fbpx
ಸಮಾಚಾರ

ಎಷ್ಟು ಬಾರಿ ಸ್ವಾಮಿ ನಿತ್ಯಾನಂದ ನಿನ್ನನ್ನು ಮುಟ್ಟಿದ್ದಾನೆ ? ಎಂದ ಏರ್ಪೋರ್ಟ್ ಮಂದಿಯ ವಿರುದ್ಧ ರೊಚ್ಚಿಗೆದ್ದ ನಿತ್ಯನ ಶಿಷ್ಯೆ !

ಕೆನಡಾದಿಂದ ಬಂದ ನಿತ್ಯಾನಂದನ ಭಕ್ತೆಗೆ ಏರ್ಪೋರ್ಟ್ ನಲ್ಲಿ ಆಯ್ತು ಅವಮಾನ

 

ಈ ನಿತ್ಯಾನಂದ ಯಾರು ?

 

 

2010ರ ಮಾರ್ಚ್‌ನಲ್ಲಿ ಬಿಡದಿ ಬಳಿಯ ಧ್ಯಾನಪೀಠದಲ್ಲಿ ರಾಸಲೀಲೆ ನಡೆಸಿದ್ದಾರೆನ್ನಲಾದ ವಿಡಿಯೋ ವೈರಲ್‌ ಆಗಿತ್ತು, ಇಡೀ ಕರ್ನಾಟಕವೇ ಈ ಪ್ರಕರಣದ ಮೇಲೆ ಒಂದು ಕಣ್ಣು ಇಟ್ಟಿತ್ತು , ನಿತ್ಯಾನಂದನ ವಿರುದ್ಧ ಜನ ಕೆಂಡಾಮಂಡಲವಾಗಿದ್ದರು , ಬಿಡದಿ ಪೊಲೀಸ್ ರು ಈ ಪ್ರಕರಣವನ್ನು ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದರು , ನಿತ್ಯಾನಂದರ ಕಾರ್ ಡ್ರೈವರ್‌ ಆಗಿದ್ದ ಲೆನಿನ್‌ ಎಂಬಾತ ಸ್ಪೈ ಕ್ಯಾಮೆರಾ ಬಳಸಿ ನಿತ್ಯಾನಂದ ಹಾಗು ತಮಿಳು ಚಿತ್ರ ನಟಿ ರಂಜಿತ ಜೊತೆ ನಡೆಸಿದ ರಾಸಲೀಲೆಯನ್ನು ರೆಕಾರ್ಡ್ ಮಾಡಿ ಹರಿಯಬಿಟ್ಟಿದ್ದ ಈ ಸಿ. ಡಿ ದೇಶದಲ್ಲೇ ನಿತ್ಯಾನಂದನ ಬಗ್ಗೆ ತಿಳಿಸಿಕೊಡುವಂತೆ ಮಾಡಿತ್ತು .

 

 

ಈ ಸಿ.ಡಿ ಯನ್ನು ನೋಡಿ ಅವನ ಶಿಷ್ಯ ಕೋಟಿ ಅವನಿಗೆ ನಮಸ್ಕಾರ ಹಾಕಿ ಹೋಗಿತ್ತು ಆದರೆ ಅನೇಕರು ಇನ್ನು ಆತನ ಸಹವಾಸ ಮಾಡ್ಕೊಂಡೆ ಇದ್ದಾರೆ ,ನಿತ್ಯಾನಂದನ ಇಲ್ಲೊಬ್ಬಳು ಭಕ್ತೆಗೆ ಆಗಿದೆ ಅವಮಾನ ಆದರೆ ಈ ಘಟನೆ ನಡೆದದ್ದು 2012 ರಲ್ಲಿ ಆದರೆ ಈಗೇಕೆ ಈಕೆ ಈ ವಿಷ್ಯ ಪ್ರಸ್ತಾಪ ಮಾಡುತ್ತಿದ್ದಾಳೆ ಅಂತೀರಾ ಮುಂದೆ ಓದಿ ..

