fbpx
ಮನೋರಂಜನೆ

‘ಚಮಕ್’ ಸಿನಿಮಾಗೆ ಸಾಥ್ ನೀಡಲು ಬರ್ತಿದ್ದಾರೆ ಟಾಲಿವುಡ್’ನ ಈ ಖ್ಯಾತ ನಟ

‘ಚಮಕ್’ ಸಿನಿಮಾಗೆ ಸಾಥ್ ನೀಡಲು ಬರ್ತಿದ್ದಾರೆ ಟಾಲಿವುಡ್’ನ ಈ ಖ್ಯಾತ ನಟ

 

 

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ಒಟ್ಟಾಗಿ ಅಭಿನಯಿಸುತ್ತಿರುವ ಚಮಕ್ ಚಿತ್ರದ ಫಸ್ಟ್ ನೈಟ್ ಟೀಸರ್ ಹಿಟ್ ಆಗಿರುವ ಬೆನ್ನಲ್ಲೇ ಚಿತ್ರದ ಆಡಿಯೋವನ್ನು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದ್ದು ಸೋಮವಾರ ಚಿತ್ರದ ಹಾಡುಗಳು ಲೋಕಾರ್ಪಣೆಗೊಳ್ಳಲಿವೆ. ವಿಶೇಷವೆಂದರೆ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಟಾಲಿವುಡ್ ನ ಖ್ಯಾತ ನಟ ಆಗಮಿಸುತ್ತಿದ್ದಾರೆ.

 

 

‘ಅರ್ಜುನ್ ರೆಡ್ಡಿ’ ಚಿತ್ರದ ಮೂಲಕ ಭಾರಿ ಜನಪ್ರಿಯತೆಯ ಪಡೆದಿರುವ ವಿಜಯ್ ದೇವರಕೊಂಡ ‘ಚಮಕ್’ ಆಡಿಯೋ ಲಾಂಚ್ ಮಾಡಲಿದ್ದಾರೆ. ಆಡಿಯೋ ಲಾಂಚ್ ಕಾರ್ಯಕ್ರಮ ಡಿಸೆಂಬರ್ 4 ರಂದು . ಸಂಜೆ 6 ಗಂಟೆಗೆ ಯಲಹಂಕದ ಇವಿಸು ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿದೆ. ವಿಜಯ್ ಅವರು ನಟನೆಯಲ್ಲಿ ಮೂಡಿಬಂದಿರುವ ಚಿತ್ರದಲ್ಲಿ ಚಮಕ್ ನಲ್ಲಿ ನಾಯಕಿಯಾಗಿರೋ ರಶ್ಮಿಕಾ ಮಂದಣ್ಣ ರವರೇ ನಾಯಕಿಯಾಗಿದ್ದಾರೆ.

 

 

ಚಮಕ್ ಚಿತ್ರವನ್ನು ಸಿಂಪಲ್ ಸುನಿ ನಿರ್ದೇಶನ ಮಾಡುತ್ತಿದ್ದು ಟಿ.ಆರ್ ಚಂದ್ರಶೇಖರ್ ಎಂಬುವವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಜೂಡಾ ಸ್ಯಾಂಡಿರವರ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಚಿತ್ರ ಕ್ರಿಶ್ ಮಸ್ ಮತ್ತು ಹೊಸ ವರ್ಷದ ಪ್ರಯುಕ್ತ ಡಿಸೆಂಬರ್ ಕೊನೆ ವಾರದಲ್ಲಿ ಬಿಡುಗಡೆಯಾಗಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top