fbpx
ಬಿಗ್ ಬಾಸ್

ಸೈಕೋ ಬೆಡಗಿಯ ಕೈಲಿ ಎಷ್ಟು ಚಿತ್ರಗಳಿವೆ ಗೊತ್ತಾ?

ಸೈಕೋ ಬೆಡಗಿಯ ಕೈಲಿ ಎಷ್ಟು ಚಿತ್ರಗಳಿವೆ ಗೊತ್ತಾ?

 

 

ಸೈಕೋ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿ ಭರವಸೆ ಮೂಡಿಸಿದ್ದ ನಟಿ ಅನಿತಾ ಭಟ್. ಈ ಚಿತ್ರದಲ್ಲಿ ಅವರ ನಟನೆ ಕಂಡವರು ಈಕೆ ಚಿತ್ರರಂಗದಲ್ಲಿ ನೆಲೆಯೂರೋದು ಗ್ಯಾರಂಟಿ ಅಂದುಕೊಂಡಿದ್ದರಲ್ಲಿ ಅಚ್ಚರಿಯೇನಿಲ್ಲ. ಆದರೆ ಆ ನಂತರ ಸುದೀರ್ಘವಾದೊಂದು ಗ್ಯಾಪ್‌ನಲ್ಲಿ ಕಳೆದು ಹೋದಂತಿದ್ದ ಅನಿತಾ ಭಟ್ ಇದೀಗ ಸಾಲು ಸಾಲು ಚಿತ್ರಗಳ ಮೂಲಕ ಮತ್ತೆ ಎದ್ದು ನಿಂತಿದ್ದಾರೆ. ಅನಿತಾ ಭಟ್ ಕೈಲಿರೋ ಭರಪೂರ ಅವಕಾಶಗಳು ರೀ ಎಂಟ್ರಿ ಅಂದ್ರೆ ಹಿಂಗಿರಬೇಕೆಂಬ ಉದ್ಘಾರ ಎತ್ತುವಂತಿದೆ!

 

 

ಇನ್ನೇನು ತೆರೆ ಕಾಣಲು ಸಜ್ಜಾಗಿರೋ ಶಿವರಾಜ್‌ಕುಮಾರ್ ಅಭಿನಯದ ಟಗರು ಚಿತ್ರದಲ್ಲಿ ಅನಿತಾ ಒಂದೊಳ್ಳೆ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಡೇಸ್ ಆಫ್ ಬೋರಾಪುರ ಚಿತ್ರದಲ್ಲಿಯೂ ಮುಖ್ಯವಾದ, ವಿಶಿಷ್ಟವಾದೊಂದು ಪಾತ್ರದಲ್ಲಿ ಅವರು ನಟಿಸಿದ್ದಾರೆ. ಡಿಎನ್‌ಎ, ಪ್ರಭುತ್ವ, ಪ್ರೀತ್ಸೋರು ಮುಂತಾದ ಅನಿತಾ ಭಟ್ ನಟಿಸಿರೋ ಚಿತ್ರಗಳು ನಿರ್ಮಾಣ ಹಂತದಲ್ಲಿವೆ.

 

 

ಸದ್ಯ ಚಿತ್ರೀಕರಣಗೊಳ್ಳುತ್ತಿರುವ ವೈಶಾಕಿನಿ ಚಿತ್ರದಲ್ಲಿ ಅನಿತಾ ರಾಜಕುಮಾರಿಯ ಪಾತ್ರದಲ್ಲಿ ಮಿಂಚಿದ್ದಾರಂತೆ. ಪುನರ್ಜನ್ಮದ ಶೇಡ್ ಹೊಂದಿರೋ ಈ ಪಾತ್ರದಲ್ಲಿ ಮನಸಾರೆ ಅಭಿನಯಿಸಿದ ಖುಷಿ ಅವರದ್ದು. ಹೀಗೆ ಸಾಲು ಸಾಲು ಚಿತ್ರಗಳ ಮೂಲಕ ಮತ್ತೆ ಎಂಟ್ರಿ ಕೊಟ್ಟಿರೋ ಅನಿತಾ ಭಟ್ ಆ ಎಲ್ಲ ಪಾತ್ರಗಳೂ ತಮ್ಮ ಚಿತ್ರಜೀವನಕ್ಕೆ ಮಹತ್ವದ ಮೈಲಿಗಲ್ಲಾಗಲಿವೆ ಎಂಬ ವಿಶ್ವಾಸದಿಂದಿದ್ದಾರೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top