fbpx
ಭವಿಷ್ಯ

ಡಿಸೆಂಬರ್ 03 : ನಿತ್ಯಭವಿಷ್ಯ ಮತ್ತೆ ಪಂಚಾಂಗ

ಭಾನುವಾರ, ೦೩ ಡಿಸೆಂಬರ್ ೨೦೧೭

ಸೂರ್ಯೋದಯ : ೦೬:೩೦
ಸೂರ್ಯಾಸ್ತ : ೧೭:೪೮
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಮಾರ್ಗಶಿರ
ಪಕ್ಷ : ಶುಕ್ಲ ಪಕ್ಷ
ತಿಥಿ : ಹುಣ್ಣಿಮೆ
ನಕ್ಷತ್ರ : ಕೃತ್ತಿಕ
ಯೋಗ : ಶಿವ
ಪ್ರಥಮ ಕರಣ : ವಿಷ್ಟಿ
ಸೂರ್ಯ ರಾಶಿ : ವೃಶ್ಚಿಕ
ಅಭಿಜಿತ್ ಮುಹುರ್ತ : ೧೧:೪೬ – ೧೨:೩೨
ಅಮೃತಕಾಲ : ೦೭:೧೪ – ೦೮:೩೯
ಅಮೃತಕಾಲ : ೨೭:೩೪+ – ೨೮:೫೮+
ರಾಹು ಕಾಲ: ೧೬:೨೩ – ೧೭:೪೮
ಗುಳಿಕ ಕಾಲ: ೧೪:೫೮ – ೧೬:೨೩
ಯಮಗಂಡ: ೧೨:೦೯ – ೧೩:೩೪

 

ಮೇಷ (Mesha)

ಈದಿನ ಆಶಾವಾದದಿಂದ ಇರುವ ದಿನ. ನಿಮ್ಮ ಎಲ್ಲ ಧನಾತ್ಮಕ ಚಿಂತನೆಗಳು ಒಂದುಗೂಡುವುದರಿಂದ ಶುಭವಾರ್ತೆಯನ್ನು ಕೇಳುವಿರಿ. ಅದರಿಂದ ಸಂತಸವಾಗುವುದು.

 

 

ವೃಷಭ (Vrushabha)

ವೃತ್ತಿ ಪರರಿಗೆ ವಿಶ್ರಾಂತಿ ಲಭಿಸುತ್ತದೆ. ಬಂಧುಮಿತ್ರರಿಂದ ವಿಮರ್ಶೆ, ಟೀಕೆಗಳು ಬರುವ ಸಾಧ್ಯತೆ. ಸಹೋದರನಿಂದ ಸಹಕಾರ ದೊರೆಯುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

 

ಮಿಥುನ (Mithuna)

ಬರವಣಿಗೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರಿಗೆ ವಿಶೇಷ ಗೌರವ ಲಭಿಸುವುದು. ಕೆಲವರಿಗೆ ಕಚೇರಿಯಲ್ಲಿ ಕೆಲಸದ ಒತ್ತಡ ಹೆಚ್ಚಾಗುವುದು. ತಾಳ್ಮೆಯಿಂದ ಪರಿಸ್ಥಿತಿಯನ್ನು ಎದುರಿಸಿರಿ.

 

ಕರ್ಕ (Karka)

ಆಸ್ತಿ ವಿಚಾರದಲ್ಲಿ ಇದ್ದ ಸಮಸ್ಯೆಗಳು ಅಚ್ಚರಿ ಎಂಬಂತೆ ಬಗೆಹರಿಯುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಿದ್ದು ನಿಮ್ಮ ಮಾತಿಗೆ ಎಲ್ಲೆಡೆ ಗೌರವ ದೊರೆಯುವುದು.

 

ಸಿಂಹ (Simha)

ನಿಮ್ಮ ದೌರ್ಬಲ್ಯ ಎಂದರೆ ಅತಿ ಮುಂಗೋಪ. ಸಿಟ್ಟಿನಿಂದ ಕೆಲವು ಅವಕಾಶಗಳನ್ನು ಕಳೆದುಕೊಳ್ಳುವಿರಿ. ನಿಮ್ಮನ್ನು ಪ್ರಚೋದಿಸುವ ಅಥವಾ ಕೆರಳಿಸುವ ಹಲವು ವಿದ್ಯಮಾನಗಳು ನಡೆಯುವುದು. ಯಾವುದಕ್ಕೂ ಪ್ರತಿಕ್ರಿಯಿಸದೆ ಇರಿ

 

ಕನ್ಯಾರಾಶಿ (Kanya)

ಖರ್ಚುವೆಚ್ಚಗಳು ಹೆಚ್ಚಾಗಲಿವೆ. ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ. ಷೇರು ವಹಿವಾಟುದಾರರಿಗೆ ಶುಭಯೋಗ. ಉದ್ಯೋಗದಲ್ಲಿ ಕಿರಿಕಿರಿ. ಬಂಧುಮಿತ್ರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಒಳ್ಳೆಯದು. ಉತ್ತಮ ಆರೋಗ್ಯ.

