fbpx
ಕಿರುತೆರೆ

ಕಿಚ್ಚನೆದುರೇ ಕೀರ್ತಿ ಜೊತೆ ಅನುಪಮಾ ಅಮ್ಮನ ಕಿರಿಕ್!

ಕಿಚ್ಚನೆದುರೇ ಕೀರ್ತಿ ಜೊತೆ ಅನುಪಮಾ ಅಮ್ಮನ ಕಿರಿಕ್!

 

 

 

ಪ್ರತೀ ವಾರದ ಭಾನುವಾರ ಮನೆಯಿಂದ ಹೊರ ಬಿದ್ದ ಸದಸ್ಯರ ಜೊತೆಗಿನ ಮಾತುಕತೆಯಲ್ಲಿ ಬಿಗ್‌ಬಾಸ್ ವೇದಿಕೆ ರಂಗೇರುತ್ತಿತ್ತು. ಆದರೆ ಮೊದಲ ಸಲ ಭಾನುವಾರದ ಕಾರ್ಯಕ್ರಮ ಭಿನ್ನವಾಗಿ ನಡೆದಿದೆ. ಈ ಕಾರ್ಯಕ್ರಮದಲ್ಲೇ ಕಿರಿಕ್ ಕೀರ್ತಿ ವಿರುದ್ಧ ಬಿಗ್‌ಬಾಸ್ ಸ್ಪರ್ಧಿ ಅನುಪಮಾ ಅವರ ಅಮ್ಮ ಜಗಳಕ್ಕಿಳಿದು ನಂತರ ಕಿಚ್ಚನ ಮಧ್ಯಪ್ರವೇಶದಿಂದ ಬೆಂಕಿ ಶಮನಗೊಂಡ ಎಪಿಸೋಡೂ ನಡೆದುಹೋಗಿದೆ!

 

 

ಈ ಭಾನುವಾರದ ಕಾರ್ಯಕ್ರಮದಲ್ಲಿ ಕಳೆದ ಸೀಜನ್ನಿನ ಸ್ಪರ್ಧಿಗಳಾದ ಕಿರಿಕ್ ಕೀರ್ತಿ, ಶಾಲಿನಿ, ನಿರಂಜನ್ ದೇಶಪಾಂಡೆ, ಶೀತಲ್ ಜೊತೆ ಮನೆಯೊಳಗಿರೋ ಸದಸ್ಯರ ಕುಟುಂಬಸ್ಥರನ್ನೂ ವೇದಿಕೆಯಲ್ಲಿ ಕೂರಿಸಲಾಗಿತ್ತು. ಕಳೆದ ಸೀಜನ್‌ನ ಅನುಭವದ ಆಧಾರದಲ್ಲಿ ಹಳೇ ಸ್ಪರ್ಧಿಗಳು ಹೊಸಾ ಸ್ಪರ್ಧಿಗಳ ಕುಟುಂಬಸ್ಥರಿಗೆ ಕಿವಿ ಮಾತು ಹೇಳೋ ಮೂಲಕ ಧೈರ್ಯ ತುಂಬೋ ಕಾರ್ಯವೂ ನೆರವೇರಿತು.

 

 

ಈ ಸಂದರ್ಭದಲ್ಲಿ ಎಲ್ಲಾ ಸ್ಪರ್ಧಿಗಳ ಕುಟುಂಬಸ್ಥರಿಗೆ ಕಿವಿ ಮಾತು ಹೇಳಿದ ಕೀರ್ತಿ ಅನುಪಮಾ ಬಗ್ಗೆ ಮಾತಾಡ್ತಾ ಅವರು ಸುಖಾಸುಮ್ಮನೆ ಹಳೇದನ್ನೆಲ್ಲ ಕೆದಕಿ ಸಮಸ್ಯೆ ಮಾಡಿಕೊಳ್ತಿದಾರೇನೋ ಎಂಬರ್ಥದಲ್ಲಿ ಮಾತಾಡಿದ್ದೇ, ಮೈಕೆತ್ತಿಕೊಂಡು ನೇರಾ ನೇರ ಕೀರ್ತಿ ವಿರುದ್ಧ ಕದನಕ್ಕೆ ಬಿದ್ದವರು ಅನುಪಮಾ ಅಮ್ಮ.

 

 

ಬಿಗ್‌ಬಾಸ್ ಮನೆಗೆ ಮೇಸ್ಟರಾಗಿ ಬಂದು ಹೋದ ಬಳಿಕ ಫೇಸ್‌ಬುಕ್‌ನಲ್ಲಿ ಕೀರ್ತಿ ಸ್ಪರ್ಧಿಗಳ ಬಗ್ಗೆ ಬರೆದುಕೊಂಡಿದ್ದರಂತೆ. ಆದರೆ ಇಲ್ಲಿ ತಮ್ಮ ಮಗಳ ಬಗ್ಗೆ ಹೇಳಿದ್ದ ಒಳ್ಳೆ ಮಾತುಗಳನ್ನ ಅಲ್ಲೂ ಹೇಳಬಹುದಿತ್ತಲ್ಲ ಎಂಬುದು ಅನುಪಮಾ ಅಮ್ಮನ ತಕರಾರು. ತಮ್ಮ ಮಗಳು ಮತ್ತು ಜಗನ್ ನಡುವಿನ ಲವ್ ಬ್ರೇಕಪ್ ಸ್ಟೋರಿಯ ಬಗ್ಗೆ ಬೇಕಾ ಬಿಟ್ಟಿ ಟ್ರೋಲ್ ಆಗುತ್ತಿದ್ದ ವಿಚಾರ ಬಹುಶಃ ಆ ತಾಯಿ ರೆಬೆಲ್ ಆಗಲು ಕಾರಣವೇನೋ…ಕಡೆಗೂ ಸುದೀಪ್ ಅವರೇ ಮಧ್ಯಪ್ರವೇಶಿಸಿ ಜಗಳ ಮಾಡಬಾರದೆಂದು ತಾಕೀತು ಮಾಡಿದಾಗ ಅನುಪಮಾ ಅಮ್ಮ ಒಲ್ಲದ ಮನಸಿನಿಂದಲೇ ಸುಮ್ಮನಾದಂತಿತ್ತು!

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top