fbpx
ಸಮಾಚಾರ

ಓಬವ್ವ,ಚನ್ನಮ್ಮ ವಿರುದ್ಧ ಕೀಳು ಪೋಸ್ಟ್‌ ವಿವಾದ: ಸಂಪಾದಕರಿಂದ ಸ್ಪಷ್ಟೀಕರಣ.

ಓಬವ್ವ,ಚನ್ನಮ್ಮ ವಿರುದ್ಧ ಕೀಳು ಪೋಸ್ಟ್‌ ವಿವಾದ: ಸಂಪಾದಕರಿಂದ ಸ್ಪಷ್ಟೀಕರಣ.

 

 

‘ಪದ್ಮಾವತಿ’ ಚಿತ್ರವನ್ನು ವಿರೋಧಿಸುವ ಭರದಲ್ಲಿ ಬಿಜೆಪಿ ಬೆಂಬಲಿಗ ‘ಐ ಸಪೋರ್ಟ್‌ ಪ್ರತಾಪ್‌ ಸಿಂಹ’ , ‘ಐ ಸಪ್ಪೋರ್ಟ್ ಬಿಜೆಪಿ’, ‘ನರೇಂದ್ರ ಮೋದಿ ಫ್ಯಾನ್ಸ್ ಫ್ರಮ್ ಕರುನಾಡು’,’ಪ್ರತಾಪ್ ಸಿಂಹ ಫಾರ್ ಸಿಎಂ’ ಎಂಬ ಫೇಸ್ಬುಕ್ ಪೇಜ್’ಗಳಲ್ಲಿ ರಾಣಿ ಚೆನ್ನಮ್ಮ ಹಾಗೂ ಒನಕೆ ಓಬವ್ವರಿಗೆ ಕೀಳು ಮಟ್ಟದಲ್ಲಿ ಅವಮಾನ ಮಾಡುವ ಮೂಲಕ ಕನ್ನಡಿಗರ ಸ್ವಾಭಿಮಾನಕ್ಕೆ ದಕ್ಕೆ ತರಲಾಗಿತ್ತು.

 

 

ಪದ್ಮಾವತಿ ಚಿತ್ರವನ್ನು ಕನ್ನಡ ಚಿತ್ರರಂಗ ಬೆಂಬಲಿಸಿದ್ದಕ್ಕಾಗಿ ಸ್ಯಾಂಡಲ್ ವುಡ್ ನ ಈ ನಡೆಯನ್ನು ವಿರೋಧಿಸಿ postcardkannada.com ಅಂತರ್ಜಾಲ ತಾಣದವರು ತಮ್ಮ ವೆಬ್’ಸೈಟ್ ನಲ್ಲಿ ಪ್ರಕಟಿಸಿಕೊಂಡಿದ್ದ ಪೋಸ್ಟ್’ಅನ್ನು ‘ಐ ಸಪೋರ್ಟ್‌ ಪ್ರತಾಪ್‌ ಸಿಂಹ’ , ‘ಐ ಸಪ್ಪೋರ್ಟ್ ಬಿಜೆಪಿ’, ‘ನರೇಂದ್ರ ಮೋದಿ ಫ್ಯಾನ್ಸ್ ಫ್ರಮ್ ಕರುನಾಡು’,’ಪ್ರತಾಪ್ ಸಿಂಹ ಫಾರ್ ಸಿಎಂ’ , ಡಮರುಗ’ ಎಂಬ ಫೇಸ್’ಬುಕ್ ಪೇಜ್ ಗಳಲ್ಲಿ ಪೋಸ್ಟ್ ಹಾಕಲಾಗಿತ್ತು “ರಾಣಿ ಚೆನ್ನಮ್ಮ ಬ್ರಿಟಿಷರ ಜೊತೆ ಅನೈತಿಕ ಸಂಭಂದವನ್ನು ಹೊಂದಿದ್ದಳು ಒನಕೆ ಓಬವ್ವ ಹೈದರಾಲಿಯ ಜೊತೆ ಮಂಚ ಹಂಚಿಕೊಂಡಿದ್ದಳು,” ಎಂದು ಹೇಳಿ ಬಳಿಕ, ಕೋಪ ಬಂತಲ್ವಾ? ಎಂದು‌ ಪೋಸ್ಟ್ ಮಾಡಿರುವ ಪ್ರತಾಪ್ ಬೆಂಬಲಿಗರು, ಹಾಗಿದ್ರೆ ಇಂಥ ಕಥೆಗಳ ವಿರುದ್ದ ಕನ್ನಡ ಚಿತ್ರರಂಗಕ್ಕೆ ಕೋಪ ಬರ್ತಿಲ್ವಾ ಎಂದು ಪ್ರಶ್ನಿಸಿದ್ದರು.

 

ಕೃಪೆ: ವಿಶ್ವವಾಣಿ

 

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ವಿವಾದಕ್ಕೆ ಎಡೆಮಾಡಿಕೊಡುವಂತ ಪರಿಸ್ಥಿತಿಯನ್ನು ತಲುಪಿತು. ಉದಾಹರಣೆ ಕೊಡೋ ಭರದಲ್ಲಿ ತೀರಾ ಕೆಳಮಟ್ಟಕ್ಕೆ ಇಳಿದು ನಾಡಿನ ವೀರ ಮಹಿಳೆಯರನ್ನ ಅವಮಾನಿಸಿದ ಈ ಫೇಸ್ಬುಕ್ ಪೇಜ್’ಗಳನ್ನುಹಾಗೂ ಈ ರೀತಿ ಪೋಸ್ಟ್ ಮಾಡಿದ postcardkannada.comನ ಸಂಪಾದಕ, ಲೇಖಕ ಇದಕ್ಕೆ ಸಂಭಂದ ಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಪರ ಹೋರಾಟಗಾರರು ಆಗ್ರಹಿಸುತ್ತಿದ್ದು ವೆಬ್ ಸೈಟ್ ವಿರುದ್ಧ ಪೊಲೀಸ್ ಕಂಪ್ಲೇಟ್ ಕೂಡ ಕೊಡಲಾಗಿತ್ತು.

 

ಈ ರೀತಿ ಪೋಸ್ಟ್ ಹಾಕಿದ್ದ ಪೋಸ್ಟ್ ಕಾರ್ಡ್ ವೆಬ್ ಸೈಟ್ ಗೆ ಸಂಬಂಧ ಪಟ್ಟಿರುವವರೊಬ್ಬರು ‘ನರೇಂದ್ರ ಮೋದಿ ಫ್ಯಾನ್ಸ್ ಫ್ರಮ್ ಕರುನಾಡು’ ಎಂನ ಪೇಜ್ ಮೂಲಕ ಲೈವ್ ಮಾಡಿ ಈ ವಿವಾದದ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಈ ಬಗ್ಗೆ ಆತ ಏನು ಹೇಳಿದ್ದಾನೆ ಎಂದು ಈ ವಿಡಿಯೋದಲ್ಲಿ ನೋಡಿ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top