ನಿತ್ಯಾನಂದನ ಕಾಮ ಕೇಳಿಯ ವಿಡಿಯೋ ಬಹಿರಂಗವಾದ ಮೇಲೆ ಆತನ ಶಿಷ್ಯರು , ಸ್ನೇಹಿತರು ಹಾಗು ಸಂಬಂಧಿಕರಿಗೆ ಹಿಂಸೆ ಮಾಡಲಾಗಿದೆಯಂತೆ , ಕೆಲವರಿಗೆ ಮಾನಸಿಕವಾಗಿ ದೈಹಿಕವಾಗಿ ಕ್ರೌರ್ಯಕ್ಕೆ ಒಳಪಡಿಸಲಾಗಿತ್ತಂತೆ ತಾನು ಬೆಂಗಳೂರು ಏರ್ಪೋರ್ಟ್ ನಲ್ಲಿ ಅನುಭವಿಸಿದ ಘಟನೆಯೊಂದನ್ನು ನಿತ್ಯನ ಭಕ್ತೆ ಕ್ಯಾಥರಿನ್ ಅಲಿಯಾಸ್ ಮಹಂತ್ ಮ ನಿತ್ಯ ಸ್ವರೂಪಾಪ್ರಿಯಾನಂದ ಎನ್ನುವವರು ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ , ಹಾಗೆಯೇ ನಿತ್ಯನ ಭಕ್ತರಿಗೆ ನಿರಂತರವಾಗಿ ನೀಡುತ್ತಿರುವ ಹಿಂಸೆ ನಿಲ್ಲಬೇಕಾಗಿ ಕೋರಿ ಆನ್ಲೈನ್ ಪಿಟಿಷನ್ ಕೂಡ ಶುರು ಮಾಡಿದ್ದಾಳೆ .

 

ಅಸಲಿಗೆ ನಡೆದದ್ದೇನು ?

 

 

2012 ರಲ್ಲಿ ಕ್ಯಾಥರಿನ್ ಅಲಿಯಾಸ್ ಮಹಂತ್ ಮ ನಿತ್ಯ ಸ್ವರೂಪಾಪ್ರಿಯಾನಂದ ಕೆನಡಾದಿಂದ ವಾಪಸ್ ಬರುತ್ತಿದ್ದಳು ಆಗ ಆಕೆಯನ್ನು ಅಡ್ಡಗಟ್ಟಿದ ಏರ್ಪೋರ್ಟ್ ಮಂದಿ ಆಕೆಯ ಕತ್ತಿನಲ್ಲಿ ಇದ್ದ ನಿತ್ಯಾನಂದನ ಲಾಕೆಟ್ ನೋಡಿ ಆಕೆಯ ಬಗ್ಗೆ ಹಿಯ್ಯಾಳಿಸುತ್ತಾ ಎಷ್ಟು ಬಾರಿ ನಿತ್ಯಾನಂದ ನಿನ್ನನ್ನು ಮುಟ್ಟಿದ್ದಾನೆ ಎಂದು ಕೇಳಿದರಂತೆ .
‘ನಿತ್ಯಾನಂದ ಯಾರೊಂದಿಗೂ ಕೆಟ್ಟದಾಗಿ ನಡೆದುಕೊಳ್ಳಲಿಲ್ಲವಂತೆ , ನಾನು ಇಷ್ಟ ಪಟ್ಟು ಇಲ್ಲಿಗೆ ಬಂದಿದ್ದೇನೆ ಯಾರು ನನ್ನನ್ನು ಬಲವಂತವಾಗಿ ಇಲ್ಲಿಗೆ ಕರೆತಂದಿಲ್ಲ , ಸ್ವಾಮೀಜಿ ಯಾರಿಗೂ ಕೆಡುಕು ಮಾಡಿಲ್ಲ ಅಸಭ್ಯವಾಗಿ ವರ್ತಿಸಿಲ್ಲ ,

 

‘ನೀನು ನಿತ್ಯಾನಂದನನ್ನು ಯಾಕೆ ನಂಬುತ್ತಿಯಾ ಎಂದು ಪ್ರಶ್ನೆ ಹಾಕಿದರು ಅದಕ್ಕೆ ಅವರು ನನಗೆ ಶಕ್ತಿಯನ್ನು ನೀಡುತ್ತಾರೆ ಎಂದೇ
ಎಲ್ಲಿ ತೋರಿಸು ಎಂದು ಏರ್ಪೋರ್ಟ್ ಅಧಿಕಾರಿಗಳು ಪ್ರಶ್ನೆ ಹಾಕಿದರಂತೆ ಆಗ ಆಕೆ ಬಾಟಲ್ ಒಂದನ್ನು ಚಲಿಸಿ ತನ್ನ ಶಕ್ತಿಯನ್ನು ತೋರಿಸಿದಳಂತೆ ”

 

ಈ ರೀತಿ ಫೇಸ್ಬುಕ್ ನಲ್ಲಿ ಕ್ಯಾಥರಿನ್ ಅಲಿಯಾಸ್ ಮಹಂತ್ ಮ ನಿತ್ಯ ಸ್ವರೂಪಾಪ್ರಿಯಾನಂದ ಹೇಳಿಕೊಂಡಿದ್ದಾಳೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top