fbpx
ಮನೋರಂಜನೆ

ಆರಡಿ ಕಟೌಟ್ ಸುದೀಪ್ ಐದಡಿ ಕುಳ್ಳ ಕಿಚ್ಚ ಆಗೋದು ಹೇಗೆ?

ಆರಡಿ ಕಟೌಟ್ ಸುದೀಪ್ ಐದಡಿ ಕುಳ್ಳ ಕಿಚ್ಚ ಆಗೋದು ಹೇಗೆ?

 

 

 

ಸಣ್ಣ ಇರೋರು ದಪ್ಪ ಆಗೋದನ್ನ ಕೇಳಿರ್ತಿರಾ ಹಾಗೆಯೇ ದಪ್ಪ ಇರೋರು ಸಣ್ಣ ಆಗೋದನ್ನ ಕೇಳಿರ್ತೀರಾ, ಕುಳ್ಳ ಆಗಿರೋರು ಉದ್ದ ಆಗೋದನ್ನೂ ಕೇಳಿರ್ತೀರಾ ಆದರೆ ಉದ್ದ ಇರೋರು ಕುಳ್ಳ ಆಗಿರೋದನ್ನ ಎಲ್ಲಾದರೂ ಕೇಳಿದ್ದೀರಾ? ಇಂಥದ್ದೊಂದು ವಿಚಿತ್ರ ಪ್ರಶ್ನೆಯನ್ನು ಹುಟ್ಟು ಹಾಕಿದ್ದಾರೆ ಆರಡಿ ಕಟೌಟ್ ಸುದೀಪ್. ಸುದೀಪ್ ಆರಡಿ ಪ್ಲಸ್ ಎತ್ತರವಿದ್ದಾರೆ ಅದಕ್ಕಾಗಿಯೇ ಅವರನ್ನು ಆರಡಿ ಕಟೌಟ್ ಎಂತಲೂ ಕರೆಯಲಾಗುತ್ತದೆ. ಈಗ ಸುದೀಪ್ ಇದ್ದಕ್ಕಿದ್ದ ಹಾಗೆ ತಮ್ಮ ಎತ್ತರವನ್ನು ಕಡಿಮೆ ಮಾಡಿಕೊಳ್ಳಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಅದು ಅವರು ಮಾಡ್ತಿರೋ “ಅಂಬಿ ನಿಂಗೆ ವಯಸ್ಸಾಯ್ತೋ” ಚಿತ್ರಕ್ಕಾಗಿ. ಎತ್ತರ ಇಳಿಸಿಕೊಳ್ಳೋಕೆ ಸಾಧ್ಯನಾ? ಕಿಚ್ಚ ನಿಜವಾಗ್ಲೂ ತಮ್ಮ ಎತ್ತರ ಇಳಿಸಿಕೊಳ್ಳುತ್ತಾರಾ? ಮುಂದೆ ಓದಿ

 

 

ಅಂಬರೀಷ್ ನಾಯಕನಾಗಿ ನಟಿಸುತ್ತಿರುವ “ಅಂಬಿ ನಿಂಗೆ ವಯಸ್ಸಾಯ್ತೋ” ಚಿತ್ರದಲ್ಲಿ ಅಂಬರೀಷ್ ಅವರ ಫ್ಲಾಶ್ ಬ್ಯಾಕ್ ದೃಶ್ಯಗಳಲ್ಲಿ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ. ಅಂಬರೀಷ್ ಎತ್ತರದಲ್ಲಿ ಐದು ಅಡಿ ಆಸುಪಾಸಿದ್ದಾರೆ. ಹಾಗಾಗಿ ಚಿತ್ರದಲ್ಲಿ ಅಂಬಿಯವರ ಯವ್ವನದ ಪಾತ್ರವನ್ನು ಮಾಡ್ತಿರೋ ಸುದೀಪ್ ತುಂಬಾ ಎತ್ತರವಾಗಿರೋದ್ರಿಂದ ಕಿಚ್ಚ ಹೇಗೆ ಐದಡಿ ಆಗೋದು ಮತ್ತು ಈ ಹೈಟ್‌ನ ಹೇಗೆ ಬ್ಯಾಲನ್ಸ್ ಮಾಡೋದು ಅನ್ನೋ ಕುತೂಹಲ ಸಹಜವಾಗಿಯೇ ಎಲ್ಲರಿಗೂ ಇದೆ.

