fbpx
ಆರೋಗ್ಯ

ಹಿಂದಿನ ಜೇಬಿನಲ್ಲಿ ಪರ್ಸ್ , ಮೊಬೈಲ್ ಅಥವಾ ಇನ್ನಾವುದಾದರೂ ವಸ್ತುಗಳನ್ನು ಇಟ್ಟುಕೊಳ್ಳುವ ಅಭ್ಯಾಸ ಇದ್ರೆ ಈಗ್ಲೇ ಬಿಟ್ಬಿಡಿ ಯಾಕೆ ಅಂತೀರಾ ಮುಂದೆ ಓದಿ

ಹಿಂದಿನ ಜೇಬಿನಲ್ಲಿ ಪರ್ಸ್ , ಮೊಬೈಲ್ ಅಥವಾ ಇನ್ನಾವುದಾದರೂ ವಸ್ತುಗಳನ್ನು ಇಟ್ಟುಕೊಳ್ಳಬೇಡಿ

 

 

ಸಾಮಾನ್ಯವಾಗಿ ಗಂಡಸರಿಗೆ ಹೆಂಗಸರ ಹಾಗೆ ದೊಡ್ಡ ಬ್ಯಾಗ್ ಹೊಯ್ಯುವ ಅಭ್ಯಾಸ ಇರುವುದಿಲ್ಲ ತಮ್ಮ ವಸ್ತುಗಳನ್ನು ಆದಷ್ಟು ಕಡಿಮೆಗೊಳಿಸಿಕೊಳ್ಳಲು ಇಷ್ಟ ಪಡುತ್ತಾರೆ .

ಅತಿ ಮುಖ್ಯವಾದ ವಸ್ತು ಎಲ್ಲ ಗಂಡಸರ ಬಳಿ ಇರುವುದು ಎಂದರೆ ಅವರ ಹಣದ ಚೀಲ ಅಥವಾ ಪರ್ಸ್ , ಕೆಲವರು ತಮ್ಮ ಪ್ಯಾಂಟ್ ನ ಮುಂಭಾಗದಲ್ಲಿ ಇರಿಸಿಕೊಂಡರೆ ಇನ್ನು ಕೆಲವರು ಹಿಂದಿನ ಜೇಬಿನಲ್ಲಿ ಇರಿಸಿಕೊಳ್ಳಲು ಇಷ್ಟ ಪಡುತ್ತಾರೆ , ಇದು ಅವರವರ ಅನುಕೂಲಕ್ಕೆ ತಕ್ಕಂತೆ , ಇಷ್ಟಕ್ಕೂ ನಾವು ಯಾಕೆ ಈ ವಿಷ್ಯ ಇಷ್ಟು ಗಾಢವಾಗಿ ಮಾತಾನಾಡುತ್ತಿದ್ದೇವೆ ಅಂತೀರಾ ವಿಷಯ ಇದೆ ಮುಂದೆ ಓದಿ ..

 

 

ಬೇಕಾದ ಬೇಡದ ವಸ್ತುಗಳನ್ನು ಹಿಂದಿನ ಜೇಬಿನಲ್ಲಿ ಹಾಕಿಕೊಂಡು ಗಂಟೆಗಟ್ಟಲೆ ಕದಲದೆ ಕುಳಿತುಕೊಂಡರೆ ನಿಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಚ್ಚರ , ಪರ್ಸ್ ಇಟ್ಟುಕೊಂಡು ಹಾಗೆ ಕೂತುಕೊಂಡು ಸ್ಥಾನ ಪಲ್ಲಟ ಮಾಡದೆ ಇದ್ದರೆ ಪೃಷ್ಠಭಾಗ ಕ್ಕೆ ಹೊಂದಿಕೊಂಡಿರುವ ಮೂಳೆಗಳಲ್ಲಿ ಅಸಮತೋಲನ ಉಂಟಾಗುತ್ತದೆ , ಒಂದು ಪೃಷ್ಠ ಮೇಲೆ ಇನ್ನೊಂದು ಕೆಳಗೆ ಇರುತ್ತದೆ , ಈ ಸ್ಥಾನ ಪಲ್ಲಟದಿಂದಾಗಿ ನಿಮಗೆ ಬೆನ್ನು ಹುರಿಯ ಮೇಲೆ ಭಾರಿ ಮಟ್ಟದ ಒತ್ತಡ ಬಿದ್ದು ಮುಂದೊಮ್ಮೆ ನಡೆಯಲು ಸಾಧ್ಯವೇ ಆಗದೆ ಹೋಗಬಹುದು .

 

 

ಕೆಟ್ಟ ಸೊಂಟದ ಜೋಡಣೆಯು ಕೆಳ ಬೆನ್ನಿನ ನೋವು, ಸ್ನಾಯುವಿನ ಅಸಮತೋಲನ, ಬೆನ್ನುಮೂಳೆಯ ನೋವು , ಮತ್ತು ಮೊಣಕಾಲು ಸಮಸ್ಯೆಗಳಿಗೆ ಕಾರಣವಾಗಬಹುದು.

ಆದ್ದರಿಂದ ಆದಷ್ಟು ನಿಮ್ಮ ಹಣದ ಪರ್ಸ್ ಅಥವಾ ಚೀಲವನ್ನು ನಿಮ್ಮ ಪ್ಯಾಂಟ್ ನ ಮುಂಭಾಗದಲ್ಲಿ ಇರಿಸಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top