fbpx
ಕಿರುತೆರೆ

ಖುಷಿಯಿಂದಿದ್ದ ಸಿಹಿ ಕಹಿ ಚಂದ್ರುಗೆ ಬಿಗ್ ಶಾಕ್ ನೀಡಿದ ಬಿಗ್ ಬಾಸ್..

 ಖುಷಿಯಿಂದಿದ್ದ ಸಿಹಿ ಕಹಿ ಚಂದ್ರುಗೆ ಬಿಗ್ ಶಾಕ್ ನೀಡಿದ ಬಿಗ್ ಬಾಸ್..!

 

 

ನಿನ್ನೆ ಆಧುನಿಕ ನಗರದ ಜೀವನ ಶೈಲಿಯನ್ನು ಪರಿಚಯಿಸುವ ಉದ್ದೇಶದಿಂದ, ‘ಬಿಗ್ ಬಾಸ್ ನಗರ’ ಲಕ್ಸುರಿ ಬಜೆಟ್ ಟಾಸ್ಕ್ ನೀಡಲಾಗಿತ್ತು.ಇದರಂತೆ ಮನೆಯ ಭಾಗಗಳಿಗೆ ವಿವಿಧ ಏರಿಯಾಗಳ ಹೆಸರಿಡಲಾಗಿದೆ. ಜಯಶ್ರಿನಿವಾಸನ್, ಜಗನ್ ಟ್ಯಾಕ್ಸಿ ಡ್ರೈವರ್ ಗಳಾಗಿದ್ದು, ಚಂದ್ರು, ಸಮೀರಾಚಾರ್ಯ, ಕ್ಯಾಂಟೀನ್ ಮಾಲೀಕರಾಗಿದ್ದಾರೆ. ಉಳಿದಂತೆ ಆಶಿತಾ,ಜೆಕೆ, ನಿವೇದಿತಾ, ಶ್ರುತಿ, ಅನುಪಮಾ, ದಿವಾಕರ್, ಚಂದನ್ ನಾಗರಿಕರಾಗಿದ್ದಾರೆ. ರಿಯಾಜ್ ಹಾಗೂ ಕೃಷಿ ಅಧಿಕಾರಿಗಳಾಗಿದ್ದರು.

 

 

ಪ್ರತಿ ನಾಗರಿಕರಿಗೆ ತಲಾ 2000 ರೂ. ನೀಡಲಾಗಿದ್ದು ನಾಗರಿಕರು ಮತ್ತು ಕ್ಯಾಂಟೀನ್ ಮಾಲೀಕರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವಾಗ, ಟ್ಯಾಕ್ಸಿಯಲ್ಲಿಯೇ ಹೋಗಬೇಕಾಗಿತ್ತು ಟ್ಯಾಕ್ಸಿಯಲ್ಲಿ ಹೋಗುವುದಕ್ಕೆ ದುಡ್ಡು ಕೊಡಬೇಕಿತ್ತು. ಹಾಗು ಊಟಗಳನ್ನು ಕ್ಯಾಂಟೀನ್ ನಲ್ಲಿ ಹಣ ಕೊಟ್ಟು ಖರೀದಿಸಬೇಕಾಗಿತ್ತು. ಇನ್ನು ‘ಬಿಗ್ ಬಾಸ್’ ಮನೆಯಲ್ಲಿ ಕನ್ ಫೆಷನ್ ರೂಂ ಕಪಾಲಿ ಥಿಯೇಟರ್ ಆಗಿದ್ದು ಟಾಸ್ಕ್‌ ಅನ್ವಯ ಹಣ ಕೊಟ್ಟು ಚಿತ್ರ ವೀಕ್ಷಣೆ ಮಾಡಬೇಕಿತ್ತು.

 

 

ಮುಂಗಡವಾಗಿ ಹಣ ಪಾವತಿಸಿ ಟಿಕೆಟ್ ಕಾಯ್ದಿರಿಸಿಕೊಂಡಿದ್ದ ಚಂದ್ರು ಮೊದಲಿಗರಾಗಿ ಸಿನಿಮಾ ನೋಡಲು ಖುಷಿಯಿಂದ ಬಂದಾಗ ಅವರಿಗೆ ಆಶ್ಚರ್ಯವೊಂದು ಕಾದಿತ್ತು. ಆ ವಿಡಿಯೋದಲ್ಲಿ ಬಿಗ್ ಬಾಸ್ ಮನೆಯ ಮಂದಿ ಚಂದ್ರು ಅವರನ್ನು ಬೆನ್ನ ಹಿಂದೆ ಯಾವೆಲ್ಲ ರೀತಿ ನಿಂದಿಸಿದ್ದಾರೆ ಎಂದು ತೋರಿಸಲಾಯಿತು, ಜಗನ್, ಜೆಕೆ, ಜಯ ಶ್ರೀನಿವಾಸನ್‌,ರಿಯಾಜ್ ,ನಿವೇದಿತಾ ಸೇರಿದಂತೆ ಬಿಗ್ ಬಾಸ್ ಸ್ಪರ್ಧಿಗಳು ಚಂದ್ರು ಅವರ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ್ದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top