fbpx
ಮನೋರಂಜನೆ

ಗೂಗ್ಲಿ ನಿರ್ದೇಶಕ ಪವನ್ ಒಡೆಯರ್’ಗೆ ಕೂಡಿ ಬಂತು ಕಂಕಣಭಾಗ್ಯ..!

ಗೂಗ್ಲಿ ನಿರ್ದೇಶಕ ಪವನ್ ಒಡೆಯರ್’ಗೆ ಕೂಡಿ ಬಂತು ಕಂಕಣಭಾಗ್ಯ..!

 

 

ಇತ್ತೀಚಿಗೆ ಸ್ಯಾಂಡಲ್ ವುಡ್ ನಲ್ಲಿ ಮದುವೆಯ ಪರ್ವ ಗಾಢವಾಗಿ ಅನೇಕ ಮದುವೆ ಕಾರ್ಯಕ್ರಮಗಳು ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿವೆ. ರಕ್ಷಿತ್- ರಶ್ಮಿಕಾ, ಚಿರು -ಮೇಘನಾ ಸೇರಿದಂತೆ ಕೆಲವು ಸ್ಟಾರ್ ಜೋಡಿಗಳು ಮದುವೆಯ ನಿಶ್ಚಿತಾರ್ಥವನ್ನು ಮಾಡಿಕೊಂಡಿರುವ ವಿಷಯ ನಿಮಗೆಲ್ಲರಿಗೂ ಗೊತ್ತೇ ಇದೆ. ಮೊನ್ನೆ ರಾಜಕುಮಾರ ಚಿತ್ರದ ನಿರ್ದೇಶಕ ಸಂತೋಷ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ಕನ್ನಡ ಚಿತ್ರರಂಗದ ಮತ್ತೊಬ್ಬ ಪ್ರತಿಭಾನ್ವಿತ ನಿರ್ದೇಶಕ ಸಾಂಸಾರಿಕ ಜೀವನಕ್ಕೆ ಕಾಲುಡುತ್ತಿದ್ದಾರೆ.

 

 

ಹೌದು ಗೋವಿಂದಾಯ ನಮಃ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ ಪವನ್ ಒಡೆಯರ್ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಗುರು ಹಿರಿಯರು ಸೇರಿ ನಿರ್ಧಾರ ಮಾಡಿರುವಂತೆ ಇದೇ ಡಿಸೆಂಬರ್ 07ರಂದು ಅಪೇಕ್ಷ ಎಂಬುವವರ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ.

 

 

ಈ ಬಗ್ಗೆ ಸ್ವತಃ ಪವನ್ ಅವರೇ ತಮ್ಮ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದು “ಹೌದು.. ಕೊನೆಗೂ ಆ ದಿನ ಬಂದೇ ಬಿಟ್ಟಿತು. ನನ್ನ ಮುಂದಿನ ಜೀವನದ ಹೆಜ್ಜೆಯ ಜೊತೆ ಹೆಜ್ಜೆ ಇಡಲು ಗುರು ಹಿರಿಯರು ನಿಶ್ಚಯಿಸಿರುವ,ಅಪೇಕ್ಷೆ ಪಟ್ಟಿರುವ ಅಪೇಕ್ಷಾಳ ಜೊತೆ ನನ್ನ ನಿಶ್ಚಿತಾರ್ಥ, ಇದೇ ಡಿಸೆಂಬರ್ ಏಳನೇ ತಾರೀಖು ನಿಮ್ಮೆಲ್ಲರ ಶುಭಾಶೀರ್ವಾದ ನಮ್ಮ ಮೇಲೆ ಇರಲಿ. ಧನ್ಯವಾದಗಳು” ಎಂದು ತಮ್ಮದೇ ವಿಭಿನ್ನ ಶೈಲಿಯಲ್ಲಿ ಪೋಸ್ಟ್ ಮಾಡಿದ್ದಾರೆ.

 

 

 

ಪವನ್ ಒಡೆಯರ್ ರನ್ನು ಕೈಹಿಡಿಯುತ್ತಿರುವ ಅಪೇಕ್ಷ ರವರು ನಟಿಯಾಗಿದ್ದು ಇತ್ತೀಚಿಗಿನ ಕಾಫಿತೋಟ ಚಿತ್ರದಲ್ಲಿ ನಟಿಸಿದ್ದರು. ಈ ಹಿಂದಿ ಉದಯ ಟಿವಿ ಮತ್ತು ಸುವರ್ಣ ವಾಹಿನಿಗಳಲ್ಲಿ ನಟಿಸಿದ್ದರು.
 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top