fbpx
ಕಿರುತೆರೆ

ದೋಸ್ತಿಗಳಾಗಿದ್ದ ದಿವಾಕರ್ ಹಾಗೂ ಚಂದನ್ ನಡುವೆ ಶುರುವಾಯ್ತು ಕಿತ್ತಾಟ..?

ದೋಸ್ತಿಗಳಾಗಿದ್ದ ದಿವಾಕರ್ ಹಾಗೂ ಚಂದನ್ ನಡುವೆ ಶುರುವಾಯ್ತು ಕಿತ್ತಾಟ..?

 

 

ಯಾಕೋ ದಿವಾಕರ್ ಟೈಮ್ ಸರಿ ಇಲ್ಲ ಅಂತ ಕಾಣುತ್ತೆ. ಕಳೆದ ವಾರದಿಂದ ತಮ್ಮ ವರ್ತನೆಯಲ್ಲಿ ಬದಲಾಗಿರುವ ದಿವಾಕರ್ ನಿವೇದಿತಾ ಜೊತೆ ತಾನಾಗಿಯೇ ಸುಮ್ಮ ಸುಮ್ಮನೆ ಜಗಳ ಮಾಡಿ ಜಯ ಶ್ರೀನಿವಾಸನ್ ರವರಿಗೆ 420 ಎಂದು ಸುದೀಪ್ ರೊಂದಿಗೆ ಬುದ್ದಿ ಹೇಳಿಸಿಕೊಂಡಿದ್ದ ದಿವಾಕರ್ ಯಾಕೋ ಬುದ್ದಿ ಕಲಿತಂತೆ ಕಾಣುತಿಲ್ಲ.

 

 

ಬಿಗ್ ಬಾಸ್ ಗೆ ಹೋದಾಗಿನಿಂದಲೂ ತನಗೆ ಯಾರ್ಯಾರು ಸಹಾಯ ಮಾಡಿದರೋ ಅವರೆಲ್ಲರ ಜೊತೆ ಜಗಳ ಮಾಡಿಕೊಂಡಿದ್ದ ದಿವಾಕರ್ ಕಳೆದ ವಾರ ಚಂದನ್ ಜೊತೆ ಬಹಳ ಆತ್ಮೀಯವಾಗಿದ್ದರು. ಕಾರ್ಯಕ್ರಮವನ್ನು ತಪ್ಪದೆ ನೋಡೋ ವೀಕ್ಷಕರು ದಿವಾಕರ್’ರವರು ಚಂದನ್ ಜೊತೆ ಇಷ್ಟರಲ್ಲೇ ಕಿತ್ತಾಡುತ್ತಾರೆ ಎಂದು ಮಾತನಾಡಿಕೊಳ್ಳುತ್ತಿದ್ದರು.

 

.

 

ಇದರ ಬೆನ್ನಲ್ಲೇ ದಿವಾಕರ್ ಚಂದನ್ ಜೊತೆ ಕಿತ್ತಾಡಿಕೊಂಡಂತೆ ಕಾಣುತ್ತಿದೆ. ಇಂದು ಮದ್ಯಾಹ್ನ ಬಿಡುಗಡೆಯಾಗಿರುವ ಸಂಚಿಕೆಯ ಪ್ರೋಮೋದಲ್ಲಿ ಟಾಸ್ಕ್ ಮಾಡೋವಾಗ ದಿವಾಕರ್ ಚಂದನ್’ರ ಟೀ ಶರ್ಟ್ ಹಿಡಿದು ಎಳೆದಾಡಿ ಹರಿದು ಜಗಳವಾದಂತೆ ಮತ್ತು ಆ ವೇಳೆ ಮನೆಯ ಇತರ ಸದಸ್ಯರು ಕಕ್ಕಾಬಿಕ್ಕಿಯಾಗಿ ನೋಡುತ್ತಿರುವಂತೆ ಮೇಲ್ನೋಟಕ್ಕೆ ಕಾಣುತ್ತದೆ. ಆದರೆ ಇದರ ಸತ್ಯಾಸತ್ಯತೆಗಳ ಬಗ್ಗೆ ತಿಳ್ಕೊಬೇಕಂದ್ರೆ ಇಂದಿನ ಎಪಿಸೋಡನ್ನ ನೋಡಲೇಬೇಕು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top