fbpx
ಸಮಾಚಾರ

ಮಾಡಿದ ತಪ್ಪಿಗೆ ತಮ್ಮ ಬೆಂಬಲಿಗರನ್ನೇ ನಡು ನೀರಿನಲ್ಲಿ ಕೈಬಿಟ್ಟು “ಇವರು ನನ್ನ ಬೆಂಬಲಿಗರೇ ಅಲ್ಲ” ಅಂತ ಅಂದುಬಿಟ್ರಾ ಪ್ರತಾಪ್ ಸಿಂಹ.

ಮಾಡಿದ ತಪ್ಪಿಗೆ ತಮ್ಮ ಬೆಂಬಲಿಗರನ್ನೇ ನಡು ನೀರಿನಲ್ಲಿ ಕೈಬಿಟ್ಟ ಪ್ರತಾಪ್ ಸಿಂಹ.

 

 

ದೇಶಾದ್ಯಂತ ಭಾರಿ ವಿವಾದವನ್ನು ಹುಟ್ಟಿಹಾಕಿರುವ ‘ಪದ್ಮಾವತಿ’ ಚಿತ್ರವನ್ನು ವಿರೋಧಿಸುವ ಭರದಲ್ಲಿ ಬಿಜೆಪಿ ಬೆಂಬಲಿಗ ಫೇಸ್ಬುಕ್ ಪುಟಗಳು ಮಹಾ ಎಡವಟ್ಟು ಮಾಡಿಕೊಂಡಿವೆ . ‘ಐ ಸಪೋರ್ಟ್‌ ಪ್ರತಾಪ್‌ ಸಿಂಹ’ , ‘ಐ ಸಪ್ಪೋರ್ಟ್ ಬಿಜೆಪಿ’, ‘ನರೇಂದ್ರ ಮೋದಿ ಫ್ಯಾನ್ಸ್ ಫ್ರಮ್ ಕರುನಾಡು’,’ಪ್ರತಾಪ್ ಸಿಂಹ ಫಾರ್ ಸಿಎಂ’ ಎಂಬ ಬಿಜೆಪಿ ಪಕ್ಷದ ಬೆಂಬಲಿಗರ ಫೇಸ್ಬುಕ್ ಪೇಜ್’ಗಳಲ್ಲಿ ರಾಣಿ ಚೆನ್ನಮ್ಮ ಹಾಗೂ ಒನಕೆ ಓಬವ್ವರಿಗೆ ಕೀಳು ಮಟ್ಟದಲ್ಲಿ ಅವಮಾನ ಮಾಡುವ ಮೂಲಕ ಕನ್ನಡಿಗರ ಸ್ವಾಭಿಮಾನಕ್ಕೆ ದಕ್ಕೆ ತಂದಿದ್ದಾರೆ..

 

 

ಪದ್ಮಾವತಿ ಚಿತ್ರವನ್ನು ಕನ್ನಡ ಚಿತ್ರರಂಗ ಬೆಂಬಲಿಸಿದ್ದಕ್ಕಾಗಿ ಸ್ಯಾಂಡಲ್ ವುಡ್ ನ ಈ ನಡೆಯನ್ನು ವಿರೋಧಿಸಿ ಮೈಸೂರು ಹಾಗೂ ಕೊಡಗು ಬಿಜೆಪಿ ಸಂಸದ ಪ್ರತಾಪ ಸಿಂಹ ಅವರ ಬೆಂಬಲಿಗರು ಕನ್ನಡಿಗರ ಹೆಮ್ಮೆಯ ವೀರವನಿತೆರನ್ನು ಅವಹೇಳನ ಮಾಡಿ ತೀರಾ ಕೆಳಮಟ್ಟದಲ್ಲಿ ಅವಮಾನ ಮಾಡಿ ಫೇಸ್’ಬುಕ್’ನಲ್ಲಿ ಪೋಸ್ಟ್ ಹಾಕಲಾಗಿದ್ದು “ರಾಣಿ ಚೆನ್ನಮ್ಮ ಬ್ರಿಟಿಷರ ಜೊತೆ ಅನೈತಿಕ ಸಂಭಂದವನ್ನು ಹೊಂದಿದ್ದಳು ಒನಕೆ ಓಬವ್ವ ಹೈದರಾಲಿಯ ಜೊತೆ ಮಂಚ ಹಂಚಿಕೊಂಡಿದ್ದಳು,” ಎಂದು ಹೇಳಿ ಬಳಿಕ, ಕೋಪ ಬಂತಲ್ವಾ? ಎಂದು‌ ಪೋಸ್ಟ್ ಮಾಡಿರುವ ಪ್ರತಾಪ್ ಬೆಂಬಲಿಗರು, ಹಾಗಿದ್ರೆ ಇಂಥ ಕಥೆಗಳ ವಿರುದ್ದ ಕನ್ನಡ ಚಿತ್ರರಂಗಕ್ಕೆ ಕೋಪ ಬರ್ತಿಲ್ವಾ ಎಂದು ಪ್ರಶ್ನಿಸಿದ್ದಾರೆ.

