fbpx
ಕಿರುತೆರೆ

ಒಂದೇ ದಿನ ಜಗನ್, ಆಶಿತಾ ಮತ್ತು ಅನುಪಮಾ ಬಂಡವಾಳವನ್ನು ಬಟಾಬಯಲು ಮಾಡಿದ ಬಿಗ್’ಬಾಸ್.

ಒಂದೇ ದಿನ ಜಗನ್, ಆಶಿತಾ ಮತ್ತು ಅನುಪಮಾ ಬಂಡವಾಳವನ್ನು ಬಟಾಬಯಲು ಮಾಡಿದ ಬಿಗ್’ಬಾಸ್.

 

 

ನಿನ್ನೆಯ ಬಿಗ್‌ಬಾಸ್ ಸಂಚಿಕೆಯಲ್ಲಿ ಚರ್ಚೆಗೆ ಗ್ರಾಸವಾದ ವಿಷಯ ಜಗನ್, ಆಶಿತಾ ಮತ್ತು ಅನುಪಮಾ ರ ಬಂಡವಾಳವನ್ನು ಒಂದೇ ದಿನ ಬಯಲಾಗಿದ್ದು. ನಿನ್ನೆ ಆಧುನಿಕ ನಗರದ ಜೀವನ ಶೈಲಿಯನ್ನು ಪರಿಚಯಿಸುವ ಉದ್ದೇಶದಿಂದ, ‘ಬಿಗ್ ಬಾಸ್ ನಗರ’ ಲಕ್ಸುರಿ ಬಜೆಟ್ ಟಾಸ್ಕ್ ನೀಡಲಾಗಿತ್ತು.ಇದರಂತೆ ಮನೆಯ ಭಾಗಗಳಿಗೆ ವಿವಿಧ ಏರಿಯಾಗಳ ಹೆಸರಿಡಲಾಗಿದೆ. ಟ್ಯಾಕ್ಸಿಯಲ್ಲಿ ಹೋಗುವುದಕ್ಕೆ ದುಡ್ಡು ಕೊಡಬೇಕಿತ್ತು. ಹಾಗು ಊಟಗಳನ್ನು ಕ್ಯಾಂಟೀನ್ ನಲ್ಲಿ ಹಣ ಕೊಟ್ಟು ಖರೀದಿಸಬೇಕಾಗಿತ್ತು. ಇನ್ನು ‘ಬಿಗ್ ಬಾಸ್’ ಮನೆಯಲ್ಲಿ ಕನ್ ಫೆಷನ್ ರೂಂ ಕಪಾಲಿ ಥಿಯೇಟರ್ ಆಗಿದ್ದು ಟಾಸ್ಕ್‌ ಅನ್ವಯ ಹಣ ಕೊಟ್ಟು ಚಿತ್ರ ವೀಕ್ಷಣೆ ಮಾಡಬೇಕಿತ್ತು.

 

 

ಮುಂಗಡವಾಗಿ ಹಣ ಪಾವತಿಸಿ ಟಿಕೆಟ್ ಕಾಯ್ದಿರಿಸಿಕೊಂಡಿದ್ದ ಜಗನ್ನಾಥ್, ಅನುಪಮಾ ಮತ್ತು ಆಶಿತಾ ಕನ್ಫೆಷನ್ ರೂಮ್ ನಲ್ಲಿ ಕೂತು ಬಿಗ್ ಬಾಸ್ ಸಿನಿಮಾವನ್ನು ವೀಕ್ಷಿಸಿದ್ದಾರೆ. ಈ ಮೂವರಲ್ಲಿ ಮೊದಲು ಸಿನಿಮಾ ನೋಡಿದ ಜಗನ್ ಸಿನಿಮಾ ನೋಡಿದ ನಂತರ ಕಕ್ಕಾಬಿಕ್ಕಿಯಾದರು.ಜಗನ್ ಗೆ ಅನುಪಮಾ ಹಾಗೂ ಜಗನ್ ಹಿಂದಿನ ಸಂಬಂಧ ಕುರಿತು ಅನುಪಮಾರವರು ತೇಜಸ್ವಿನಿ ಅವರೊಂದಿಗೆ ಮಾತಾನಾಡಿದ ವೀಡಿಯೋ, ಜಗನ್ ಮತ್ತು ಆಶಿತಾ ನಡುವಿನ ಸಂಭದದ ಬಗ್ಗೆ ಕೃಷಿತಾಪಂಡ ರವರು ಸುದೀಪ್ ಬಳಿ ಹೇಳಿರುವ ವಿಡಿಯೋವನ್ನು ತೋರಿಸಲಾಯಿತು. ಇದೇ ರೀತಿ ತಮಗೆ ಸಂಬಂಧಿಸಿದಂತೆ ಮನೆಯಲ್ಲಿ ಸದಸ್ಯರು ಮಾತಾಡಿಕೊಂಡಿದ್ದನ್ನು ಜಗನ್ ಗೆ ತೋರಿಸಲಾಯಿತು.

