fbpx
ಮನೋರಂಜನೆ

7ನೇ ವಾರ ಬಿಗ್‌ಬಾಸ್‌ ಮನೆಯಿಂದ ಔಟ್‌ ಆಗಿದ್ದು ಇವರೇ ಸ್ವಾಮೀ..! ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?

7ನೇ ವಾರ ಬಿಗ್‌ಬಾಸ್‌ ಮನೆಯಿಂದ ಔಟ್‌ ಆಗಿದ್ದು ಇವರೇ ಸ್ವಾಮೀ..! ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?

 

 

ಕನ್ನಡ ಅತಿದೊಡ್ಡ ಜನಪ್ರಿಯ ರಿಯಾಲಿಟಿ ಷೋ ಬಿಗ್ ಬಾಸ್ ಕನ್ನಡದ 5ನೇ ಸೀಸನ್’ಗೆ ಎಂಟ್ರಿ ಕೊಟ್ಟಿದ್ದ ಒಟ್ಟು 17 ಮಂದಿ ಪೈಕಿ 11 ಮಂದಿ ಸೆಲೆಬ್ರೆಟಿಗಳು ಹಾಗೂ 6 ಜನಸಾಮಾನ್ಯರು ಸ್ಪರ್ಧಿಗಳಾಗಿ ಮನೆಗೆ ಪ್ರವೇಶ ಪಡೆದಿದ್ದರು. ಆ ಪೈಕಿ ಈಗಾಗಲೇ ಅಧಿಕೃತವಾಗಿ ಮನೆಯ 6 ವಾರಗಳಲ್ಲಿ 5 ಎಲಿಮಿನೇಷನ್ ಆಗಿದ್ದು ಸುಮಾ ರಾಜಕುಮಾರ್, ಮೇಘ,ದಯಾಳ್, ಕೃಷಿ ತಾಪಂಡ ಮತ್ತು ತೇಜಸ್ವಿನಿ ಎಲಿಮಿನೇಷನ್ ಆಗಿದ್ದರು. ಆದರೆ 5ನೆ ವಾರ ಎಲಿಮಿನೇಟ್ ಆಗಿದ್ದ ಕೃಷಿ ತಾಪಂಡ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮತ್ತೆ ಮನೆ ಪ್ರವೇಶ ಪಡೆದಿದ್ದರು.

 

 

 

ಈ ವಾರ ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದ ಬರೋಬ್ಬರಿ 6 ಜನ ಸ್ಪರ್ದಿಗಳ ನಾಮಿನೇಟ್ ಆಗಿದ್ದರು ಆ ಪೈಕಿ ಒಬ್ಬರು ಎಲಿಮಿನೇಟ್ ಆಗಿದ್ದಾರೆ ಆಗಿದ್ದಾರೆ.. ಜಯಶ್ರೀನಿವಾಸನ್,ದಿವಾಕರ್,ಸಮೀರ್,ರಿಯಾಜ್,ಚಂದ್ರು ಮತ್ತು ಕೃಷಿ ನಾಮಿನೇಟ್ ಆಗಿದ್ದರು.

 

 

 

ಬಿಗ್’ಬಾಸ್ ನಿಂದ ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದ ಸಿಹಿ ಕಹಿ ಚಂದ್ರು ಷೋನಿಂದ ಎಲಿಮಿನೇಟ್ ಆಗಿದ್ದಾರೆ. ನಾಮಿನೇಷನ್ ಪ್ರಕ್ರಿಯೆಯಲ್ಲಿ 3 ವೋಟ್’ಗಳೊಂದಿಗೆ ನಾಮಿನೇಟ್’ಆಗಿದ್ದ ಸಿಹಿ ಕಹಿ ಚಂದ್ರು ಅವರು ಸೆಲೆಬ್ರೆಟಿ ಕೋಟಾದಲ್ಲಿ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದಿದ್ದರು. ಈಗ ಎಲಿಮಿನೇಟ್ ಆಗುವ ಮೂಲಕ ಸಿಹಿ ಕಹಿ ಚಂದ್ರು ತಮ್ಮ ಬಿಗ್ ಬಾಸ್ ಜರ್ನಿಯನ್ನು ಏಳು ವಾರಗಳಿಗೆ ಮುಗಿಸಿದ್ದಾರೆ. ಈ ವಾರದ ಎಲಿಮಿನೇಷನ್ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್’ನಲ್ಲಿ ತಿಳಿಸಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top