fbpx
ಕಿರುತೆರೆ

‘ ಉದಯ ಸಿಂಗರ್‌ ಜ್ಯೂನಿಯರ್ ‘ ಈ ಕಾರ್ಯಕ್ರಮಕ್ಕೆ ನಾನು ಬರೀ ಅಲಂಕಾರ -ಕ್ರೇಜಿ ಸ್ಟಾರ್ ರವಿಚಂದ್ರನ್

 

 

ಕಲರ್ಸ್ ಕನ್ನಡ ಚಾನಲ್‌ನ “ಡ್ಯಾನ್ಸಿಂಗ್‌ ಸ್ಟಾರ್‌’ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿದ್ದ ರವಿಚಂದ್ರನ್‌, ಉದಯ ಟಿವಿಯಲ್ಲಿ ನವೆಂಬರ್‌ 18ರಿಂದ ಪ್ರಾರಂಭವಾಗಿರುವ “ಉದಯ ಸಿಂಗರ್‌ ಜ್ಯೂನಿಯರ್’ ಸಿಂಗಿಂಗ್ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿದ್ದಾರೆ.

 

 

5 ರಿಂದ 13 ವರ್ಷದ ಮಕ್ಕಳು ಭಾಗವಹಿಸುವ ‘ಉದಯ ಸಿಂಗರ್ ಜೂನಿಯರ್ಸ್’

 

ಸ್ವತಃ ಗೀತಾ ರಚನೆಕಾರ, ಸಂಗೀತ ನಿರ್ದೇಶಕನಾಗಿರುವ ವಿ. ರವಿಚಂದ್ರನ್ ಅವರು ಈ ಕಾರ್ಯಕ್ರಮದ ಮುಖ್ಯ ನಿರ್ಣಾಯಕರಾಗಿದ್ದಾರೆ . ಉಳಿದಂತೆ ಸಂಗೀತ ದಿಗ್ಗಜ ಮನೋ ಎಂದೆ ಪ್ರಖ್ಯಾತಿ ಪಡೆದ ನಾಗೂರು ಬಾಬು ಮತ್ತೊಬ್ಬ ನಿರ್ಣಾಯಕರಾಗಿ ಮತ್ತು ಸಂಗೀತ ರವೀಂದ್ರನಾಥ್ ಕಾರ್ಯಕ್ರಮದ ನಿರೂಪಣೆ ಇದೆ .

 

 

 

 

ಶೋ ಕುರಿತು ಮಾತನಾಡಿರುವ ಕ್ರೇಜಿಸ್ಟಾರ್‌ ರವಿಚಂದ್ರನ್‌, ಈ ಕಾರ್ಯಕ್ರಮಕ್ಕೆ ನಾನು ಬರೀ ಅಲಂಕಾರ. `ನನಗೆ ಸ್ವರದ ಬಗ್ಗೆ ಏನೆಂದರೆ ಏನು ಗೊತ್ತಿಲ್ಲ. ಹಾಗಾಗಿ ಎಡ, ಬಲದಲ್ಲಿ ಸ್ವಲ್ಪ ಸ್ಟ್ರಾಂಗ್ ಆಗಿರುವವರು ಜೊತೆಗಿದ್ದಾರೆ. ಇಲ್ಲಿ ನಾನು ಅಲಂಕಾರ ಅಷ್ಟೇ. ಅವರು ನಿಜವಾದ ತೀರ್ಪು ಕೊಡುತ್ತಾರೆ. ನಾನು ಆಗಾಗ ಉಲ್ಲಾಸ, ಉತ್ಸಾಹ ಕೊಡುವುದರ ಜೊತೆಗೆ ಉದ್ದೇಶ ಹೇಳುತ್ತಾ, ಉಪದೇಶ ಕೊಡುತ್ತಿರುತ್ತೇನೆ’ ಎಂದು ಹೇಳಿದ್ದಾರೆ !

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top