fbpx
ಮನೋರಂಜನೆ

ತನ್ನ ಚಿತ್ರಕ್ಕೆ ಅಡ್ವಾಣಿಯವರಿಂದ ಕ್ಲಾಪ್ ಮಾಡಿಸಿದ ಪ್ರಥಮ್..!

ತನ್ನ ಮುಂದಿನ ಚಿತ್ರಕ್ಕೆ ಅಡ್ವಾಣಿಯವರಿಂದ ಕ್ಲಾಪ್ ಮಾಡಿಸಿದ ಪ್ರಥಮ್..!

 

 

ಬಿಗ್‍ಬಾಸ್ ಕನ್ನಡ ಸೀಸನ್ 4ರ ವಿಜೇತ ಪ್ರಥಮ್ ಬಿಲ್ಡಪ್ ಕೊಡೋದಕ್ಕೆ ಸಕತ್ ಫೇಮಸ್. ಈಗ ಇದೇ ಪ್ರಥಮ್ ಮತ್ತೊಂದು ಬಿಲ್ಡಪ್ ಕೊಡೋಕೆ ರೆಡಿಯಾಗಿದ್ದಾರೆ. ಅದೇನೆಂದ್ರೆ ಅವರು ಹೊಸ ಸಿನಿಮಾವೊಂದನ್ನು ಮಾಡೋಕೆ ರೆಡಿಯಾಗಿದ್ದು ಚಿತ್ರಕ್ಕೆ ‘ಬಿಲ್ಡಪ್’ ಅನ್ನೋ ಹೆಸರೇ ಇಟ್ಟಿದ್ದಾರೆ. ಈ ಚಿತ್ರದ ಶೀರ್ಷಿಕೆಯನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಿಡುಗಡೆ ಮಾಡಿದ್ದಾರೆ..!

 

 

ಈ ಚಿತ್ರಕ್ಕೆ ಇಡೀ ಭಾರತವೇ ಎದ್ದು ನಿಂತು ಗೌರವ ಕೊಡೋ ಸರ್ವೋಚ್ಚ ವ್ಯಕ್ತಿಯೊಬ್ಬರಿಂದ ಕ್ಲ್ಯಾಪ್ ಮಾಡಿಸೋದಾಗಿ ಹೇಳಿಕೊಂಡಿದ್ದ ಪ್ರಥಮ್ ಇತ್ತಿಚಿಗಷ್ಟೇ ಎಲ್ ಕೆ ಅಡ್ವಾಣಿಯವರನ್ನ ಬೇಟಿ ಮಾಡಿ ತಾವೇ ನಿರ್ದೇಶನ ಮಾಡುತ್ತಿರುವ ‘ಬಿಲ್ಡಪ್’ ಚಿತ್ರದ ಕ್ಲಾಪ್ ಬೋರ್ಡ್ಅನ್ನ ಅಡ್ವಾಣಿಯವರಿಗೆ ನೀಡಿ ಅಡ್ವಾಣಿಯವರ ಆರ್ಶೀವಾದವನ್ನ ಪಡೆದುಕೊಂಡಿದ್ದಾರೆ. ಎಲ್ ಕೆ ಅಡ್ವಾಣಿಯವರನ್ನ ಮಾತ್ರವಲ್ಲದೆ ಪ್ರಥಮ್ ಪ್ರಧಾನಮಂತ್ರಿ ಮೋದಿಯವರನ್ನೂ ಭೇಟಿ ಮಾಡಿದ್ದು ಆ ಸ್ಟಿಲ್ ಕೂಡ ಸದ್ಯದಲ್ಲೇ ಬಿಡುಗಡೆ ಮಾಡ್ತಾರಂತೆ.

 

 

ಬಿಲ್ಡಪ್ ಚಿತ್ರಕ್ಕೆ ಉದಯ್ ಮೆಹ್ತಾ ಕತೆ ಬರೆದಿದ್ದು, ಪ್ರಥಮ್ ನಟನೆ ಜೊತೆಗೆ ಆಕ್ಷನ್‌‌ ಕಟ್‌‌ ಹೇಳಲಿದ್ದಾರೆ. ಇನ್ನ ಕೆಲವೇ ದಿನಗಳಲ್ಲಿ ಚಿತ್ರದ ಚಿತ್ರೀಕರಣ ಶುರುವಾಗಲಿದೆ. ವಿಶೇಷವೇನೆಂದರೆ ದೇಶದಲ್ಲೆ ಅತಿ ಹೆಚ್ಚು ಪಾಪ್ಯೂಲರ್ ಆಗಿರೋ ನಟಿ ಪ್ರಥಮ್’ಗೆ ನಾಯಕಿಯಾಗಿ ಸಿನಿಮಾದಲ್ಲಿ ನಟಿಸಲಿದ್ದಾರಂತೆ. ಆದರೆ ಆ ನಟಿ ಯಾರು ಎಂಬ ವಿಷಯವನ್ನು ಸೀಕ್ರೆಟ್’ಆಗಿ ಇಟ್ಟಿದ್ದಾನೆ ಒಳ್ಳೆ ಹುಡುಗ ಪ್ರಥಮ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top