fbpx
ಮನೋರಂಜನೆ

ಮದುವೆ ವಾರ್ಷಿಕೋತ್ಸವಕ್ಕೆ ಯಶ್-ರಾಧಿಕಾ ಅಭಿಮಾನಿಗಳಿಗೆ ಸಿಕ್ತಿದೆ ವಿಶೇಷ ಉಡುಗೊರೆ.

ಮದುವೆ ವಾರ್ಷಿಕೋತ್ಸವಕ್ಕೆ ಯಶ್-ರಾಧಿಕಾ ಅಭಿಮಾನಿಗಳಿಗೆ ಸಿಕ್ತಿದೆ ವಿಶೇಷ ಉಡುಗೊರೆ.

 

 

ಸ್ಯಾಂಡಲ್ ವುಡ್ ತಾರೆಯರಾದ ಯಶ್ ಮತ್ತು ರಾಧಿಕಾ ಪಂಡಿತ್ ಮದುವೆಯಾಗಿ ಒಂದು ವರ್ಷವಾಗಿದ್ದು ಇನ್ನು ಹತ್ತು ದಿನ ಕಳೆದರೆ ಒಂದು ವರ್ಷ ಪೂರ್ಣಗೊಳ್ಳುತ್ತಿದ್ದು ಈ ಸಂತೋಷವನ್ನು ಸ್ವಲ್ಪ ವಿಭಿನ್ನವಾಗಿಯೇ ಆಚರಿಸಲು ರಾಧಿಕಾ ಪಂಡಿತ್ ಪ್ಲಾನ್ ಮಾಡಿಕೊಂಡಿದ್ದಾರೆ.

 

 

ಈ ಬಗ್ಗೆ ತಮ್ಮ ಫೇಸ್ಬುಕ್ ಅಕೌಂಟ್ ಮಾಡಿರುವ ರಾಧಿಕಾ ಪಂಡಿತ್ ಈ ಹತ್ತು ದಿನಗಳು ಅಭಿಮಾನಿಗಳಿಗಾಗಿ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮದುವೆಯ ಸಂಧರ್ಭದ ಎಕ್ಸ್‌ ಕ್ಲೂಸಿವ್ ಫೋಟೋಗಳು ಮತ್ತು ಶಾರ್ಟ್ ವಿಡಿಯೋಗಳನ್ನು ಹಂಚಿಕೊಳ್ಳಲು ನಿರ್ಧರಿಸಿದ್ದಾರೆ..ಅದು ಇವತ್ತಿನಿಂದ ಆರಂಭವಾಗಿದ್ದು ಈಗಾಗಲೇ ಒಂದು ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ. ಇನ್ನೂ ಮುಂದಿನ ಒಂಬತ್ತು ದಿನಗಳು ಕೂಡ ಇದೆ ರೀತಿಯ ವಿಶೇಷವಾದ ಫೋಟೋ ಅಥವಾ ಶಾರ್ಟ್ ವಿಡಿಯೋಗಳನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದು.

 

 

ಡಿಸೆಂಬರ್ 9 ರಂದು ರಾಕಿಂಗ್ ಜೋಡಿಯ ಒಂದನೇ ವರ್ಷದ ವಿವಾಹ ವಾರ್ಷಿಕೋತ್ಸವದ ದಿನವಾಗಿರೋದ್ರಿಂದ ಆ ದಿನ ತಮ್ಮ ಅಭಿಮಾನಿಗಳನ್ನ ಮೀಟ್ ಮಾಡದು ಡೌಟ್. ಯಾಕೆಂದರೆ ಈಗಾಗಲೇ ಪ್ಲಾನ್ ಆಗಿರುವಂತೆ ಇಬ್ಬರು ವಿದೇಶಕ್ಕೆ ಹೋಗಿ ಅಲ್ಲಿಯೇ ತಮ್ಮ ಮೊದಲ ವಾರ್ಷಿಕೋತ್ಸವ ಆಚರಿಸಿಕೊಳ್ಳಲಿದ್ದಾರೆ..ಹಾಗಾಗಿ ಅಂದು ಯಶ್ ಮತ್ತು ರಾಧಿಕಾರನ್ನು ಭೇಟಿ ಮಾಡುವ ಭಾಗ್ಯ ಅವರ ಅಭಿಮಾನಿಗಳಿಗಿಲ್ಲ.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top