 

 

ಈ ಬಗ್ಗೆ ಸ್ವತಃ ಚಿತ್ರದ ನಿರ್ದೇಶಕ ಗುರುದತ್ ಗಾಣಿಗ ಮಾತನಾಡಿದ್ದು “ಚಿತ್ರದಲ್ಲಿ ಅಂಬರೀಶಣ್ಣನ ಯೌವ್ವನದ ಪಾತ್ರವನ್ನು ಸುದೀಪ್‌ ಸರ್‌ ಮಾಡ್ತಿದ್ದಾರೆ. ಯೌವ್ವನದ ಪಾತ್ರ ತುಂಬಾ ಎತ್ತರವಾಗಿದ್ದು, ವಯಸ್ಸಾಗಿರೋ ಪಾತ್ರಕ್ಕೆ ಎತ್ತರ ಕಮ್ಮಿ ಇರುವ ಬಗ್ಗೆ ಚರ್ಚೆ ಶುರುವಾಗಿದೆ. ಅದಕ್ಕೆ ನಮ್ಮ ಬಳಿ ಉಪಾಯವೂ ಇದೆ ಈಗಿನ ಟೆಕ್ನಲಾಜಿ ತುಂಬಾ ಮುಂದೆ ಇದೆ ಆ ಟೆಕ್ನಲಾಜಿಯನ್ನು ಬಳಸಿ ಅಂಬರೀಶಣ್ಣನ ಹಣೆ, ಕಣ್ಣುಗಳನ್ನು ಸುದೀಪ್‌ ಸರ್‌ ಮುಖಕ್ಕೆ ಹೊಂದಿಕೊಳ್ಳುವಂತೆ ಮಾಡುವ ಕುರಿತು ಯೋಚಿಸಲಾಗಿದೆ”

 

 

“ಸಿನಿಮಾವನ್ನು ಸಿನಿಮಾ ರೀತಿ ನೋಡುವುದಾದರೆ ಯಾರಿಗೂ ಎತ್ತರ ವ್ಯತ್ಯಾಸದ ಭಾವನೆ ಬರುವುದಿಲ್ಲ. ಯೌವ್ವನದ ಪಾತ್ರವನ್ನು ಅಂಬರೀಶ್‌ರಿಗೆ ಸ್ವಲ್ಪ ಹೋಲಿಕೆಬರುವಂತೆ ತೋರಿಸೋಕೆ ಪ್ರಯತ್ನಿಸುತ್ತಿದ್ದೇವೆ, ಸುದೀಪ್ ಸರ್ ಪಾತ್ರವನ್ನು ಯುವಕ ಅಂಬರೀಶ್‌ ಅವರ ಪಾತ್ರವೇ ಎಂಬುದನ್ನು ನಂಬುವಷ್ಟರಮಟ್ಟಿಗೆ ತೋರಿಸುತ್ತೇವೆ. ಈ ಕುರಿತು ಮುಂಬೈನ ಪ್ರತಿಷ್ಠಿತ ಕಂಪೆನಿಯೊಂದರ ಜತೆ ಮಾತುಕತೆ ನಡೆಸುತ್ತಿದ್ದೇವೆ” ಎಂದು ಚಿತ್ರದ ಡೈರೆಕ್ಟರ್ ಗುರುದತ್ ಹೇಳಿದ್ದಾರೆ.

 

 

ಈ ಚಿತ್ರವನ್ನು ಕಿಚ್ಚ ಸುದೀಪ್ ಮತ್ತು ಮಂಜುನಾಥ್ ಗೌಡ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.ಅರ್ಜುನ್ಯ ಜನ್ಯ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಅಂಬರೀಷ್’ಗೆ ನಟಿ ಸುಹಾಸಿನಿ ನಾಯಕಿಯಾಗಿದ್ದಾರೆ. ಸುದೀಪ್ ರವರಿಗೆ ನಾಯಕಿಯನ್ನು ಇನ್ನು ಆಯ್ಕೆ ಮಾಡಿಲ್ಲ. ಡಿಸೆಂಬರ್‌ 7 ಅಥವಾ 8ರಿಂದ ಚಿತ್ರೀಕರಣ ಶುರುವಾಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top