 

 

ಉದಾಹರಣ ಕೊಡೋ ಭರದಲ್ಲಿ ತೀರಾ ಕೆಳಮಟ್ಟಕ್ಕೆ ಇಳಿದು ನಾಡಿನ ವೀರ ಮಹಿಳೆಯರನ್ನ ಅವಮಾನಿಸಿದ ‘ಐ ಸಪೋರ್ಟ್‌ ಪ್ರತಾಪ್‌ ಸಿಂಹ’ , ‘ಐ ಸಪ್ಪೋರ್ಟ್ ಬಿಜೆಪಿ’, ‘ನರೇಂದ್ರ ಮೋದಿ ಫ್ಯಾನ್ಸ್ ಫ್ರಮ್ ಕರುನಾಡು’,’ಪ್ರತಾಪ್ ಸಿಂಹ ಫಾರ್ ಸಿಎಂ’ ಎಂಬ ಫೇಸ್ಬುಕ್ ಪೇಜ್’ಗಳನ್ನು ಈ ಕೂಡಲೇ ವೆಲ್ತ್ ಮಾಡಲೇಬೇಕು ಈ ರೀತಿ ಪೋಸ್ಟ್ ಮಾಡಿದ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕನ್ನಡಿಗರು ಆಗ್ರಹಿಸುತ್ತಿದ್ದಾರೆ.

 

ಕೃಪೆ: ವಿಶ್ವವಾಣಿ

 

ಇತ್ತ ಈ ಬಗ್ಗೆ ಫೇಸ್’ಬುಕ್ ನಲ್ಲಿ ವಿಡಿಯೋ ಮಾಡಿರುವ ಪ್ರತಾಪ್ ಸಿಂಹ “ಅವರ್ಯಾರು ನನ್ನ ಅಭಿಮಾನಿಗಳಲ್ಲ, ಅವರ್ಯಾರು ಅನ್ನೋದೇ ನನಗೆ ಗೊತ್ತಿಲ್ಲ”  ಅಂತ ಸುಳ್ಳು ಹೇಳಿ ನಂಬಿಸಲು ಪ್ರಯತ್ನಿಸಿದ್ದಾರೆ. ಆದರೆ ಆ ಪೋಸ್ಟ್ ಬಂದಿರುವ 5-6 ಪೇಜ್ ಗಳು ಯಾವಾಗಲೂ ಬಿಜೆಪಿಯ ವಿಷಯಗಳನ್ನೇ ಶೇರ್ ಮಾಡುತ್ತಿದ್ದವು ಅನ್ನೋದನ್ನ ಪ್ರತಾಪ್ ಸಿಂಹ ಮರೆತೇ ಬಿಟ್ಟಿದ್ದಾರೆ.. ಸದಾ ಬಿಜೆಪಿಯ ಸುದ್ದಿಗಳನ್ನೇ ಪ್ರಕಟಿಸುವ ಬಿಜೆಪಿಯ ವೆಬ್ ಸೈಟ್ ಆಗಿರುವ postcard kannada ಅಂತರ್ಜಾಲ ತಾಣ ಈ ಕೀಳು ಸುದ್ದಿಯನ್ನು ಪ್ರಕಟಿಸಿದೆ.. ನನಗೂ ಇದಕ್ಕೂ ಸಂಬಂಧನೇ ಇಲ್ಲ ಅನ್ನೋ ಪ್ರತಾಪ್ ಸಿಂಹ ಅವರೇ ಒಮ್ಮೆ ಆ postcard kannada ವೆಬ್ ಸೈಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅಂಕಣವನ್ನು ಬರೆದಿದ್ದರು ಈಗ ಅವರ ಆ ವೆಬ್ ಸೈಟ್ ನಡೆಸುತ್ತಿರುವವರ್ಯಾರು ಅಂತ ಪ್ರತಾಪ್ ಸಿಂಹನಿಗೆ ಮರೆತೇ ಹೋಯಿತೇ.

