fbpx
ಕಿರುತೆರೆ

ಬಿಗ್ ಬಾಸ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಚಂದನ್ ಶೆಟ್ಟಿ..!

ಬಿಗ್ ಬಾಸ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಚಂದನ್ ಶೆಟ್ಟಿ..!

 

 

ಈ ಭಾರಿಯ ಬಿಗ್ ಬಾಸ್ ಕಾರ್ಯಕ್ರಮದ ಬಲಿಷ್ಠ ಸ್ಪರ್ದಿಗಳಲ್ಲಿ ಒಬ್ಬರಾದ ಚಂದನ್ ಶೆಟ್ಟಿ ಬಿಗ್ ಬಾಸ್ ಒಳಗೆ ಮತ್ತು ಹೊರಗೆ ಎಲ್ಲರಿಗೂ ಇಷ್ಟವಾಗಿದ್ದಾರೆ. ಕೈಗೆ ಸಿಕ್ಕ ವಸ್ತುಗಳನ್ನೇ ಸಂಗೀತ ಸಂಯೋಜನೆಗೆ ಉಪಕರಣಗಳನ್ನಾಗಿ ಉಪಯೋಗಿಸಿಕೊಂಡು, ಸ್ಥಳದಲ್ಲೇ ರ‍್ಯಾಪ್‌ ಸಾಂಗ್‌ ಮಾಡುವ ಚಂದನ್‌ ಟ್ಯಾಲೆಂಟ್‌ಗೆ ಎಲ್ಲರೂ ಫಿದಾ ಆಗಿದ್ದಾರೆ..ಬಿಗ್ ಬಾಸ್ ಮನೆಯಲ್ಲಿ ಏಳು ವಾರಗಳಿಂದ ಇದ್ದರೂ ಯಾರೊಂದಿಗೂ ಜಗಳವಾಡದೆ ಯಾರ ಬಗ್ಗೆಯೂ ಗಾಸಿಪ್ ಮಾಡದೆ ಚಂದನ್ ವೀಕ್ಷಕರ ಮೆಚ್ಚುಗೆ ಗಿಟ್ಟಿಸಿಕೊಂಡಿದ್ದಾರೆ.

 

 

ಅಭಿಮಾನಿಗಳ ಪ್ರೀತಿಯ ಚಂದನ್ ಶೆಟ್ಟಿ ಬಿಗ್ ಬಾಸ್ ನಲ್ಲಿ ವಿಶಿಷ್ಟ ಸಾಧನೆಯೊಂದನ್ನ ಮಾಡಿದ್ದಾರೆ. ಈ ಸೀಸನ್ ನಲ್ಲಿ ಒಂದು ವಾರವೂ ನಾಮಿನೇಟ್ ಆಗದೆ ಡೇಂಜರ್ ಜೋನ್ ನಿಂದ ಸಂಪೂರ್ಣವಾಗಿ ಹೊರಗುಳಿಯುವ ಮೂಲಕ ಬಿಗ್ ಬಾಸ್ ನಲ್ಲಿ ಪ್ರಾರಂಭದ ಸತತ ಏಳು ವಾರಗಳು ನಾಮಿನೇಟ್ ಆಗದೆ ಉಳಿದಿರುವ ಏಕೈಕ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

 

 

ಆರನೇ ವಾರ ಚಂದನ್ ನಾಮಿನೇಟ್ ಆಗಿದ್ದರೂ, ಆ ವಾರ ಯಾವುದೇ ಎಲಿಮಿನೇಷನ್ ಇಲ್ಲ ಎಂದು ಹೇಳಿದ್ದರಿಂದ ಯಾವುದೇ ವೋಟಿಂಗ್ ಲೈನ್ ಗಳು ತೆರೆದಿರಲಿಲ್ಲ. ಬಿಗ್ ಬಾಸ್ ಮನೆಯಲ್ಲಿ ಒಮ್ಮೆ ಕೂಡ ನಾಮಿನೇಟ್ ಆಗದೆ ವೀಕ್ಷಕರ ಎಸ್.ಎಂ.ಎಸ್ ಪಡೆಯದೆ ಏಳು ವಾರಗಳ ಕಾಲ ಸೇಫ್ ಆಗಿರುವ ಚಂದನ್ ಶೆಟ್ಟಿಯವರ ಆಟವನ್ನು ಎಲ್ಲರೂ ಮೆಚ್ಚಲೇಬೇಕು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top