fbpx
ಕಿರುತೆರೆ

ಹೆಣ್ಮಕ್ಳ ಮೈ ಮುಟ್ಟಿದ್ರಾ ಸಮೀರ್ ಆಚಾರ್ಯ?

ಹೆಣ್ಮಕ್ಳ ಮೈ ಮುಟ್ಟಿದ್ರಾ ಸಮೀರ್ ಆಚಾರ್ಯ?

 

 

ಬಿಗ್‌ಬಾಸ್ ಮನೆಯ ಯಾವ ಮೂಲೆಯಲ್ಲಿ ಅದ್ಯಾವಾಗ ಬೆಂಕಿ ಧಗ್ಗೆನ್ನುತ್ತದೆಂದು ಹೇಳಲು ಬರೋದಿಲ್ಲ. ಅದರಲ್ಲೂ ಜಗನ್‌ನಂಥಾ ದುರಂಹಂಕಾರಿಗಳು ಕಾಲೂರೋ ಕಡೆಗಳಲ್ಲಿ ಸಮಚಿತ್ತದ ವಾತಾವರಣವನ್ನು ನಿರೀಕ್ಷಿಸಲೂ ಸಾಧ್ಯವಿಲ್ಲ. ಸದಾ ಹೆಣ್ಮಕ್ಕಳ ಜೊತೆ ಲಲ್ಲೆ ಹೊಡೆಯುತ್ತಾ, ತನ್ನ ಸೀಮೆಗಿಲ್ಲದ ಮುನಿಸನ್ನು ಅದೇ ಹೆಣ್ಮಕ್ಕಳ ಸಮ್ಮುಖದಲ್ಲೇ ಶಮನ ಮಾಡಿಕೊಳ್ಳೋ ಜಗನ್ ಇದೀಗ ಏಕಾಏಕಿ ಮಹಿಳಾ ಪರವಾದ ಧವನಿ ಎತ್ತಿದ್ದಾನೆ.

 

 

ಬಲೂನ್ ಟಾಸ್ಕಿನಲ್ಲಿ ಎನರ್ಜಿಟಿಕ್ ಆಗಿ ಸ್ಪರ್ಧಿಸಿದ ಸಮೀರ್ ಆಚಾರ್ಯ ವಿರೋಧಿ ಬಣದ ಆಶಿತಾಳ ಮೈ ಮುಟ್ಟಿದರೆಂಬ ಹೊಸಾ ವಿವಾದವೊಂದು ಹೊತ್ತಿಕೊಂಡಿತ್ತು. ಇದರಲ್ಲಿ ಏಕಾಏಕಿ ಮಧ್ಯಪ್ರವೇಶ ಮಾಡಿದ ಜಗನ್ ಸಮೀರ್ ಆಚಾರ್ಯ ಜೊತೆ ಜಗಳ ಮಾಡುತ್ತಲೇ ಏಕ ವಚನ ಪ್ರಯೋಗ ಮಾಡಿ ನಿಂದಿಸಿದ್ದಾನೆ. ತನಗೆ ಹೆಣ್ಮಕ್ಕಳ ಮೈ ಮುಟ್ಟಿದ್ರೆ ಮೈಯೆಲ್ಲಾ ಉರಿಯುತ್ತೆ ಅಂತೆಲ್ಲ ಭಯಂಕರ ಜೋಕು ಸಿಡಿಸಿ ಚೋಟುದ್ದದ ದೇಹದ ಎಲ್ಲಾ ಪಾರ್ಟುಗಳೂ ಅದುರುವಂತೆ ಚೀರಾಡಿದ್ದಾನೆ!

 

 

ವಾರದ ಹಿಂದೆ ಅನಾರೋಗ್ಯಗೊಂಡಿದ್ದ ಸಮೀರ್ ಆಚಾರ್ಯ ನೆತ್ತಿಗೆ ಎಣ್ಣೆ ಸವರಿ ಜುಟ್ಟು ನೀವಿ ಬದಲಾದಂತೆ ತೋರಿಸಿಕೊಂಡಿದ್ದವನು ಜಗನ್. ಆದರೆ ಈ ವಾರ ಅಸಲೀ ದುರಂಹಂಕಾರವನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾನೆ. ತೀರಾ ಆಟದ ವಿಚಾರದಲ್ಲಿ ಮೈ ಕೈ ಟಚ್ ಆಗೋದು ಸಹಜವೇ. ಆದರೆ ಅದನ್ನೇ ದೊಡ್ಡದು ಮಾಡಿ ಸಮೀರ್ ಆಚಾರ್ಯನನ್ನು ಉಮೇಶ್ ರೆಡ್ಡಿ ಎಂಬಂತೆ ಬಿಂಬಿಸಿದ ಜಗನ್ ವಿರುದ್ಧ ಪ್ರೇಕ್ಷಕರಿಗೆ ಅಸಹನೆ ಹುಟ್ಟಿಕೊಂಡಿದ್ದರೆ ಅಚ್ಚರಿಯೇನಿಲ್ಲ.

 

 

ಇದೆಲ್ಲ ಏನೇ ಇದ್ದರೂ ಈ ಸಮೀರ್ ಆಚಾರ್ಯಗೆ ಬಿಗ್‌ಬಾಸ್ ಮನೆಯ ವಾಸ್ತು ಏನೋ ಉಲ್ಟಾ ಹೊಡೆಯುತ್ತಿದೆ. ಯುವಕರಿಗೆ ನಾನಾ ವಿಚಾರಗಳ ಅರಿವು ಮೂಡಿಸಿ ಕ್ರಾಂತಿ ಮಾಡೋ ಇಂಗಿತದಿಂದ ಬಿಗ್‌ಬಾಸ್ ಮನೆ ಸೇರಿಕೊಂಡಿದ್ದ ಸಮೀರ್‌ಗೆ ಹಳಸಿದ ಮಜ್ಜಿಗೆ ಅನ್ನ, ಆಗಾಗ ಹಳಸಿಕೊಳ್ಳೋ ಆಸುಪಾಸಿನವರ ಸ್ನೇಹಗಳೆಲ್ಲ ಭಯಂಕರ ಕ್ವಾಟ್ಲೆ ಕೊಡುತ್ತಿವೆ!

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top