 

 

postcard kannada ಅಂತರ್ಜಾಲ ತಾಣ ಪ್ರಕಟಿಸುವ ಸುದ್ದಿಗಳನ್ನು ಅವರದ್ದೇ ತಂಡದವರು ನಡೆಸುವ ‘ಐ ಸಪೋರ್ಟ್‌ ಪ್ರತಾಪ್‌ ಸಿಂಹ’ , ‘ಐ ಸಪ್ಪೋರ್ಟ್ ಬಿಜೆಪಿ’, ‘ನರೇಂದ್ರ ಮೋದಿ ಫ್ಯಾನ್ಸ್ ಫ್ರಮ್ ಕರುನಾಡು’,’ಪ್ರತಾಪ್ ಸಿಂಹ ಫಾರ್ ಸಿಎಂ’ ‘ವೀರಕೇಸರಿ’ ವೈರಲ್ ಮಾಡುತ್ತಾರೆ.. ವಿಪರ್ಯಾಸ ಏನು ಅಂದ್ರೆ ಇವರು ನನ್ನ ಬೆಂಬಲಿಗರೇ ಅಲ್ಲ ಅಂತ ಹೇಳೋ ಪ್ರತಾಪ್ ಸಿಂಹ ಕೂಡ ಈ ‘ಐ ಸಪೋರ್ಟ್‌ ಪ್ರತಾಪ್‌ ಸಿಂಹ’ facebook ಪೇಜ್’ಅನ್ನು ಫಾಲೋ ಮಾಡ್ತಿದ್ದಾರೆ. ಪ್ರತಾಪ್ ಸಿಂಹ ಹೇಳೋ ಹಾಗೆ ‘ಐ ಸಪೋರ್ಟ್‌ ಪ್ರತಾಪ್‌ ಸಿಂಹ’ ಗೂ ಬಿಜೆಪಿ ಬೆಂಬಲಿಗರಿಗೂ ಯಾವುದೇ ಸಂಬಂಧವಿಲ್ಲ ಎಂಬ ಮಾತನ್ನ ಒಪ್ಪಿಕೊಂಡರೂ ಇಷ್ಟು ದಿನ ಬಿಜೆಪಿಯ ಬಗ್ಗೆ ಪ್ರಚಾರವನ್ನು ಯಾಕೆ ಮಾಡುತ್ತಿತ್ತು. ‘ಐ ಸಪೋರ್ಟ್‌ ಪ್ರತಾಪ್‌ ಸಿಂಹ’ , ‘ಐ ಸಪ್ಪೋರ್ಟ್ ಬಿಜೆಪಿ’, ‘ನರೇಂದ್ರ ಮೋದಿ ಫ್ಯಾನ್ಸ್ ಫ್ರಮ್ ಕರುನಾಡು’,’ಪ್ರತಾಪ್ ಸಿಂಹ ಫಾರ್ ಸಿಎಂ’ ‘ವೀರಕೇಸರಿ’ ಪೇಜ್ ಗಳು ಸದಾಕಾಲ ಯಾಕೆ ಬಿಜೆಪಿ ಸಂಬಂಧ ವಿಷಯಗಳನ್ನ ಪ್ರಕಟಿಸುತ್ತವೆ.

 

 

ತಮ್ಮ ರಾಜಕೀಯ ಬೆಳೆಯನ್ನು ಬೇಯಿಸಿಕೊಳ್ಳಲು ನಾಡಿನ ವೀರವನಿತೆಯರ ಅವಹೇಳನ ಮಾಡಿ ಕೀಳು ಮಟ್ಟಕ್ಕೆ ಇಳಿದಿರುವ ಇಂತಹ ನೀಚರನ್ನ ಕೂಡಲೇ ಬಂಧಿಸಿ ಸಂಬಂಧ ಪಟ್ಟ ವೆಬ್ ಸೈಟ್ ಮತ್ತು ಫೇಸ್ಬುಕ್ ಪೇಜ್ ಗಳನ್ನು ಡಿಲೀಟ್ ಮಾಡಿ ಕಾನೂನು ಕ್ರಮ ಕೈಗೊಳ್ಳದಿದ್ದರೆ ಮುಂದೆ ಸಮಾಜದಲ್ಲಿ ಶಾಂತಿ ಕದಡುವ ಇಂತಹ ಪೋಸ್ಟ್ ಗಳು ಮುಂದುವರೆಯುತ್ತವೆ..

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top