 

 

ನಂತರ ಸಿನಿಮಾ ನೋಡಲು ಹೋದ ಅಶಿತಾಗೆ ಆಶಿತಾ ಜಗನ್ ಗೆ ಮುತ್ತು ಕೊಡುವ ದೃಶ್ಯ, ಆಶಿತಾ ಹಾಗೂ ಜಗನ್ ರವರು ಅನ್ಯೋನ್ಯವಾಗಿರುವ ವಿಡಿಯೊಗಳನ್ನ ತೋರಿಸಲಾಯಿತು..ಆಶಿತಾ ಅವರು ಬಿಗ್’ಬಾಸ್ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದರೆಂದೆನಿಸಿತು.ಮುಖದಲ್ಲಿ ಯಾವ ಅಸಮಾಧಾನದ ಗೆರೆಗಳು ಕಾಣಿಸಲಿಲ್ಲ..ಆಶಿತಾಗೆ ಬಿಗ್‌ಬಾಸ್ ಆಟವೇ ಅರ್ಥವಾಗಿಲ್ಲ, ಇನ್ನು ಆ ವಿಡಿಯೋ ತೋರಿಸಿದ್ದು ಅರ್ಥವಾಗದೆ ಇರೋದು ವಿಪರ್ಯಾಸ.

 

 

ಕೊನೆಯದಾಗಿ ಸಿನಿಮಾ ನೋಡಲು ಖುಷಿಯಿಂದ ಬಂದ ಅನುಪಮಾ ಅವರಿಗೆ ಆಶಿತಾ ಹಾಗೂ ಜಗನ್ ರವರು ಅನುಪಮಾ ಬಗ್ಗೆ ಮಾತನಾಡಿಕೊಂಡಿರುವ ವೀಡಿಯೋ, ಆಶಿತಾ ಜಗನ್ ಗೆ ಮುತ್ತು ಕೊಡುವ ದೃಶ್ಯ ಇದೇ ರೀತಿ ತಮಗೆ ಸಂಬಂಧಿಸಿದಂತೆ ಮನೆಯಲ್ಲಿ ಸದಸ್ಯರು ಮಾತಾಡಿಕೊಂಡಿದ್ದನ್ನು ಅನುಪಮಾಗೆ ತೋರಿಸಲಾಯಿತು.

 

 

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಈ ತ್ರಿಕೋನ ಪ್ರೇಮಕಥೆಗೆ ಬಿಗ್ ಬಾಸ್ ಸಿನಿಮಾ ತೋರಿಸುವ ಮೂಲಕ ಈ ಮೂವರಿಗೂ ಕನ್ಫ್ಯೂಸ್ ಆಗುವ ರೀತಿ ವಿಡಿಯೋಗಳನ್ನು ಈ ಮೂರ ಜನರ ಕಥೆಯನ್ನೇ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ತೋರಿಸಿ ಮತ್ತಷ್ಟು ವಿಷಯಗಳನ್ನು ಹೊರ ಬರುವಂತೆ ಬಿಗ್ ಬಾಸ್ ಮಾಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top