fbpx
ಮನೋರಂಜನೆ

ಮದುವೆಯ ನಂತರ ರಾಧಿಕಾ ಪಂಡಿತ್ ಮೊದಲ ಸಿನಿಮಾ ನಾಳೆಯಿಂದ ಶುರು..!

ಮದುವೆಯ ನಂತರ ರಾಧಿಕಾ ಪಂಡಿತ್ ಮೊದಲ ಸಿನಿಮಾ ನಾಳೆಯಿಂದ ಶುರು..!

 

 

 

ರಾಧಿಕಾ ಪಂಡಿತ್ ಮದುವೆಯ ನಂತರ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿರಲಿಲ್ಲ ಸಂತು ಸ್ಟ್ರೇಟ್ ಫಾರ್ವಾರ್ಡ್ ಅವರ ಕೊನೆಯ ಚಿತ್ರವಾಗಿತ್ತು.ಯಶ್ ರೊಂದಿಗೆ ಮದುವೆಯಾದ ಬಳಿಕ ರಾಧಿಕಾ ಪಂಡಿತ್ ಸಿನೆಮಾದಲ್ಲಿ ನಟಿಸುತ್ತಾರೋ ಇಲ್ಲವೋ ಎಂಬ ಅನುಮಾನಗಳು ಅವರ ಅಭಿಮಾನಿಗಳನ್ನು ಕಾಡುತ್ತಿತ್ತು. ಕೆಲವು ದಿನಗಳ ಹಿಂದೆ ರಾಧಿಕಾ ಪಂಡಿತ್ ನಿರೂಪ್ ಭಂಡಾರಿ ಜೊತೆ ಸಿನಿಮಾವೊಂದನ್ನ ಮಾಡುತ್ತಾರೆ ಎಂದು ಸುದ್ದಿಯಾಗಿತ್ತು ಈಗ ಆ ಸಿನಿಮಾ ಸೆಟ್ಟೇರಲು ಸಜ್ಜಾಗಿದೆ.

 

 

ರಾಕ್’ಲೈನ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ನಾಳೆ (ಡಿಸೇಂಬರ್ 01)ಮುಹೂರ್ತ ನಡೆಯಲಿದೆ. ಇನ್ನೂ ಹೆಸರಿಡದ ಈ ಚಿತ್ರದ ಚಿತ್ರಕಥೆ ರಾಧಿಕಾ ಪಂಡಿತ್ ಬಹಳ ಇಷ್ಟವಾಗಿದ್ದು ಈ ಚಿತ್ರದಲ್ಲಿ ನಟಿಸಲು ಒಪ್ಪಿಗೆ ಕೊಟ್ಟಿದ್ದಾರೆ. ತಮಿಳಿನ ಪ್ರಸಿದ್ಧ ನಿರ್ದೇಶಕರಾದ ಮಣಿರತ್ನಂ ಅವರ ಜೊತೆ ಕೆಲಸ ಮಾಡಿದ ಅನುಭವವಿರುವ ನಿರ್ದೇಶಕಿ ಪ್ರಿಯಾ ಅವ್ರು ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದು, ಕನ್ನಡಿಗ ರಾಕ್ ಲೈನ್ ವೆಂಕಟೇಶ್ ಈ ಚಿತ್ರಕ್ಕೆ ಬಂಡವಾಳವನ್ನು ಹೂಡುತ್ತಿದ್ದಾರೆ.

 

ಈ ಚಿತ್ರದಲ್ಲಿ ನಟಿಸಲು ಒಪ್ಪಿಗೆ ಕೊಟ್ಟಿದ್ದಾರೆ. ತಮಿಳಿನ ಪ್ರಸಿದ್ಧ ನಿರ್ದೇಶಕರಾದ ಮಣಿರತ್ನಂ ಅವರ ಜೊತೆ ಕೆಲಸ ಮಾಡಿದ ಅನುಭವವಿರುವ ನಿರ್ದೇಶಕಿ ಪ್ರಿಯಾ ಅವ್ರು ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದು, ಕನ್ನಡಿಗ ರಾಕ್ ಲೈನ್ ವೆಂಕಟೇಶ್ ಈ ಚಿತ್ರಕ್ಕೆ ಬಂಡವಾಳವನ್ನು ಹೂಡಲಿದ್ದಾರೆ. ಚಿತ್ರದಲ್ಲಿ ನಾಯಕನ ಪಾತ್ರವನ್ನು ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ ಮಾಡುತ್ತಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ತಾರಾ ಮತ್ತು ಸುಚೇಂದ್ರ ಕುಮಾರ್ ನಟಿಸಲಿದ್ದಾರೆ. ಡಿಸೆಂಬರ್ 11ರಿಂದ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top