fbpx
ಕಿರುತೆರೆ

ಕಿರುತೆರೆಗೆ ಎಂಟ್ರಿಕೊಟ್ಟ ರಾಗಿಣಿ: ಮೊದಲ ಬಾರಿಗೆ ಶೋವೊಂದರ ಜಡ್ಜ್ ಅಗಲಿದ್ದಾರೆ ತುಪ್ಪದ ಹುಡುಗಿ.

ಕಿರುತೆರೆಗೆ ಎಂಟ್ರಿಕೊಟ್ಟ ರಾಗಿಣಿ: ಮೊದಲ ಬಾರಿಗೆ ಶೋವೊಂದರ ಜಡ್ಜ್ ಅಗಲಿದ್ದಾರೆ ತುಪ್ಪದ ಹುಡುಗಿ.

 

 

ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಂಡಿರುವ ರಾಗಿಣಿ ಸದ್ಯ ಫುಲ್ ಬಿಜಿ. ಶರಣ್ ಜತೆಗೆ ಅವರು ನಟಿಸುತ್ತಿರುವ ಇನ್ನೂ ಹೆಸರಿಡದ ಚಿತ್ರಕ್ಕೆ ಚಿತ್ರೀಕರಣ ನಡೆಯುತ್ತಿದ್ದರೆ , ‘ಮುಸ್ಸಂಜೆ’ ಮಹೇಶ್ ನಿರ್ದೇಶನದ ‘ಎಂಎಂಸಿಎಚ್’ ಮತ್ತು ಪಿ.ಸಿ. ಶೇಖರ್ ನಿರ್ದೇಶನದ ‘ದ ಟೆರರಿಸ್ಟ್’ ಸಿನಿಮಾ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಇಷ್ಟೆಲ್ಲ ಬಿಜಿ ಶೆಡ್ಯೂಲ್​ ಮಧ್ಯೆಯೂ ಒಂದು ಹೊಸ ಕೆಲಸಕ್ಕೆ ರಾಗಿಣಿ ಕೈ ಹಾಕುತ್ತಿದ್ದಾರೆ.

 

 

ತುಪ್ಪದ ಹುಡುಗಿ ರಾಗಿಣಿ ಕಿರುತೆರೆಗೆ ಕಾಲಿಡುತ್ತಿದ್ದು ಸ್ಟಾರ್ ಸುವರ್ಣ ವಾಹಿನಿಯ ಹೊಸ ಕಾರ್ಯಕ್ರಮವೊಂದಕ್ಕೆ ಇದೆ ಮೊದಲ ಬಾರಿಗೆ ತೀರ್ಪುಗಾರರಾಗಿದ್ದಾರೆ.. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸದ್ಯ ‘ಭರ್ಜರಿ ಕಾಮಿಡಿ’ ಎಂಬ ಹೊಸ ಹಾಸ್ಯ ಕಾರ್ಯಕ್ರಮ ಶುರು ಆಗುತ್ತಿದ್ದು ಈ ಕಾರ್ಯಕ್ರಮದಲ್ಲಿ ರಾಗಿಣಿ, ಹಿರಿಯ ನಟ ದೊಡ್ಡಣ್ಣ ಮತ್ತು ನಿರ್ದೇಶಕ ಗುರುಪ್ರಸಾದ್ ತೀರ್ಪುಗಾರರಾಗುತ್ತಿದ್ದಾರೆ.

 

 

ಈ ಕಾರ್ಯಕ್ರಮ ಡಿಸೇಂಬರ್ ತಿಂಗಳಿನಲ್ಲಿ ಶುರುವಾಗಲಿದ್ದು ಕಾರ್ಯಕ್ರಮದ ರೂಪುರೇಷೆಗಳು ಸದ್ಯದಲ್ಲೇ ಬಹಿರಂಗಗೊಳ್ಳಲಿದೆ. ಸದ್ಯ ಪ್ರೊಮೊ ಶೂಟ್ ಮುಗಿದಿದ್ದು ಬೇರೆ ಕಾರ್ಯಕ್ರಮಗಳಿಗೆ ಹೋಲಿಸಿದರೆ ‘ಭರ್ಜರಿ ಕಾಮಿಡಿ’ಯ ಕಾನ್ಸೆಪ್ಟ್ ತುಂಬ ಭಿನ್ನವಾಗಿ ಇರುತ್ತದೆ ಎಂದು ಆಯೋಜಕರು ಹೇಳುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top