fbpx
ಮನೋರಂಜನೆ

12 ವರ್ಷದ ಬಾಲಕನಾಗ್ತಿದ್ದಾರೆ ಧೃವ ಸರ್ಜಾ: ಪೊಗರು ಚಿತ್ರದ ಪಾತ್ರಕ್ಕಾಗಿ 30KG ತೂಕ ಇಳಿಕೆ.

12 ವರ್ಷದ ಬಾಲಕನಾಗ್ತಿದ್ದಾರೆ ಧೃವ ಸರ್ಜಾ: ಪೊಗರು ಚಿತ್ರದ ಪಾತ್ರಕ್ಕಾಗಿ 30KG ತೂಕ ಇಳಿಕೆ.

 

 

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘ಭರ್ಜರಿ ಚಿತ್ರ ಸೂಪರ್ ಹಿಟ್ ಆಗಿದ್ದು ಅವರ ಮುಂದಿನ ಪೊಗರು ಚಿತ್ರ ಶೀಘ್ರದಲ್ಲೇ ಶುರುವಾಗಲಿದೆ..ಮೂರು ಸಿನಿಮಾಗಳ ಗೆಲುವಿನಿಂದ ಅದ್ಧೂರಿ ಹುಡುಗನ ಹೆಗಲ ಮೇಲೆ ಇನ್ನಷ್ಟು ದೊಡ್ಡ ಜವಾಬ್ದಾರಿ, ನಿರೀಕ್ಷೆ ಹೆಚ್ಚಾಗುತ್ತಲೇ ಇದೆ.. ಹೀಗಾಗಿ ಎಲ್ಲ ಅಂಶಗಳನ್ನೂ ಅಳೆದು ತೂಗಿ ಧ್ರುವ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.

 

 

ಪೊಗರು ಚಿತ್ರ ಪ್ರಾರಂಭವಾಗುವುದಕ್ಕೂ ಮುಂಚೆಯೇ ಕುತೂಹಲಕಾರಿ ವಿಷಯವರೊಂದು ಹೊರಬಿದ್ದಿದ್ದು ಚಿತ್ರದಲ್ಲಿ ಧ್ರುವ ಸರ್ಜಾ 12 ವರ್ಷದ ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ 12 ವರ್ಷದ ಹುಡುಗನಿಗೆ ಹೋಲುವ ದೇಹವನ್ನು ಹೊಂದಲು ಧ್ರುವ ಕಠಿಣ ಪರಿಶ್ರಮ ಪಡುತ್ತಿದ್ದಾರಂತೆ ಅದಕ್ಕಾಗಿ 60 ದಿನಗಳಲ್ಲಿ 30 ಕೆಜಿ ತೂಕ ಕಡಿಮೆ ಮಾಡಲು ಡಯೆಟ್ ಮಾಡುತ್ತಿರುವುದಾಗಿ ದ್ರುವ ಸರ್ಜಾ ಹೇಳಿದ್ದಾರೆ..

 

 

“ಈಗ ನಾನು ನನ್ನ ಸಮಯವನ್ನು ವ್ಯರ್ಥ ಮಾಡುತ್ತಿಲ್ಲ. ಪೊಗರು ಚಿತ್ರ ಶಾಲೆ ಮತ್ತು ಕಾಲೇಜು ದಿನಗಳು, 20ರ ಹರೆಯದ ಯುವಕನ ಕಥೆಯನ್ನು ಒಳಗೊಂಡಿದೆ, ಚಿತ್ರದಲ್ಲಿ 8ನೆ ತರಗತಿಯ ಹುಡುಗನ ಪಾತ್ರವನ್ನು ನಾನೇ ಮಾಡುತ್ತಿದ್ದೇನೆ ಆ ಪಾತ್ರಕ್ಕೆ ತಕ್ಕಂತೆಎಂಟನೇ ಕ್ಲಾಸ್ ಹುಡುಗನ ರೀತಿ ಕಾಣಿಸಿಕೊಳ್ಳಲು ನಾನು 60 ದಿನಗಳಲ್ಲಿ ಸುಮಾರು ಮೂವತ್ತು ಕೆಜಿ ತೂಕವನ್ನು ಇಳಿಸಿಕೊಳ್ಳಬೇಕಾಗಿದೆ. ಈಗಾಗಲೇ ನಾನು 26 ಕೆಜಿ ತೂಕವನ್ನು ಇಳಿಸಿಕೊಂಡಿದ್ದೇನೆ ಇನ್ನೂ ನಾಲ್ಕು ಕೆಜಿ ತೂಕವನ್ನು ಇಳಿಸಿಕೊಳ್ಳಬೇಕು”

 

 

ಆಮಿರ್ ಖಾನ್, ಸೂರ್ಯ ಮತ್ತು ಧನುಶ್ ನಟರುಗಳು ಸ್ಕೂಲ್ ಹುಡುಗನ ಪಾತ್ರಕ್ಕೆ ತಮ್ಮ ದೇಹವನ್ನು ಸರಿಹೊಂದುವಂತೆ ಹೇಗೆ ಬದಲಾವಣೆಗಳನ್ನು ಮಾಡಿದರು ಉದಾಹರಣೆಗಳನ್ನು ನಂದಾ ನನಗೆ ನೀಡಿದರು, ಅದೇ ನನ್ನನ್ನು ಪ್ರೇರೇಪಿಸಿತು ಎಂದು ಧ್ರುವ ಹೇಳುತ್ತಾರೆ. ಚಿತ್ರವನ್ನು ನಂದ ಕಿಶೋರ್ ನಿರ್ದೇಶನ ಮಾಡುತ್ತಿದ್ದು ಎಲ್ಲಾ ಅಂದುಕೊಂಡಂತೆ ಆದರೆ ಚಿತ್ರ ಮುಂದಿನ ತಿಂಗಳು ಸೆಟ್ಟೇರುವ ಸಾಧ್ಯತೆ ಇದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top