 

ತುಲಾ (Tula)

ಭರವಸೆಯ ವ್ಯವಹಾರದ ಅವಕಾಶವೊಂದರಿಂದ ಉತ್ತೇಜಿತರಾಗುವಿರಿ. ಇಂದಿನ ದಿನವನ್ನು ಸಂತೋಷದಿಂದ ಕಳೆಯುವಿರಿ. ಈ ದಿನ ಸರಿಯಾದ ಸಮಯಕ್ಕೆ ಭೋಜನ ಸ್ವೀಕರಿಸಲು ಕೆಲಸದ ಒತ್ತಡವಿರುತ್ತದೆ. ಊಟದಲ್ಲಿ ರುಚಿ ಕಾಣದೆ ಇರುವುದು.

 

ವೃಶ್ಚಿಕ (Vrushchika)

ಆರೋಗ್ಯದಲ್ಲಿ ಚೇತರಿಕೆ ಕಂಡುಬಂದು ಮನಸು ಉಲ್ಲಾಸದಿಂದುರುವುದು. ಸಜ್ಜನರ ಸಹವಾಸ, ಸರ್ವರಿಂದ ಮನ್ನಣೆಗಳು ಉಂಟಾಗುವುದು. ನಾನಾ ಮೂಲಗಳಿಂದ ಹಣಕಾಸು ಹರಿದು ಬರುವುದು. ಸ್ನೇಹಿತರ ಸಹಕಾರ ದೊರೆಯುವುದು.

 

ಧನು ರಾಶಿ (Dhanu)

ಮ್ಮ ಧೋರಣೆಯಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರುವುದು. ಕೌಟುಂಬಿಕ ಸದಸ್ಯರ ಬೆಂಬಲ ದೊರೆಯುವುದು. ಸ್ನೇಹಿತರು ಬಂಧುಗಳು ಸಕಾಲದಲ್ಲಿ ನೆರವು ನೀಡುವರು.

 

ಮಕರ (Makara)

ಜಗತ್ತಿನ ಎಲ್ಲ ವೈಭವಗಳು ನಿಮ್ಮಲಿವೆ ಎಂದು ಭಾವಿಸುವಿರಿ. ಗುರುವಿನ ಕೃಪೆಯಿಂದ ಅಂತಃಶಕ್ತಿಯನ್ನು ಗಳಿಸುವ ನಿಮ್ಮ ಮುಖದಲ್ಲಿ ತೇಜಸ್ಸು ಹೊರಹೊಮ್ಮುವುದು. ಸಂಗಾತಿಯ ಸಾಂಗತ್ಯ ಮುದ ನೀಡುವುದು.

 

ಕುಂಭರಾಶಿ (Kumbha)

ನೀವು ಹೋಗುತ್ತಿರುವ ದಾರಿ ಸರಿಯಾದುದೇ. ಆದರೆ ನಿಮ್ಮ ಸಂಗಡ ಇತರರನ್ನು ಕರೆದುಕೊಂಡು ಹೋಗಬೇಕೆನ್ನುವ ನಿಮ್ಮ ಜಾಣ್ಮೆ ಮೆಚ್ಚುವಂತಹದು. ಈ ಬಗ್ಗೆ ಸಮಾಜದಲ್ಲಿ ಗೌರವಿಸಲ್ಪಡುವಿರಿ. ಹಣಕಾಸು ಸ್ಥಿತಿ ಉತ್ತಮ.

 

ಮೀನರಾಶಿ (Meena)

ಯಾರೊಂದಿಗೂ ಇಂದು ಅಸಮಾಧಾನ ವ್ಯಕ್ತಪಡಿಸುವುದು ಒಳ್ಳೆಯದಲ್ಲ. ಇನ್ನೊಬ್ಬರ ವಿಷಯದಲ್ಲಿ ಮೂಗು ತೂರಿಸದಿರಿ. ವೈಯಕ್ತಿಕ ಕಾರ್ಯಕಲಾಪಗಳಲ್ಲಿ ಯಶಸ್ಸು ದೊರೆಯುವುದು. ಮಕ್ಕಳ ಪ್ರಗತಿ ತುಸು ನೆಮ್ಮದಿ ನೀಡುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top