fbpx
ಕಿರುತೆರೆ

ಮನೆಯ ಹೆಣ್ಮಕ್ಕಳಿಗೆ ಉಡುಗೊರೆ ನೀಡಿ ವೀಕ್ಷಕರ ಮನಗೆದ್ದ ರಿಯಾಜ್..!

ಮನೆಯ ಹೆಣ್ಮಕ್ಕಳಿಗೆ ಉಡುಗೊರೆ ನೀಡಿ ವೀಕ್ಷಕರ ಮನಗೆದ್ದ ರಿಯಾಜ್..!

 

 

ಆಧುನಿಕ ನಗರದ ಜೀವನ ಶೈಲಿಯನ್ನು ಪರಿಚಯಿಸುವ ಉದ್ದೇಶದಿಂದ, ಈ ವಾರ ‘ಬಿಗ್ ಬಾಸ್ ನಗರ’ ಲಕ್ಸುರಿ ಬಜೆಟ್ ಟಾಸ್ಕ್ ನೀಡಲಾಗಿತ್ತು.ಇದರಂತೆ ಮನೆಯ ಭಾಗಗಳಿಗೆ ವಿವಿಧ ಏರಿಯಾಗಳ ಹೆಸರಿಡಲಾಗಿದೆ. ಜಯಶ್ರಿನಿವಾಸನ್, ಜಗನ್ ಟ್ಯಾಕ್ಸಿ ಡ್ರೈವರ್ ಗಳಾಗಿದ್ದು, ಚಂದ್ರು, ಸಮೀರಾಚಾರ್ಯ, ಕ್ಯಾಂಟೀನ್ ಮಾಲೀಕರಾಗಿದ್ದಾರೆ. ಉಳಿದಂತೆ ಆಶಿತಾ,ಜೆಕೆ, ನಿವೇದಿತಾ, ಶ್ರುತಿ, ಅನುಪಮಾ, ದಿವಾಕರ್, ಚಂದನ್ ನಾಗರಿಕರಾಗಿದ್ದಾರೆ. ರಿಯಾಜ್ ಹಾಗೂ ಕೃಷಿ ಅಧಿಕಾರಿಗಳಾಗಿದ್ದರು.

 

 
ಪ್ರತಿ ನಾಗರಿಕರಿಗೆ ತಲಾ 2000 ರೂ. ನೀಡಲಾಗಿದ್ದು ನಾಗರಿಕರು ಮತ್ತು ಕ್ಯಾಂಟೀನ್ ಮಾಲೀಕರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವಾಗ, ಟ್ಯಾಕ್ಸಿಯಲ್ಲಿಯೇ ಹೋಗಬೇಕಾಗಿತ್ತು ಟ್ಯಾಕ್ಸಿಯಲ್ಲಿ ಹೋಗುವುದಕ್ಕೆ ದುಡ್ಡು ಕೊಡಬೇಕಿತ್ತು. ಹಾಗು ಊಟಗಳನ್ನು ಕ್ಯಾಂಟೀನ್ ನಲ್ಲಿ ಹಣ ಕೊಟ್ಟು ಖರೀದಿಸಬೇಕಾಗಿತ್ತು.
 

 

ಪ್ರಖ್ಯಾತ ಕಡಲೇಕಾಯಿ ಪರುಷೇಯನ್ನು ನೆನ್ನೆ ಬಿಗ್ ಬಾಸ್ ನಗರದಲ್ಲಿ ಆಚರಿಸಲಾಗಿತ್ತು, ನಗರ ಜನರು ಬಂದು ಅಲ್ಲಿ ಶಾಪಿಂಗ್ ಮಾಡಿ ಕಡಲೆಕಾಯಿ, ಆಭರಣಗಳು ಮತ್ತು ಸಾಂಪ್ರದಾಯಿಕ ಸಿಹಿತಿಂಡಿಗಳ ಆಟದ ಸಾಮಾನುಗಳನ್ನು ಕೊಂಡು ಕೊಳ್ಳಬಹುದಿತ್ತು.

 

 

 

ಈ ಜಾತ್ರೆಯಲ್ಲಿ ರಿಯಾಜ್ ಕಿವಿಯೋಲೆಗಳನ್ನು ಖರೀಧಿಸಿ ಐದು ಹೆಣ್ಣು ಮಕ್ಕಳಿಗೆ ಕೊಟ್ಟಾಗ ಎಲ್ಲರ ಕಣ್ಣಂಚಿನಲ್ಲಿ ಕಣ್ಣೀರು ಹಾಗೇ ಬಂದು ಇಂಗಿಹೋಯಿತು.. ಈ ಸಂದರ್ಭ ಭಾವುಕ ಕ್ಷಣಕ್ಕೆ ಮನೆಮಂದಿ ಎಲ್ಲಾ ಸಾಕ್ಷಿಯಾದರು. ಮನೆಯ ಇತರ ಸದಸ್ಯರುಗಳೆಲ್ಲಾ ಕೊಟ್ಟಿರುವ 2000 ರೂಪಾಯಿ ಖರ್ಚಾಗುತ್ತದೆ ಎಂದು ಟಾಸ್ಕ್ ಗೆಲ್ಲೋದರಲ್ಲಿ ಮಗ್ನರಾಗಿದ್ದವರ ನಡುವೆ ಕಿವಿಯೋಲೆಗಳನ್ನು ಖರೀದಿಸಿ ಮನೆಯಲ್ಲಿನ ಮಹಿಳಾ ಸದಸ್ಯರಿಗೆ ಕೊಟ್ಟಿರುವುದು ವೀಕ್ಷಕರ ಮನಸ್ಸನ್ನು ಗೆದ್ದಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top