fbpx
ಮನೋರಂಜನೆ

ರಾಜರಥ ಚಿತ್ರದ ವಿಶೇಷ ಪಾತ್ರದಲ್ಲಿ ರಾಣಾ ದಗ್ಗುಬಾಟಿ ಮತ್ತು ಪುನೀತ್.

ರಾಜರಥ ಚಿತ್ರದ ವಿಶೇಷ ಪಾತ್ರದಲ್ಲಿ ರಾಣಾ ದಗ್ಗುಬಾಟಿ ಮತ್ತು ಪುನೀತ್.

 

 

ಅನೂಪ್ ಭಂಡಾರಿ ಮತ್ತು ನಿರೂಪ್ ಬಂಡಾರಿ ಸೇರಿ ಮಾಡಿದ್ದ ಚಿತ್ರ ರಂಗಿತರಂಗ ನಿರೀಕ್ಷೆಗೂ ಮೀರಿ ಯಶಸ್ಸನ್ನ ಗಳಿಸಿತ್ತು. ಭಂಡಾರಿ ಸಹೋದರರ ಮುಂದಿನ ಚಿತ್ರ ರಾಜರಥ ಬಿಡುಗಡೆಗೆ ಸಿದ್ದವಾಗಿದ್ದು ಚಿತ್ರದ ಮೇಲೆ ಬಾರಿ ನಿರೀಕ್ಷೆ ಹುಟ್ಟಿಕೊಂಡಿದೆ. ಚಿತ್ರ ಮುಂದಿನ ಗಣರಾಜ್ಯೋತ್ಸವದ ಪ್ರಯುಕ್ತ ಜನವರಿ 25ನೇ ತಾರೀಕಿನಂದು ದೇಶಾದ್ಯಂತ ತೆರೆಗೆ ಬರುತ್ತಿದೆ..

 

 

ಚಿತ್ರದಲ್ಲಿ ತಮಿಳಿನ ಖ್ಯಾತ ನಟ ಆರ್ಯ ನಟಿಸುತ್ತಿರುವ ವಿಷಯ ಈಗ ಹಳೆಯ ಮಾತು, ಸಿನಿಮಾದ ಮುಖ್ಯ ಪಾತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ತೆಲುಗಿನ ರಾಣಾ ದಗ್ಗುಬಾಟಿ ನಟಿಸಿದ್ದಾರಂತೆ. ಈಗಾಗಲೇ ಅವರ ಪಾತ್ರಗಳ ಚಿತ್ರೀಕರಣ ಮುಗಿದಿದ್ದು ಪಾತ್ರದ ಬಗ್ಗೆ ಯಾವ ವಿಷಯವನ್ನು ರಿವೀಲ್ ಮಾಡದಿರುವ ನಿರ್ದೇಶಕರು ರಾಜರಥ ಚಿತ್ರದಲ್ಲಿ ಪುನೀತ್ ಮತ್ತು ರಾಣಾ ಯಾವ ಪಾತ್ರವನ್ನು ಮಾಡಲಿದ್ದಾರೆ ಎಂದು ಟ್ರೈಲರ್ ನಲ್ಲಿ ತಿಳಿಸಲಿದ್ದೇವೆ ಎಂದು ನಿರ್ದೇಶಕ ಅನೂಪ್ ಭಂಡಾರಿ ತಿಳಿಸಿದ್ದಾರೆ.

 

 

ಅಂದಹಾಗೆ ‘ರಾಜರಥ’ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಮೂಡಿಬಂದಿದ್ದು ಅನೂಪ್ ಭಂಡಾರಿ ನಿರ್ದೇಶಿದ್ದಾರೆ. ಚಿತ್ರದಲ್ಲಿ ನಿರೂಪ್ ಭಂಡಾರಿ ಮತ್ತು ಅವಂತಿಕ ಶೆಟ್ಟಿ ನಾಯಕ ನಾಯಕಿರಾಗಿ ಕಾಣಿಸಿಕೊಂಡಿದ್ದು ರವಿಶಂಕರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳಿನ ಖ್ಯಾತ ನಟ ಆರ್ಯ ಜೊತೆ ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಕೂಡ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top