿ.
 • ಪದೆ ಪದೇ ಮಸಲ್ಸ್‌ ಕ್ರಾಂಪ್‌ ಅಥವಾ ಮಾಂಸಖಂಡಗಳಲ್ಲಿ ಗಟ್ಟಿಯಾಗಿ ಹಿಡಿದಂತಹ ನೋವು ಕಾಣಿಸಿಕೊಳ್ಳುವುದು.
 • ವಾಂತಿ ಬೇಧಿ ಮೊದಲಾದ ಸಮಸ್ಯೆ ಕೂಡ ಕಾಣಿಸಿಕೊಳ್ಳುತ್ತದೆ.
 • ಹಸಿವು ಆಗುವುದಿಲ್ಲ. ಯಾವುದೆ ವಸ್ತು- ಆಹಾರ ನೋಡಿದರೂ ಅದನ್ನು ತಿನ್ನಬೇಕೆಂಬ ಬಯಕೆ ಉಂಟಾಗುವುದಿಲ್ಲ.
 • ಬಾಯಿ ರುಚಿ ಇರುವುದಿಲ್ಲ. ಏನೆ ತಿಂದರೂ ಸಹ ಅದಕ್ಕೆ ಕೆಟ್ಟ ರುಚಿ ಬರುತ್ತದೆ. ಇದರಿಂದ ಸರಿಯಾಗಿ ತಿಂಡಿ ತಿನ್ನಲು ಸಹ ಸಾಧ್ಯವಾಗುವುದಿಲ್ಲ.

 

 

ಈ ಎಲ್ಲಾ ಲಕ್ಷಣಗಳ ಬಗ್ಗೆ ನಿಗಾ ವಹಿಸಿ, ಇಲ್ಲವಾದಲ್ಲಿ ತೊಂದ್ರೆ ಗ್ಯಾರಂಟಿ. ನಿಮಗೆ ಈ ಮೇಲಿನ ಲಕ್ಷಣಗಳು ಕಾಣಿಸಿಕೊಂಡರೆ ಕಿಡ್ನಿ ಸಮಸ್ಯೆ ನಿಮಗೂ ಕಾಡುತ್ತಿದೆ ಎಂದು ಅರ್ಥ, ಇಂತಹ ಲಕ್ಷಣ ಕಂಡು ಬಂದರೆ ತಡ ಮಾಡದೆ ವೈದ್ಯರ ಬಳಿ ಹೋಗಿ ಪರೀಕ್ಷೆ ಮಾಡಿಸುವುದು ಉತ್ತಮ.

 

ಕೊತ್ತಂಬರಿ ಒಂದಿದ್ದರು ಸಾಕು ನಿಮ್ಮ ಮೂತ್ರ ಪಿಂಡಗಳು ಶುದ್ಧವಾಗುತ್ತದೆ

 

ಮೂತ್ರ ಪಿಂಡಗಳು ಪ್ರತಿದಿನವೂ ಲವಣಗಳು, ವಿಷಪದಾರ್ಥಗಳನ್ನು ಸೋಸಿ ದೇಹದಿಂದ ಹೊರ ಹಾಕುತ್ತದೆ ಆದರೆ ಈ ಕೆಳಗೆ ತಿಳಿಸಿದ ನೈಸರ್ಗಿಕ ಜ್ಯೂಸು ನಿಂದ ಕಿಡ್ನಿಗಳು ಆದಷ್ಟು ಬೇಗ ಶುಭ್ರಗೊಳ್ಳುತ್ತವೆ.ಆ ಪಾನೀಯವನ್ನು ತಯಾರಿಸುವುದು ಹೇಗೆಂದು ತಿಳಿಯೋಣ.

 

 

ದಿನಕ್ಕೆ ಒಂದು ಲೋಟದಂತೆ ,ತಿಂಗಳಲ್ಲಿ ಎರಡು ಬಾರಿ ಈ ಪಾನೀಯವನ್ನು ಸೇವಿಸಬೇಕು.

ನಿಮ್ಮ ಮೂತ್ರ ಶುದ್ಧೀಕರಿಸಲು ಎರಡು ಚಮಚ ಕೊತ್ತಂಬರಿ ಎಲೆಗಳನ್ನು 1 ಲೋಟ ನೀರಿನಲ್ಲಿ ಬೆರೆಸಿ ೫ ನಿಮಿಷ ಬಿಸಿನೀರಿನಲ್ಲಿ ಕುದಿಸಿ ಆರಿಸಿ ಕುಡಿಯಬೇಕು. ಇದು ಕಿಡ್ನಿ ಕಲ್ಲುಗಳನ್ನು ತಡೆಯಲು ಸಹಕಾರಿ.
ಕೊತ್ತಂಬರಿ ಎಲೆಗಳ ರಸ ¼ ಕಪ್, ನೀರು ಅರ್ಧ ಲೋಟ ಮತ್ತು ಸ್ವಲ್ಪ ಜೇನು ಮತ್ತು ನಿಂಬೆ ರಸ ಮಿಶ್ರಣ ಮಾಡಿ ೨ ವಾರಗಳ ಕಾಲ ಎರಡು ಬಾರಿ ಕುಡಿದರೆ ಕಿಡ್ನಿ ಕಲ್ಮಶಗಳು ದೂರವಾಗುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top